ನಟಿ ಸಮಂತಾ (Samantha) ಕೊನೆಗೂ ತಮ್ಮ ಅತ್ಯಂತ ಬ್ಯುಸಿ ಶೆಡ್ಯೂಲ್ ಮುಗಿಸಿ ಹೈದರಾಬಾದ್ಗೆ ಮರಳಿದ್ದಾರೆ. ಅವರೇ ಹೇಳಿಕೊಂಡಿದ್ದಂತೆ ಕಳೆದ ಆರು ತಿಂಗಳು ಅವರ ಪಾಲಿನ ಅತ್ಯಂತ ಕಷ್ಟದ, ಶ್ರಮದ ಆರು ತಿಂಗಳಾಗಿತ್ತಂತೆ. ಹಾಗೋ ಹೀಗೋ ಕಷ್ಟಪಟ್ಟು ಶೂಟಿಂಗ್ (Shooting) ಮುಗಿಸಿರುವ ಸಮಂತಾ, ಈಗ ಹೈದರಾಬಾದ್ಗೆ ಮರಳಿದ್ದು, ಮುಂದಿನ ಒಂದು ವರ್ಷದ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸರಳವಾದ ಕಪ್ಪು ಬಣ್ಣದ ಟೀ-ಶರ್ಟ್, ಪ್ಯಾಂಟ್ ಧರಿಸಿ ಬಂದ ಸಮಂತಾರ ಕೈಯಲ್ಲಿದ್ದ ಬ್ಯಾಗು ಎಲ್ಲರ ಗಮನ ಸೆಳೆದಿದೆ. ಮೇಲ್ನೋಟಕ್ಕೆ ಸರಳವಾಗಿ ಕಂಡರು ಆ ಬ್ಯಾಗಿನ ಬೆಲೆ ಕೆಲವು ಲಕ್ಷಗಳು. ಸಾಮಾನ್ಯ ಕಾರೊಂದನ್ನು ಖರೀದಿಸಬಹುದಾದ ಬೆಲೆ ತೆತ್ತು ಸಮಂತಾ ಆ ಪುಟ್ಟ ಬ್ಯಾಗು ಖರೀದಿಸಿದ್ದಾರೆ. ಸಮಂತಾ ತೋಳಿನಲ್ಲಿ ತೂಗಾಡುತ್ತಿದ್ದ ಪುಟ್ಟ ಬ್ಯಾಗನ್ನು ತಯಾರಿಸಿದ್ದು ವಿಶ್ವದ ಟಾಪ್ ಬ್ಯಾಗ್ ಕಂಪೆನಿಗಳಲ್ಲಿ ಒಂದಾದ ‘ಚಾನೆಲ್’.
ಚಾನೆಲ್ ಕಂಪೆನಿಯ ಹ್ಯಾಂಡ್ ಬ್ಯಾಗುಗಳ ಬೆಲೆ ಪ್ರಾರಂಭವಾಗುವುದೇ 1 ಲಕ್ಷ ರೂಪಾಯಿಗಳಿಂದ. ಚಾನೆಲ್ನ ದುಬಾರಿ ಬ್ಯಾಗಿನ ಬೆಲೆ ಸುಮಾರು 20 ಲಕ್ಷವನ್ನೂ ದಾಟುತ್ತದೆ. ಸಮಂತಾ ಕೈಯಲ್ಲಿದ್ದಿದ್ದು ಚಾನೆಲ್ನ 5 ಲಕ್ಷ ರೂ ಮೌಲ್ಯದ ಬ್ಯಾಗು ಎನ್ನಲಾಗುತ್ತಿದೆ. ಒಂದು ಹ್ಯಾಚ್ಬ್ಯಾಕ್ ಕಾರು ಖರೀದಿಸಬಹುದಾದ ಬೆಲೆಗೆ ಬ್ಯಾಗು ಕೊಂಡಿದ್ದಾರೆ ಸಮಂತಾ.
ಇದನ್ನೂ ಓದಿ:Samantha: ಮತ್ತೆ ಸಮಂತಾಗೆ ಅನಾರೋಗ್ಯ; ಶೂಟಿಂಗ್ ಬಂದ್ ಮಾಡಿ 1 ವರ್ಷ ಯಾರ ಕೈಗೂ ಸಿಗಲ್ಲ ಸ್ಟಾರ್ ನಟಿ
ದಕ್ಷಿಣ ಭಾರತದ ದುಬಾರಿ ನಟಿಯರಲ್ಲಿ ಒಬ್ಬರಾದ ಸಮಂತಾ ಬಳಿ ಈ ರೀತಿಯ ಹಲವು ದುಬಾರಿ ಬ್ಯಾಗುಗಳಿವೆ. ಉಡುಗೆಗಳಿಗೂ ಭಾರಿ ಮೊತ್ತವನ್ನೇ ಸಮಂತಾ ವ್ಯಯಿಸುತ್ತಾರೆ. ಇತ್ತೀಚೆಗೆ ಇಂಗ್ಲೀಷ್ ಸಿಟಾಡೆಲ್ ಪ್ರೀಮಿಯರ್ನಲ್ಲಿ ಭಾಗವಹಿಸಿದಾಗ ಸಮಂತಾ ತೊಟ್ಟಿದ್ದಿದ್ದು 2 ಲಕ್ಷಕ್ಕೂ ಹೆಚ್ಚು ಬೆಲೆಯ ಉಡುಗೆಯನ್ನು. ಹಲವು ಐಶಾರಾಮಿ ಕಾರುಗಳು, ರಿಯಲ್ ಎಸ್ಟೇಟ್ ಉದ್ಯಮಗಳನ್ನು ಸಹ ಸಮಂತಾ ಹೊಂದಿದ್ದಾರೆ.
ಸತತ ಅನಾರೋಗ್ಯಕ್ಕೆ ಈಡಾಗುತ್ತಿರುವ ಸಮಂತಾ, ಸಿನಿಮಾಗಳಿಂದ ಬಿಡುವು ಪಡೆಯಲು ತೀರ್ಮಾನಿಸಿದ್ದು, ತಮ್ಮ ಆರೋಗ್ಯವನ್ನು ಪರಿಪೂರ್ಣವಾಗಿ ಸುಧಾರಿಸಿಕೊಂಡ ಬಳಿಕವೇ ಸಿನಿಮಾಕ್ಕೆ ಮರಳುವ ಮನಸ್ಸು ಮಾಡಿದಂತಿದೆ. ಆಟೋಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾರಿಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ತಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುವ ಥೆರಪಿಯನ್ನು ಸಮಂತಾ ಮಾಡಿಸಿಕೊಳ್ಳುತ್ತಿದ್ದಾರೆ.
ಸಮಂತಾ ಪ್ರಸ್ತುತ ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಎಲ್ಲವನ್ನೂ ಮುಗಿಸಿದ್ದಾರೆ. ಹಿಂದಿಯ ವೆಬ್ ಸರಣಿ ‘ಸಿಟಾಡೆಲ್’ ನಲ್ಲೂ ಸಮಂತಾ, ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿಸಿದ್ದು ವೆಬ್ ಸರಣಿಯ ಚಿತ್ರೀಕರಣ ಇತ್ತೀಚೆಗಷ್ಟೆ ಮುಗಿಸಿದ್ದಾರೆ. ವೆಬ್ ಸರಣಿ ಬಿಡುಗಡೆ ದಿನಾಂಕವನ್ನು ಇನ್ನಷ್ಟೆ ಘೋಷಣೆ ಮಾಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ