ಹೇಗಿದೆ ಗೊತ್ತಾ ಸೈಫ್ ಅಲಿ ಖಾನ್ ಐಷಾರಾಮಿ ಜೀವನ? ಇಲ್ಲಿದೆ ವಿವರ
ಸೈಫ್ ಅಲಿ ಖಾನ್ ಅವರ ಆಸ್ತಿ ಮೌಲ್ಯ 1200 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕರೀನಾ ಕಪೂರ್ ಆಸ್ತಿ 485 ಕೋಟಿ ರೂಪಾಯಿ. ಇಬ್ಬರ ಆಸ್ತಿ ಸೇರಿದರೆ 1,685 ಕೋಟಿ ರೂಪಾಯಿ ಆಗಲಿದೆ. ಸೈಫ್ ಅಲಿ ಖಾನ್ ಅವರು ವರ್ಷಕ್ಕೆ 30 ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡುತ್ತಾರೆ.
ಸೈಫ್ ಅಲಿ ಖಾನ್ ಅವರು ಬಾಲಿವುಡ್ನ ಶ್ರೀಮಂತ ಹೀರೋಗಳಲ್ಲಿ ಒಬ್ಬರು. ಅವರ ಹೆಸರಲ್ಲಿ ಐಷಾರಾಮಿ ಪಟೌಡಿ ಪ್ಯಾಲೇಸ್ ಇದೆ. ಈ ಪ್ಯಾಲೆಸ್ ಭೋಪಾಲ್ನಲ್ಲಿ ಇದ್ದು 10 ಎಕರೆಗೂ ಅಧಿಕವಾದ ಜಾಗದಲ್ಲಿ ವಿಸ್ತರಿಸಿದೆ. ಇದು ಅವರ ಪ್ರಮುಖ ಪ್ರಾಪರ್ಟಿಗಳಲ್ಲಿ ಒಂದು. ಸೈಫ್ ಶ್ರೀಮಂತ ಕುಟುಂಬದವರು. ಹೀಗಾಗಿ, ಅವರು ರಾಯಲ್ ಜೀವನ ನಡೆಸುತ್ತಿದ್ದಾರೆ. ಅವರಿಗೆ ಇಂದು (ಆಗಸ್ಟ್ 14) ಜನ್ಮದಿನ. ಅವರಿಗೆ ಎಲ್ಲರೂ ಶುಭಕೋರುತ್ತಿದ್ದಾರೆ.
ಸೈಫ್ ಅಲಿ ಖಾನ್ ಅವರು ತಮ್ಮ ಜೀವನದಲ್ಲಿ ‘ದಿಲ್ ಚಾಹ್ತಾ ಹೇ’, ‘ಹಮ್ ಸಾತ್ ಸಾತ್ ಹೇ’, ‘ಕಾಕ್ಟೇಲ್’, ‘ಲವ್ ಆಜ್ ಕಲ್’ ರೀತಿಯ ಸಿನಿಮಾ ನೀಡಿದ್ದಾರೆ. ‘ಸೇಕ್ರೆಡ್ ಗೇಮ್ಸ್’ ರೀತಿಯ ಸೀರಿಸ್ ಮಾಡಿದ್ದಾರೆ. ಅವರು ಸಿಂಗಲ್ ಹೀರೋ ಆಗಿ ನಟಿಸಿದ್ದು ಕಡಿಮೆ. ಹೀರೋ ಆಗಿ ನಟಿಸಿ ಸಿನಿಮಾ ಗೆಲ್ಲಿಸೋ ತಾಕತ್ತು ಅವರಿಗೆ ಇಲ್ಲವಂತೆ. ಇದನ್ನು ಅವರು ಬಲವಾಗಿ ನಂಬುತ್ತಾರೆ. ಅವರು ಬಾಲಿವುಡ್ನ ಎ ಸ್ಟಾರ್ ಹೀರೋಗಳಲ್ಲಿ ಒಬ್ಬರು.
ಸೈಫ್ ಅಲಿ ಖಾನ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಅವರ ಪತ್ನಿ ಶರ್ಮಿಳಾ ಟಾಗೋರ್ ಅವರು ಬಾಲಿವುಡ್ನ ಖ್ಯಾತ ನಟಿಯರು. ಸೈಫ್ ಅಲಿ ಖಾನ್ ಅವರು ಈ ಮೊದಲು ಅಮೃತಾ ಸಿಂಗ್ ಅವರನ್ನು ವಿವಾಹ ಆದರು. ಈ ದಂಪತಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಮ್ ಅಲಿ ಖಾನ್ ಹೆಸರಿನ ಮಕ್ಕಳು ಇದ್ದಾರೆ. ಸದ್ಯ ಸೈಫ್ ಅವರು ಕರೀನಾ ಕಪೂರ್ ಜೊತೆ ಸಂಸಾರ ನಡೆಸುತ್ತಿದ್ದು, ಈ ದಂಪತಿಗೆ ಇಬ್ಬರು ಗಂಡುಮಕ್ಕಳು.
ಸೈಫ್ ಅಲಿ ಖಾನ್ ಅವರ ಆಸ್ತಿ ಮೌಲ್ಯ 1200 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕರೀನಾ ಕಪೂರ್ ಆಸ್ತಿ 485 ಕೋಟಿ ರೂಪಾಯಿ. ಇಬ್ಬರ ಆಸ್ತಿ ಸೇರಿದರೆ 1,685 ಕೋಟಿ ರೂಪಾಯಿ ಆಗಲಿದೆ. ಸೈಫ್ ಅಲಿ ಖಾನ್ ಅವರು ವರ್ಷಕ್ಕೆ 30 ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡುತ್ತಾರೆ. ಸಿನಿಮಾ ಬ್ರ್ಯಾಂಡ್ ಪ್ರಚಾರಗಳಿಂದ ಅವರಿಗೆ ಹಣ ಬರುತ್ತದೆ. ಅವರು ಪ್ರತಿ ಸಿನಿಮಾಗೆ 10-15 ಕೋಟಿ ರೂಪಾಯಿ ಪಡೆಯುತ್ತಾರೆ. ಬ್ರ್ಯಾಂಡ್ಗಳ ಪ್ರಚಾರಕ್ಕೆ ಅವರು 1-5 ಕೋಟಿ ರೂಪಾಯಿ ಪಡೆಯುತ್ತಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಸೈಫ್ ಅಲಿ ಖಾನ್, ‘ದೇವರ’ ಸಿನಿಮಾದಲ್ಲಿ ಆಯ್ತಾ ಅಪಘಾತ?
ಸೈಫ್ ಅಲಿ ಖಾನ್ ಅವರಿಗೆ ಒಟಿಟಿಯಲ್ಲೂ ಗೆಲುವು ಸಿಕ್ಕಿದೆ. ‘ಸೇಕ್ರೆಡ್ ಗೇಮ್ಸ್ ಹಾಗೂ ‘ತಾಂಡವ್’ ಸೀರಿಸ್ಗಳು ಗೆಲುವು ಕಂಡಿವೆ. ಅವರ ಬಳಿ ದುಬಾರಿ ಕಾರುಗಳು ಇವೆ. ಮರ್ಸಿಡೀಸ್ ಬೆಂಜ್ ಎಸ್ ಕ್ಲಾಸ್ ಎಸ್ 350 ಡಿ, ಲ್ಯಾಂಡ್ ರೋವರ್ ಡಿಫೆಂಡರ್ 110, ಆಡಿ ಕ್ಯೂ 7, ಜೀಪ್ ವ್ರ್ಯಾಂಗ್ಲರ್ ಮೊದಲಾದ ಕಾರುಗಳು ಇವರ ಬಳಿ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.