ನಟಿ ಸಮಂತಾ ರುತ್ ಪ್ರಭು ಬಗ್ಗೆ ಹರಿದಾಡೋ ವದಂತಿಗಳು ಒಂದೆರಡಲ್ಲ. ಇತ್ತೀಚೆಗೆ ಅವರಿಗೆ ನೋವಾಗುವಂಥ ಘಟನೆ ಒಂದು ನಡೆಯಿತು. ಅವರ ಮಾಜಿ ಪತಿ ನಾಗ ಚೈತನ್ಯ ಅವರು ಎಂಗೇಜ್ಮೆಂಟ್ ಮಾಡಿಕೊಂಡರು. ಈ ಬೆನ್ನಲ್ಲೇ ಸಮಂತಾ ಬಗ್ಗೆ ಅಪಪ್ರಚಾರ ಮಾಡುವ ಕೆಲಸವೂ ನಡೆದಿದೆ. ಸಮಂತಾ ಅವರು ನಿರ್ದೇಶಕ ರಾಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಇದಕ್ಕೆ ಸಮಂತಾ ಅವರು ಖಡಕ್ ಆಗಿ ಉತ್ತರಿಸಿದ್ದಾರೆ. ಪರೋಕ್ಷವಾಗಿ ಅವರು ಈ ವಿಚಾರದ ಬಗ್ಗೆ ಮಾತನಾಡಿದರೇ ಎನ್ನುವ ಪ್ರಶ್ನೆ ಮೂಡಿದೆ.
ಸಮಂತಾ ಅವರು ಹೂಡಿ ಧರಿಸಿ ಪೋಸ್ ಕೊಟ್ಟಿದ್ದಾರೆ. ಈ ಹೂಡಿ ಮೇಲೆ ಅವರು ‘ಶಾಂತಿ ಸಂಗ್ರಹಾಲಯ’ ಎಂಬರ್ಥ ಬರೋ ಸಾಲುಗಳು ಬರೆದುಕೊಂಡಿದೆ. ಇದನ್ನು ಅನೇಕರು ನಾನಾ ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ. ಯಾರು ಎಷ್ಟೇ ವದಂತಿ ಹಬ್ಬಿಸಿದರೂ ತಾವು ಕೂಲ್ ಆಗಿ ಇರೋದಾಗಿ ಅವರು ಹೇಳಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಪಡೆದಿದ್ದಾರೆ. ಇದರ ಜೊತೆಗೆ ಅವರಿಗೆ ಒಂದಷ್ಟು ವೈರಿಗಳು ಕೂಡ ಹುಟ್ಟಿಕೊಂಡಿದ್ದಾರೆ. ನಾಗ ಚೈತನ್ಯ ಅವರಿಂದ ದೂರಾದ ತಕ್ಷಣ ಅವರನ್ನು ಒಂದಷ್ಟು ಮಂದಿ ದ್ವೇಷಿಸೋಕೆ ಪ್ರಾರಂಭಿಸಿದ್ದಾರೆ. ಈ ದ್ವೇಷದ ಹಿಂದಿನ ಉದ್ದೇಶ ಏನು ಎಂಬುದು ಸಮಂತಾ ಫ್ಯಾನ್ಸ್ಗೆ ಅರ್ಥ ಆಗುತ್ತಿಲ್ಲ. ಸಮಂತಾ ಬಗ್ಗೆ ಅವರು ಇಲ್ಲ-ಸಲ್ಲದ ಆರೋಪ ಹೊರಿಸುತ್ತಾ ಬರುತ್ತಿದ್ದಾರೆ.
ಇದನ್ನೂ ಓದಿ: ನಾಗ ಚೈತನ್ಯ ಅವರಿಂದ ಸಮಂತಾ ಪಡೆದಿದ್ದ ಜೀವನಾಂಶ ಎಷ್ಟು ಕೋಟಿ ರೂಪಾಯಿ?
ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯ ನಿರ್ದೇಶಕ ರಾಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಇದರ ಹಿಂದೆ ಯಾರಿದ್ದಾರೆ? ಈ ವದಂತಿಯನ್ನು ಹಬ್ಬಿಸಿದವರು ಯಾರು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ. ಸಮಂತಾ ಹೆಸರನ್ನು ಹಾಳು ಮಾಡಲು ಯಾರೋ ಮಾಡಿದ ಕುತಂತ್ರ ಇದು ಎಂದು ಅನೇಕರು ಊಹಿಸಿದ್ದಾರೆ. ಸಮಂತಾ ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಇದಕ್ಕಾಗಿ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.