ನಾಗ ಚೈತನ್ಯ ಅವರಿಂದ ಸಮಂತಾ ಪಡೆದಿದ್ದ ಜೀವನಾಂಶ ಎಷ್ಟು ಕೋಟಿ ರೂಪಾಯಿ?
ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು ಕೆಲ ವರ್ಷಗಳಾಗಿವೆ. ಇತ್ತೀಚೆಗಷ್ಟೆ ನಾಗ ಚೈತನ್ಯ, ನಟಿ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಸಮಂತಾಗೆ ದೊರೆತ ಹಣವೆಷ್ಟು?
ದಕ್ಷಿಣದ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ವಿವಾಹವಾದ ನಾಲ್ಕು ವರ್ಷಗಳ ನಂತರ ವಿಚ್ಛೇದನ ಪಡೆದರು. 2017 ರಲ್ಲಿ ಇವರಿಬ್ಬರು ಗೋವಾದಲ್ಲಿ ಬಹಳ ಸಂಭ್ರಮದಿಂದ ವಿವಾಹವಾದರು. 2021ರಲ್ಲಿ ಬೇರೆಯಾಗಲು ನಿರ್ಧರಿಸಿದರು. ಈ ವಿಚ್ಛೇದನದ ನಂತರ ಸಮಂತಾ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಅವರಿಂದಲೇ ಸಂಬಂಧ ಮುರಿದುಬಿದ್ದಿದೆ ಎಂದು ಕೆಲ ನೆಟ್ಟಿಗರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ವಿಚ್ಛೇದನದ ನಂತರ ಪಡೆದ ಜೀವನಾಂಶದ ವಿಚಾರಕ್ಕಾಗಿ ಅನೇಕರು ಸಮಂತಾ ಅವರನ್ನು ಟಾರ್ಗೆಟ್ ಮಾಡಿದ್ದರು. ನಾಗ ಚೈತನ್ಯ ಬಳಿ ಅವರು 200 ಕೋಟಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾತು ಕೇಳಿಬಂದಿತ್ತು. ಈ ಚರ್ಚೆಗಳಿಗೆ ಸ್ವತಃ ಸಮಂತಾ ಪ್ರತಿಕ್ರಿಯೆ ನೀಡಿದ್ದರು.
ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋನಲ್ಲಿ ಕಾಣಿಸಿಕೊಂಡಿದ್ದರು. ನಂತರ ಜೀವನಾಂಶದ ಬಗ್ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಮಂತಾ ವ್ಯಂಗ್ಯವಾಗಿ ಮಾತನಾಡಿದ್ದರು ‘ನಾನು 250 ಕೋಟಿ ರೂಪಾಯಿ ಜೀವನಾಂಶ ತೆಗೆದುಕೊಂಡಿದ್ದೇನೆ. ಹಾಗಾಗಿ ಪ್ರತಿ ದಿನ ಬೆಳಿಗ್ಗೆ ನಾನು ನನ್ನ ಮನೆಯ ಹೊರಗೆ ಆದಾಯ ತೆರಿಗೆ ಅಧಿಕಾರಿಗಳಿಗಾಗಿ ಕಾಯುತ್ತೇನೆ. ಕನಿಷ್ಠ ನಾನು ಆದಾಯ ತೆರಿಗೆ ಅಧಿಕಾರಿಗಳಿಗೆ ಸತ್ಯವನ್ನು ತೋರಿಸಬಲ್ಲೆ’ ಎಂದಿದ್ದರು ಅವರು.
ಇದನ್ನೂ ಓದಿ:ಸಮಂತಾ ಬಗ್ಗೆ ಗಾಸಿಪ್, ಸುದ್ದಿ ನಿಜವೇ ಅಥವಾ ಮಾಜಿ ಪತಿಯ ಅಭಿಮಾನಿಗಳ ಚೇಷ್ಟೆಯೇ?
ಸಮಂತಾಗೆ ವಿಚ್ಛೇದನ ನೀಡಿದ ನಂತರ, ನಾಗ್ ಚೈತನ್ಯ ಅವರ ಹೆಸರು ನಟಿ ಶೋಭಿತಾ ಧುಲಿಪಾಲ್ ಅವರೊಂದಿಗೆ ತಳುಕು ಹಾಕಿಕೊಂಡಿದೆ. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿರಲಿಲ್ಲ. ಆಗಾಗ್ಗೆ ಅವರು ಒಟ್ಟಿಗೆ ಕಾಣಿಸಿಕೊಂಡರು. ಆಗಸ್ಟ್ 8ರಂದು ಶೋಭಿತಾ ಮತ್ತು ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡರು. ನಾಗ್ ಚೈತನ್ಯ ಅವರ ತಂದೆ ಮತ್ತು ದಕ್ಷಿಣದ ಖ್ಯಾತ ನಟ ನಾಗಾರ್ಜುನ ಅವರು ನಿಶ್ಚಿತಾರ್ಥದ ಫೋಟೋಗಳನ್ನು ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಗಾರ್ಜುನ ಅವರು ತಮ್ಮ ಮಗನ ನಿಶ್ಚತಾರ್ಥದ ನಂತರ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ‘ನಿಶ್ಚಿತಾರ್ಥ ಕಾರ್ಯಕ್ರಮವು ತುಂಬಾ ಚೆನ್ನಾಗಿ ನಡೆಯಿತು. ನಾಗ ಚೈತನ್ಯ ಮತ್ತೆ ಖುಷಿ ಪಟ್ಟಿದ್ದಾನೆ. ಅವರು ತುಂಬಾ ಸಂತೋಷವಾಗಿದ್ದಾನೆ. ಅವರನ್ನು ನೋಡಿ ನನಗೆ ಸಂತೋಷವಾಗಿದೆ. ಕಳೆದ. ಸಮಂತಾ ಜೊತೆಗಿನ ವಿಚ್ಛೇದನದ ನಂತರ ಅವನು ತುಂಬಾ ಖಿನ್ನತೆಗೆ ಒಳಗಾಗಿದ್ದ. ನನ್ನ ಮಗ ಅದನ್ನು ತೋರಿಸಲಿಲ್ಲ. ಆದರೆ ಅವನು ಅತೃಪ್ತನಾಗಿದ್ದಾನೆಂದು ನನಗೆ ತಿಳಿದಿತ್ತು. ಶೀಭಿತಾ ಮತ್ತು ಮಗನ ಜೋಡಿ ಚೆನ್ನಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ’ ಎಂದಿದ್ದರು ಅಕ್ಕಿನೇನಿ ನಾಗಾರ್ಜುನ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Thu, 15 August 24