AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾಗಾಗಿ ಮನೆಯಲ್ಲೇ ಗುಡಿ ಕಟ್ಟಿದ ಅಭಿಮಾನಿ, ನೆಚ್ಚಿನ ನಟಿಗಾಗಿ ತೀರ್ಥಯಾತ್ರೆ ಸಹ ಮಾಡಿದ್ದ

Samantha: ನೆಚ್ಚಿನ ನಟ-ನಟಿಯರಿಗಾಗಿ ಏನೆಲ್ಲಾ ಮಾಡುತ್ತಾರೆ ಅಭಿಮಾನಿಗಳು. ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟಿ ಸಮಂತಾಗಾಗಿ ದೇವಾಲಯೊಂದನ್ನು ಕಟ್ಟಿಸಿದ್ದಾನೆ.

ಸಮಂತಾಗಾಗಿ ಮನೆಯಲ್ಲೇ ಗುಡಿ ಕಟ್ಟಿದ ಅಭಿಮಾನಿ, ನೆಚ್ಚಿನ ನಟಿಗಾಗಿ ತೀರ್ಥಯಾತ್ರೆ ಸಹ ಮಾಡಿದ್ದ
ಸಮಂತಾಗೆ ದೇವಾಲಯ
Follow us
ಮಂಜುನಾಥ ಸಿ.
|

Updated on: Apr 26, 2023 | 6:52 PM

ನಾಗ ಚೈತನ್ಯ (Naga Chaithanya) ಜೊತೆ ವಿಚ್ಛೇದನದ ನಿರ್ಣಯ ಪ್ರಕಟಿಸಿದಾಗ ಸಮಂತಾ (Samantha) ವಿರುದ್ಧ ಹಲವರು ಹಲವರು ರೀತಿಯ ಆರೋಪಗಳನ್ನು ಮಾಡಿದರು. ಅಸಹ್ಯಕರ ಟ್ರೋಲ್​ಗಳು, ನಿಂದನೆ, ಮಾಧ್ಯಮಗಳ ಪ್ರೈಂಟೈಮ್ ವಿಚಾರಣೆ ಇನ್ನೂ ಹಲವು ಬಗೆಯ ಅಪಮಾನಗಳನ್ನು ಸಮಂತಾ ಎದುರಿಸಬೇಕಾಯ್ತು. ಆದರೆ ಈ ಎಲ್ಲ ಸಂದರ್ಭದಲ್ಲಿ ಸಮಂತಾ ಬೆನ್ನಗೆ ನಿಂತವರು ಅವರ ಅಭಿಮಾನಿಗಳು (Fans). ವಿಚ್ಛೇದನದ ನೋವು, ಆ ನಂತರದ ಅಪಮಾನಗಳಿಂದ ಹೊರಬಂದಿರುವ ಸಮಂತಾ ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ಜೊತೆಗೆ ಆಗೊಮ್ಮೆ ಈಗೊಮ್ಮೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಸಮಂತಾಗೆ ಸಾಥ್ ನೀಡುತ್ತಲೇ ಇದ್ದಾರೆ. ಇದೀಗ ಸಮಂತಾರ ಅಪ್ಪಟ ಅಭಿಮಾನಿಯೊಬ್ಬ ಮೆಚ್ಚಿನ ನಟಿಗಾಗಿ ಗುಡಿ ಒಂದನ್ನು ಕಟ್ಟಿಸಿದ್ದಾನೆ.

ಆಂಧ್ರ ಪ್ರದೇಶದ ಬಾಪಟ್ಟಿ ಜಿಲ್ಲೆಯ ಆಲಪಾಡಿ ಗ್ರಾಮದ ಸಂದೀಪ್ ಎಂಬಾತ, ನಟಿ ಸಮಂತಾರ ಬಹುದೊಡ್ಡ ಅಭಿಮಾನಿ. ಇದೇ ಕಾರಣಕ್ಕೆ ತನ್ನ ಮೆಚ್ಚಿನ ನಟಿಗಾಗಿ ತನ್ನದೇ ಮನೆಯ ಅಂಗಳದಲ್ಲಿ ದೇವಾಲಯವನ್ನು ಸಂದೀಪ್ ಕಟ್ಟಿಸಿದ್ದಾರೆ. ಇದು ಮಾತ್ರವೇ ಅಲ್ಲದೆ, ಈ ಹಿಂದೆ ಸಮಂತಾಗೆ ಆರೋಗ್ಯ ಸಮಸ್ಯೆ ಕಾಡಿದ್ದಾಗ ಪಾದಯಾತ್ರೆ ಮಾಡಿ ದೇವಾಲಯಕ್ಕೆ ಹೋಗಿ ಸಮಂತಾ ಶೀಘ್ರ ಗುಣಮುಖವಾಗಲೆಂದು ವಿಶೇಷ ಪೂಜೆಗಳನ್ನು ಸಹ ಮಾಡಿಸಿದ್ದರು.

ಇದೀಗ ಸಮಂತಾಗಾಗಿ ದೇವಾಲಯವನ್ನು ನಿರ್ಮಿಸುತ್ತಿದ್ದು ಸಮಂತಾರ ನಗುಮುಖದ ಮೂರ್ತಿಯನ್ನು ದೇವಾಲಯದ ಒಳಗೆ ಪ್ರತಿಷ್ಠಾಪಿಸಲಿದ್ದಾರೆ ಸಂದೀಪ್. ಸಮಂತಾರ ಹುಟ್ಟುಹಬ್ಬ ಏಪ್ರಿಲ್ 28ಕ್ಕೆ ಇದ್ದು ಇದೇ ದಿನ ದೇವಾಲಯದ ಉದ್ಘಾಟನೆಯನ್ನು ಮಾಡಲಿದ್ದಾರೆ. ಮೊದಲ ದಿನ ಸಮಂತಾ ವಿಗ್ರಹಕ್ಕೆ ವಿಶೇಷ ಪೂಜೆಗಳು, ಅಭಿಷೇಕಗಳು ನಡೆಯಲಿವೆ.

ಹೀಗೆ ನಟಿಯರಿಗಾಗಿ ದೇವಾಲಯ ಕಟ್ಟುತ್ತಿರುವುದು ಇದು ಮೊದಲೇನೂ ಅಲ್ಲ. ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿ ಈ ರೀತಿ ನಟಿಯರಿಗೆ ಗುಡಿ ಕಟ್ಟುವ ಹುಚ್ಚು ಅಭಿಮಾನದ ಹಲವು ಉದಾಹರಣೆಗಳಿವೆ. ನಟಿ ಖುಷ್ಬು, ನಮಿತಾ, ನಿಧಿ ಅಗರ್ವಾಲ್, ನಯನತಾರಾ, ಅನುಷ್ಕಾ ಶೆಟ್ಟಿ ಅವರುಗಳಿಗಾಗಿ ಕೆಲವು ಅಭಿಮಾನಿಗಳು ಗುಡಿಗಳನ್ನು ಕಟ್ಟಿದ್ದಾರೆ. ಕರ್ನಾಟಕದಲ್ಲಿಯೂ ನಟ ಸುದೀಪ್​ ಅವರಿಗಾಗಿ ಅಭಿಮಾನಿಯೊಬ್ಬ ಗುಡಿ ಕಟ್ಟಿ, ಉದ್ಘಾಟನೆಗೆ ಸುದೀಪ್ ಅವರನ್ನೇ ಆಹ್ವಾನಿಸಿದ್ದ. ಆದರೆ ಆಹ್ವಾನವನ್ನು ನಯವಾಗಿ ನಿರಾಕರಿಸಿದ್ದ ಸುದೀಪ್, ತಮ್ಮ ವಿಗ್ರಹದ ಬದಲಿಗೆ ವೀರ ಮದಕರಿ ನಾಯಕರ ವಿಗ್ರವನ್ನು ಇಡುವಂತೆ ಸೂಚಿಸಿದ್ದರು.

ನಟಿ ಸಮಂತಾರ ಹುಟ್ಟುಹಬ್ಬ ಏಪ್ರಿಲ್ 28ರಂದು ಇದೆ. ಸಮಂತಾ ನಟಿಸಿರುವ ಶಾಕುಂತಲಂ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಫ್ಲಾಪ್ ಆಯಿತು. ಅದರ ಹಿಂದೆ ಬಿಡುಗಡೆ ಆಗಿದ್ದ ಯಶೋಧ ಸಿನಿಮಾ ಸಹ ನಿರೀಕ್ಷಿಸಿದಷ್ಟು ಹಿಟ್ ಆಗಲಿಲ್ಲ. ಇದೀಗ ವಿಜಯ್ ದೇವರಕೊಂಡ ಜೊತೆಗೆ ಖುಷಿ ಹೆಸರಿನ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಆ ಸಿನಿಮಾದ ಜೊತೆಗೆ ಸಿಟಾಡೆಲ್ ಇಂಗ್ಲೀಷ್ ವೆಬ್ ಸರಣಿಯ ಹಿಂದಿ ಆವೃತ್ತಿಯಲ್ಲಿ ವರುಣ್ ಧವನ್ ಜೊತೆಗೆ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಬಾಲಿವುಡ್​ನ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಅದಾದ ಬಳಿಕ ಇಂಗ್ಲೀಷ್ ಸಿನಿಮಾ ಅರೇಂಜ್​ಮೆಂಟ್ಸ್ ಆಫ್ ಲವ್ ಸಿನಿಮಾದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ