Samantha Birthday: ಬರ್ತ್​ಡೇ ದಿನವೂ ಇಲ್ಲ ರಜೆ; ಬ್ರೇಕ್ ಪಡೆಯದೆ ಶೂಟಿಂಗ್​ನಲ್ಲಿ ಭಾಗಿ ಆದ ಸಮಂತಾ

ಸಾಮಾನ್ಯವಾಗಿ ಬರ್ತ್​ಡೇ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಕನಿಷ್ಠ ಎಂದರೂ ಒಂದು ವಾರ ರಜೆ ತೆಗೆದುಕೊಳ್ಳುತ್ತಾರೆ. ಮೊದಲಾಗಿದ್ದರೆ ಸಮಂತಾ ಹೀಗಿಯೇ ಮಾಡುತ್ತಿದ್ದರೇನೋ. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ.

Samantha Birthday: ಬರ್ತ್​ಡೇ ದಿನವೂ ಇಲ್ಲ ರಜೆ; ಬ್ರೇಕ್ ಪಡೆಯದೆ ಶೂಟಿಂಗ್​ನಲ್ಲಿ ಭಾಗಿ ಆದ ಸಮಂತಾ
ಸಮಂತಾ

Updated on: Apr 28, 2023 | 8:37 AM

ನಟಿ ಸಮಂತಾ ಅವರು (Samantha Ruth Prabhu) ಇಂದು (ಏಪ್ರಿಲ್ 28) ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ವಿಶ್ ಬರುತ್ತಿದೆ. ಸಮಂತಾ ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಎಲ್ಲರೂ ಕೋರುತ್ತಿದ್ದಾರೆ. ಈ ಮಧ್ಯೆ ಸಮಂತಾ ಮಧ್ಯ ಪ್ರದೇಶಕ್ಕೆ ಹಾರಿದ್ದಾರೆ. ಹಾಗಂತ ಇದು ಬರ್ತ್​ಡೇ ಆಚರಣೆಗಲ್ಲ. ಅವರು ತೆರಳಿರೋದು ಶೂಟಿಂಗ್ ಸಲುವಾಗಿ. ಬರ್ತ್​ಡೇ ದಿನವೂ ಅವರು ಕೆಲಸ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹುಟ್ಟುಹಬ್ಬದ ದಿನ ಅವರು ಅಭಿಮಾನಿಗಳ ಜೊತೆ ಇರಬೇಕಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಬರ್ತ್​ಡೇ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಕನಿಷ್ಠ ಎಂದರೂ ಒಂದು ವಾರ ರಜೆ ತೆಗೆದುಕೊಳ್ಳುತ್ತಾರೆ. ವಿದೇಶಕ್ಕೆ ಹೋಗಿ ಬರ್ತ್​ಡೇ ಸೆಲೆಬ್ರೇಟ್ ಮಾಡುತ್ತಾರೆ. ಮೊದಲಾಗಿದ್ದರೆ ಸಮಂತಾ ಹೀಗಿಯೇ ಮಾಡುತ್ತಿದ್ದರೇನೋ. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಅನಾರೋಗ್ಯ ಕಾರಣದಿಂದ ಹಲವು ತಿಂಗಳು ಸಮಂತಾ ಬ್ರೇಕ್ ಪಡೆದಿದ್ದಾರೆ. ಬಾಕಿ ಇರುವ ಶೂಟಿಂಗ್ ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕೆ ಸಮಂತಾ ಬ್ರೇಕ್ ಪಡೆಯದೇ ಬರ್ತ್​ಡೇ ದಿನವೂ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ.

ಸಮಂತಾ ಬಾಳಲ್ಲಿ ಇತ್ತೀಚೆಗೆ ಸಾಕಷ್ಟು ಕಹಿ ಘಟನೆ ನಡೆಯಿತು. ಮೊದಲು ಪತಿ ನಾಗ ಚೈತನ್ಯ ದೂರಾದರು. ನಂತರ ಅಪರೂಪದ ಕಾಯಿಲೆ ಅಂಟಿತು. ಇತ್ತೀಚೆಗೆ ತೆರೆಗೆ ಬಂದ ‘ಶಾಕುಂತಲಂ’ ಸಿನಿಮಾ ಸೋತಿತು. ಈ ಎಲ್ಲಾ ಕಾರಣದಿಂದ ಸಮಂತಾ ಸಾಕಷ್ಟು ನೊಂದಿದ್ದಾರೆ. ಸಿನಿಮಾ ಮೂಲಕ ಗೆಲ್ಲಬೇಕು ಎನ್ನುವ ನಿರ್ಧಾರಕ್ಕೆ ಅವರು ಬಂದಿದ್ದಾರೆ. ಸದ್ಯ ಮಧ್ಯ ಪ್ರದೇಶದಲ್ಲಿ ‘ಸಿಟಾಡೆಲ್’ ಸೀರಿಸ್​ನ ಇಂಡಿಯನ್ ವರ್ಷನ್​​ ಶೂಟಿಂಗ್​ನಲ್ಲಿ ಅವರು ಬ್ಯುಸಿ ಇದ್ದಾರೆ.

ಇದನ್ನೂ ಓದಿ: ಸಮಂತಾಗಾಗಿ ಮನೆಯಲ್ಲೇ ಗುಡಿ ಕಟ್ಟಿದ ಅಭಿಮಾನಿ, ನೆಚ್ಚಿನ ನಟಿಗಾಗಿ ತೀರ್ಥಯಾತ್ರೆ ಸಹ ಮಾಡಿದ್ದ

‘ದಿ ಫ್ಯಾಮಿಲಿ ಮ್ಯಾನ್’ ಸೀರಿಸ್ ನಿರ್ದೇಶನ ಮಾಡಿದ್ದ ರಾಜ್ ಮತ್ತು ಡಿಕೆ ‘ಸಿಟಾಡೆಲ್​’ನ ಇಂಡಿಯನ್ ವರ್ಷನ್ ನಿರ್ದೇಶನ ಮಾಡುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ಸರಣಿಯಲ್ಲಿ ಸಮಂತಾ ನಟಿಸಿದ್ದರು. ಈ ಕಾರಣಕ್ಕೆ ರಾಜ್ ಮತ್ತು ಡಿಕೆ ಜೊತೆ ಅವರಿಗೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಹೊಸ ಸರಣಿಯಲ್ಲಿ ಸಮಂತಾ ಜೊತೆ ವರುಣ್ ಧವನ್ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:36 am, Fri, 28 April 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us