Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಂದರ್ಯ ಉದಾಹರಣೆ ನೀಡಿ ಸಮಂತಾಗೆ ಟಾಂಗ್ ಕೊಟ್ಟ ಚಿಟ್ಟಿಬಾಬು, ಕರ್ಣ ಕೇಶದ ಬಗ್ಗೆಯೂ ಮಾತು

Samantha: ತಮ್ಮ ಕಿವಿಯ ಕೂದಲಿನ ಬಗ್ಗೆ ಮಾತನಾಡಿದ ಸಮಂತಾಗೆ ಟಾಂಗ್ ಕೊಟ್ಟಿದ್ದಾರುವ ನಿರ್ಮಾಪಕ ಚಿಟ್ಟಿಬಾಬು, ಸಮಂತಾ ಸತ್ಯ ಒಪ್ಪಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಸೌಂದರ್ಯ ಉದಾಹರಣೆ ನೀಡಿ ಸಮಂತಾಗೆ ಟಾಂಗ್ ಕೊಟ್ಟ ಚಿಟ್ಟಿಬಾಬು, ಕರ್ಣ ಕೇಶದ ಬಗ್ಗೆಯೂ ಮಾತು
ಸಮಂತಾ-ಚಿಟ್ಟಿಬಾಬು
Follow us
ಮಂಜುನಾಥ ಸಿ.
|

Updated on:Apr 26, 2023 | 6:04 PM

ನಟಿ ಸಮಂತಾ (Samantha) ಕುರಿತು ನಿರ್ಮಾಪಕ ಚಿಟ್ಟಿಬಾಬು ಕೆಲವು ದಿನಗಳ ಹಿಂದೆ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು. ಸಮಂತಾ ನಟಿಸಿದ್ದ ಶಾಕುಂತಲಂ (Shakunthalam) ಸಿನಿಮಾ ಬಿಡುಗಡೆ ಆಗುವ ಮುನ್ನ ಯೂಟ್ಯೂಬ್ ಚಾನೆಲ್​ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಚಿಟ್ಟಿಬಾಬು (Chitti Babu), ”ಸಮಂತಾಗೆ ವಯಸ್ಸಾಗಿದೆ, ಆಕೆಯದ್ದು ಮುದುಕಿಯ ಹೋಲುವ ಮುಖ, ಆಕೆಯ ಕರಿಯರ್ ಮುಗಿದು ಹೋಗಿದೆ. ಶಾಕುಂತಲಂ ಪಾತ್ರಕ್ಕೆ ಸಮಂತಾ ಸೂಕ್ತವಾದ ಆಯ್ಕೆಯಲ್ಲ, ಜೊತೆಗೆ ಆಕೆ ಸಿಂಪತಿ ಬಳಸಿ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳಲು ಯತ್ನಿಸುತ್ತಿದ್ದಾಳೆ ಅದು ಸರಿಯಲ್ಲ” ಎಂದಿದ್ದರು.

ಚಿಟ್ಟಿಬಾಬು ಹೇಳಿಕೆಗೆ ಪರೋಕ್ಷ ಟಾಂಗ್ ನೀಡಿದ್ದ ಸಮಂತಾ. ಚಿಟ್ಟಿಬಾಬು ಮುಖದಲ್ಲಿ ಎದ್ದು ಕಾಣುವ ಕಿವಿಯ ಕೂದಲಿನ ಬಗ್ಗೆ ಫೋಸ್ಟ್ ಒಂದನ್ನು ಹಂಚಿಕೊಂಡು, ಪುರುಷರಲ್ಲಿ ಅತಿಯಾದ ಕಿವಿಯ ಕೂದಲು ಬರಲು ಲೈಂಗಿಕತೆಗೆ ಸಂಬಂಧಿಸಿದ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನು ಅಧಿಕವಾಗಿರುವುದು ಕಾರಣ ಎಂಬ ಮಾಹಿತಿಯನ್ನು ಗೂಗಲ್​ನಿಂದ ಹೆಕ್ಕಿ ಅದರ ಸ್ಕ್ರೀನ್​ಶಾಟ್ ಅನ್ನು ಹಂಚಿಕೊಂಡಿದ್ದರು.

ಸಮಂತಾ, ತಮ್ಮ ಹೆಸರು ಉಲ್ಲೇಖಿಸದೆ ತಮ್ಮ ಕಿವಿಯ ಕೂದಲಿನ ಬಗ್ಗೆ ಮಾತನಾಡಿರುವುದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಚಿಟ್ಟಿಬಾಬು, ಸೌಂದರ್ಯ ಹಾಗೂ ಇನ್ನು ಕೆಲವು ನಟರ ಉದಾಹರಣೆ ನೀಡಿ ಸಮಂತಾ ವೃತ್ತಿಪರ ನಟಿಯಲ್ಲ ಎಂದು ಆರೋಪಿಸಿದ್ದಾರೆ. ”ಹಿಂದೊಮ್ಮೆ ನಾನು ಗೆಲುಪು ಹೆಸರಿನ ಸಿನಿಮಾ ಮಾಡಿದಾಗ ಆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸೌಂದರ್ಯ ನಟಿಸಿದ್ದರು. ಸೌಂದರ್ಯ ಶೂಟಿಂಗ್ ಸೆಟ್​ಗೆ ಬಂದಾಗ ಆಕೆಗೆ ಆರೋಗ್ಯ ಸರಿಯಿರಲಿಲ್ಲ. ಅದು ನನ್ನ ಗಮನಕ್ಕೆ ಬಂದು, ಆರೋಗ್ಯ ಸರಿಯಿಲ್ಲದಿದ್ದರೆ ಶೂಟಿಂಗ್ ಮುಂದಕ್ಕೆ ಹಾಕಿಕೊಳ್ಳೋಣ ಎಂದೆ ಆದರೆ ಸೌಂದರ್ಯ ಹಾಗೆ ಮಾಡಲಿಲ್ಲ. ಸುಹಾಸಿನಿ, ಕೋಟಾ ಶ್ರೀನಿವಾಸ್ ರಾವ್, ನರೇಶ್ ಇನ್ನೂ ದೊಡ್ಡ ದೊಡ್ಡ ನಟರಿದ್ದಾರೆ ಹೀಗಿದ್ದಾಗ ನನಗಾಗಿ ಶೂಟಿಂಗ್ ಮುಂದೂಡುವುದು ಬೇಡ ನಾನು ಶಾಟ್ ನೀಡುತ್ತೇನೆ ಎಂದು ಹೇಳಿ ನಟಿಸಿದರು. ಇದು ನಿಜವಾದ ವೃತ್ತಿಪರತೆ ಎಂದಿದ್ದಾರೆ ಚಿಟ್ಟಿಬಾಬು.

”ಆರೋಗ್ಯ ಸರಿಯಿಲ್ಲದೇ ಇದ್ದಾಗಲೂ ಶೂಟಿಂಗ್​ಗೆ ಸಮಸ್ಯೆ ಆಗಬಾರದೆಂದು ನಟಿಸಿದ ಹಲವು ನಟ-ನಟಿಯರಿದ್ದಾರೆ. ಅದು ಅವರಲ್ಲಿರುವ ವೃತ್ತಿಪರತೆ, ಅದು ದೊಡ್ಡ ವಿಷಯವಲ್ಲ, ನಟರಾಗಿರುವವರಿಗೆ ಇರಬೇಕಾದ ಜವಾಬ್ದಾರಿ ಅದು, ಆದರೆ ಸಮಂತಾ, ತಮಗೆ ಹುಷಾರಿಲ್ಲದಿದ್ದರೂ ನಟಿಸಿದ್ದನ್ನು ದೊಡ್ಡ ವಿಷಯವನ್ನಾಗಿ ಹೇಳಿಕೊಂಡು ಅದನ್ನು ಸಿಂಪತಿಯನ್ನಾಗಿ ಬಳಸಿ ಸಿನಿಮಾದ ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಅದನ್ನೇ ನಾನು ಹೇಳಿದೆ ಎಂದಿದ್ದಾರೆ ಚಿಟ್ಟಿಬಾಬು.

ಇದನ್ನೂ ಓದಿ:Chittibabu: ತಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿದ ನಿರ್ಮಾಪಕನ ಕಿವಿ ಕೂದಲಿನ ರಹಸ್ಯ ಬಯಲು ಮಾಡಿದ ಸಮಂತಾ

ಸಮಂತಾ, ತಮ್ಮ ಕಿವಿಯ ಕೂದಲಿನ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಬಗ್ಗೆ ಮಾತನಾಡಿರುವ ಚಿಟ್ಟಿಬಾಬು, ”ನನ್ನ ಕಿವಿಯ ಕೂದಲನ್ನು ಅವರು ಗಮನಸಿದ್ದಾರೆ, ಹಾಗೆಯೇ ನನ್ನ ದೇಹದ ಇನ್ನೂ ಹಲವು ಭಾಗಗಳಲ್ಲಿ ಕೂದಲು ಬೆಳೆಯುತ್ತವೆ ಅದರ ಬಗ್ಗೆಯೂ ಅಧ್ಯಯನ ಮಾಡಿ ವರದಿ ಮಾಡುವುದಾದರೆ ಮಾಡಲು ನನ್ನ ಅಭ್ಯಂತರವಿಲ್ಲ” ಎಂದಿದ್ದಾರೆ. ಅಲ್ಲದೆ, ಸಮಂತಾಗೆ ಈಗ 18-20 ವರ್ಷ ವಯಸ್ಸಲ್ಲ. ಸಾಕಷ್ಟು ವಯಸ್ಸಾಗಿದೆ, ಹಾಗಾಗಿ ಆಕೆ ಅಪ್ರತಿಮ ಸುಂದರಿ ಶಾಕುಂತಲ ಪಾತ್ರಕ್ಕೆ ಸೂಕ್ತವಾದ ಆಯ್ಕೆ ಅಲ್ಲ ಎಂದು ಹೇಳಿದ್ದೇನೆ ಇದರಲ್ಲಿ ತಪ್ಪೇನು? ಆಕೆಯ ಗ್ಲಾಮರಸ್ ಅವಧಿ ಮುಗಿದಿದ್ದು ಪೋಷಕ ಪಾತ್ರಗಳತ್ತ ಹೊರಳಿಕೊಳ್ಳುವ ಸಮಯ ಬಂದಿದೆ. ಆದರೆ ಆಕೆ ಈ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದಿದ್ದಾರೆ ಚಿಟ್ಟಿಬಾಬು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Wed, 26 April 23

ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ