‘ಸಲಾರ್’ ಸಿನಿಮಾ ಒಂದು ವಾರಕ್ಕೆ ಗಳಿಸಿದ್ದೆಷ್ಟು? ಇಲ್ಲಿದೆ ಏಳು ದಿನದ ಲೆಕ್ಕ

|

Updated on: Dec 29, 2023 | 3:03 PM

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಇರುವ ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ವಿಶ್ವ ಮಟ್ಟದಲ್ಲಿ ಈ ಚಿತ್ರ ಇಲ್ಲಿಯವರೆಗೆ 542 ಕೋಟಿ ರೂಪಾಯಿ ಬಾಚಿಕೊಂಡಿದೆ.

‘ಸಲಾರ್’ ಸಿನಿಮಾ ಒಂದು ವಾರಕ್ಕೆ ಗಳಿಸಿದ್ದೆಷ್ಟು? ಇಲ್ಲಿದೆ ಏಳು ದಿನದ ಲೆಕ್ಕ
ಪ್ರಭಾಸ್
Follow us on

ಪ್ರಭಾಸ್, ಪೃಥ್ವಿರಾಜ್​ ಸುಕುಮಾರನ್ ಮೊದಲಾದವರು ನಟಿಸಿರುವ ‘ಸಲಾರ್’ ಸಿನಿಮಾ (Salaar Movie) ರಿಲೀಸ್ ದಿನ ಬಾಕ್ಸ್ ಆಫೀಸ್​ನಲ್ಲಿ ಅಬ್ಬರದ ಗಳಿಕೆ ಮಾಡಿತ್ತು. ದಿನ ಕಳೆದಂತೆ ಈ ಚಿತ್ರದ ಗಳಿಕೆ ಕಡಿಮೆ ಆಗುತ್ತಾ ಬಂದಿದೆ. ಸದ್ಯ ಈ ಚಿತ್ರ ಒಂದು ವಾರಕ್ಕೆ 500+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದಿಂದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ಗೆ ಒಳ್ಳೆಯ ಆಭ ಆಗಿದೆ. ಮುಂದಿನ ದಿನಗಳಲ್ಲಿ ನೆಟ್​ಫ್ಲಿಕ್ಸ್ ಒಟಿಟಿಯಲ್ಲಿ ಈ ಚಿತ್ರ ಪ್ರಸಾರ ಕಾಣಲಿದೆ.

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಇರುವ ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ವಿಶ್ವ ಮಟ್ಟದಲ್ಲಿ ಈ ಚಿತ್ರ ಇಲ್ಲಿಯವರೆಗೆ 542 ಕೋಟಿ ರೂಪಾಯಿ ಬಾಚಿಕೊಂಡಿದೆ. ಕನ್ನಡದಲ್ಲಿ ‘ಕಾಟೇರ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಇದರಿಂದ ‘ಸಲಾರ್’ ಕಲೆಕ್ಷನ್ ಮತ್ತಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಸಲಾರ್​’ ನಟಿ ಶ್ರುತಿ ಹಾಸನ್​ ಗುಟ್ಟಾಗಿ ಮದುವೆ ಆಗಿದ್ದಾರಾ? ಸ್ಪಷ್ಟನೆ ನೀಡಿದ ಕಮಲ್​ ಪುತ್ರಿ

‘ಸಲಾರ್’ ಸಿನಿಮಾದ ಏಳು ದಿನದ ಗಳಿಕೆ

ಡಿಸೆಂಬರ್ 22: 176.52 ಕೋಟಿ ರೂಪಾಯಿ

ಡಿಸೆಂಬರ್ 23: 101.39 ಕೋಟಿ ರೂಪಾಯಿ

ಡಿಸೆಂಬರ್ 24: 95.24 ಕೋಟಿ ರೂಪಾಯಿ

ಡಿಸೆಂಬರ್ 25: 76.91 ಕೋಟಿ ರೂಪಾಯಿ

ಡಿಸೆಂಬರ್ 26: 40.17 ಕೋಟಿ ರೂಪಾಯಿ

ಡಿಸೆಂಬರ್ 27: 31.62 ಕೋಟಿ ರೂಪಾಯಿ

ಡಿಸೆಂಬರ್ 28: 20.78 ಕೋಟಿ ರೂಪಾಯಿ

ಈ ವಾರ ‘ಸಲಾರ್’ ಸಿನಿಮಾ ಉತ್ತಮ ಗಳಿಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಆರಂಭದಲ್ಲಿ ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಈ ಊಹೆ ಸುಳ್ಳಾಗುವ ಸಾಧ್ಯತೆ ಇದೆ.  ಪ್ರಭಾಸ್ ಅವರು ‘ಬಾಹುಬಲಿ 2’ ಬಳಿಕ ಈ ಚಿತ್ರದಿಂದ ಗೆದ್ದು ಬೀಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ