ಸಮಂತಾ ಹಾಗೂ ರಾಜ್ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?

ಸಮಂತಾ ಮತ್ತು ನಿರ್ದೇಶಕ ರಾಜ್ ನಿಧಿಮೋರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಅವರ ನಡುವಿನ ವಯಸ್ಸಿನ ಅಂತರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಮಂತಾ ಇತ್ತೀಚೆಗೆ ರಾಜ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ.

ಸಮಂತಾ ಹಾಗೂ ರಾಜ್ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?
ಸಮಂತಾ-ರಾಜ್

Updated on: May 16, 2025 | 8:39 AM

ನಟಿ ಸಮಂತಾ (Samantha) ಹಾಗೂ ನಿರ್ದೇಶಕ ರಾಜ್ ನಿದಿಮೋರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇಬ್ಬರೂ ಒಟ್ಟಿಗೆ ಇರೋ ಫೋಟೋಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಸಮಂತಾ ಪೋಸ್ಟ್ ಮಾಡುತ್ತಾ ಇದ್ದಾರೆ. ಈ ಮಧ್ಯೆ ಈ ಜೋಡಿಗಳ ಮಧ್ಯೆ ಇರುವ ವಯಸ್ಸಿನ ಅಂತರ ಎಷ್ಟು ಎಂಬುದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದಿವೆ. ಇವರ ಮಧ್ಯೆ ಇರೋ ಏಜ್ ಗ್ಯಾಪ್ ತಿಳಿದು ಅನೇಕರಿಗೆ ಅಚ್ಚರಿ ಆಗಿದೆ.

ಸಮಂತಾ ಅವರು ಈಗಾಗಲೇ ನಾಗ ಚೈತನ್ಯ ಅವರನ್ನು ಮದುವೆ ಆಗಿ ಆ ಬಳಿಕ ವಿಚ್ಛೇದನ ಪಡೆದರು. ಇಬ್ಬರ ಮಧ್ಯೆ ಕೆಲವೇ ತಿಂಗಳ ವಯಸ್ಸಿನ ಅಂತರ ಇತ್ತು. ಅಸಲಿಗೆ ನಾಗ ಚೈತನ್ಯ ಅವರಿಗಿಂತ ಸಮಂತಾ ಅವರೇ ವಯಸ್ಸಿನಲ್ಲಿ ಹಿರಿಯವರಾಗಿದ್ದಾರೆ. ಆದರೆ, ಇವರ ಮಧ್ಯೆ ಹೊಂದಾಣಿಕೆ ಬರದೆ ಇವರು ಬೇರೆ ಆಗಿದ್ದಾರೆ. ನಾಗ ಚೈತನ್ಯ ಈಗಾಗಲೇ ಎರಡನೇ ಮದುವೆ ಆಗಿಯಾಗಿದೆ. ಶೋಭಿತಾ ಧುಲಿಪಾಲ್​ ಅವರನ್ನು ನಾಗ ಚೈತನ್ಯ ವರಿಸಿದ್ದಾರೆ. ಸಮಂತಾ ಹಾಗೂ ರಾಜ್ ಕೂಡ ವಿವಾಹ ಆಗುತ್ತಾರಾ ಎನ್ನುವುದು ಸದ್ಯದ ಪ್ರಶ್ನೆ.

ಸಮಂತಾ ಅವರು ಜನಿಸಿದ್ದು 1987ರ ಏಪ್ರಿಲ್​ನಲ್ಲಿ. ಅವರಿಗೆ ಈಗ 38 ವರ್ಷ. ರಾಜ್ ಅವರಿಗಿಂತ 8 ವರ್ಷ ಹಿರಿಯರು! ಹೌದು, ರಾಜ್​ ಅವರು ಜನಿಸಿದ್ದು 1979ರ ಆಗಸ್ಟ್​ನಲ್ಲಿ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಸಮಂತಾ ತಮಗಿಂತ 8 ವರ್ಷ ಹಿರಿಯವರನ್ನು ವಿವಾಹ ಆಗಲು ಒಪ್ಪಿದ್ದು ಹೇಗೆ ಎನ್ನವ ಪ್ರಶ್ನೆ ಕಾಡಿದೆ.

ಇದನ್ನೂ ಓದಿ
ಕತ್ರಿನಾ ಜೊತೆ ವಿಕ್ಕಿ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಇಲ್ಲಿದೆ ವಿವರ
VIDEO: ಲೈವ್​ಸ್ಟ್ರೀಮ್ ಮಾಡುವಾಗಲೇ ಗುಂಡಿಕ್ಕಿ ಇನ್​ಫ್ಲುಯೆನ್ಸರ್ ಹತ್ಯೆ
‘ನೀವು ಹೇಗೆ ಎಂದು ಎಲ್ಲರಿಗೂ ಗೊತ್ತು’; ಚೈತ್ರಾಗೆ ನೇರವಾಗಿ ಹೇಳಿದ ಅಭಿಮಾನಿ
ಮಾಧುರಿ ದೀಕ್ಷಿತ್ ರಿಯಾಲಿಟಿ ಶೋಗೆ ಪಡೆಯುತ್ತಾರೆ 25 ಕೋಟಿ ರೂಪಾಯಿ

ಅಚ್ಚರಿಯ ವಿಚಾರ ಎಂದರೆ ರಾಜ್ ಅವರಿಗೆ ಈಗಾಗಲೇ ವಿವಾಹ ಆಗಿದೆ. ಶ್ಯಾಮಲಿ ಎಂಬುವವರನ್ನು ರಾಜ್ ಮದುವೆ ಆಗಿದ್ದಾರೆ. ಶ್ಯಾಮಲಿ ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದು, ಎಲ್ಲವನ್ನೂ ಸೂಚ್ಯವಾಗಿ ಬರೆದುಕೊಂಡಿದ್ದಾರೆ. ‘ನನ್ನ ಬಗ್ಗೆ ಯೋಚಿಸುವ ಎಲ್ಲರಿಗೂ ನಾನು ಪ್ರೀತಿ ಮತ್ತು ಹಾರೈಕೆ ಕಳಿಸುತ್ತೇನೆ’ ಎಂದು ಶ್ಯಾಮಲಿ ಪೋಸ್ಟ್ ಮಾಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸಮಂತಾ ಹೊಸ ಪ್ರಿಯಕರನ ಪತ್ನಿಯ ಮಧ್ಯ ಪ್ರವೇಶ; ವೈರಲ್ ಫೋಟೋಗೆ ಕುಹಕ

ರಾಜ್ ಜೊತೆ ಇರೋ ಫೋಟೋಗಳನ್ನು ಸಮಂತಾ ಅವರು ಇತ್ತೀಚೆಗೆ ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ಡೇಟಿಂಗ್ ವಿಚಾರವನ್ನು ಅವರು ಖಚಿತಪಡಿಸಿದರು ಎಂದು ಹೇಳಲಾಗುತ್ತಿದೆ. ಆದರೆ, ಸಮಂತಾ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.