Chittibabu: ತಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿದ ನಿರ್ಮಾಪಕನ ಕಿವಿ ಕೂದಲಿನ ರಹಸ್ಯ ಬಯಲು ಮಾಡಿದ ಸಮಂತಾ

Samantha Ruth Prabhu: ‘ಕಿವಿ ಮೇಲೆ ಕೂದಲು ಯಾಕೆ ಬೆಳೆಯುತ್ತದೆ’ ಎಂದು ಸಮಂತಾ ಅವರು ಸರ್ಚ್​ ಮಾಡಿದ್ದಾರೆ. ಅದಕ್ಕೆ ಗೂಗಲ್​ ತೋರಿಸಿದ ಉತ್ತರವನ್ನು ಸ್ಕ್ರೀನ್​ ಶಾಟ್​ ತೆಗೆದುಕೊಂಡು ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Chittibabu: ತಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿದ ನಿರ್ಮಾಪಕನ ಕಿವಿ ಕೂದಲಿನ ರಹಸ್ಯ ಬಯಲು ಮಾಡಿದ ಸಮಂತಾ
ಸಮಂತಾ, ಚಿಟ್ಟಿಬಾಬು
Follow us
ಮದನ್​ ಕುಮಾರ್​
|

Updated on:Apr 23, 2023 | 1:51 PM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬೇಕಂತಲೇ ಅವರು ಯಾವುದೇ ವಿವಾದ ಮಾಡಿಕೊಳ್ಳುವುದಿಲ್ಲ. ಆದರೆ ಕೆಲವೊಮ್ಮೆ ವಿವಾದಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ. ಅನೇಕರು ಸಮಂತಾ ಬಗ್ಗೆ ಕಟುವಾಗಿ ಮಾತನಾಡಿದ್ದುಂಟು. ಇತ್ತೀಚೆಗೆ ನಿರ್ಮಾಪಕ ಚಿಟ್ಟಿಬಾಬು (Producer Chittibabu) ಅವರು ನಟಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಈಗ ಅವರಿಗೆ ಸಮಂತಾ ತಿರುಗೇಟು ನೀಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಒಂದು ಸ್ಕ್ರೀನ್​ ಶಾಟ್​ ಹಂಚಿಕೊಳ್ಳುವ ಮೂಲಕ ಅವರು ವ್ಯಂಗ್ಯ ಮಾಡಿದ್ದಾರೆ. ನೇರವಾಗಿ ಚಿಟ್ಟಿಬಾಬು ಹೆಸರನ್ನು ಅವರು ಪ್ರಸ್ತಾಪ ಮಾಡದಿದ್ದರೂ ಕೂಡ ನೆಟ್ಟಿಗರಿಗೆ ಎಲ್ಲವೂ ಅರ್ಥವಾಗಿದೆ. ಚಿಟ್ಟಿಬಾಬು ಅವರ ಕಿವಿಯಲ್ಲಿ ಸಿಕ್ಕಾಪಟ್ಟೆ ಕೂದಲು ಇದೆ. ಅದಕ್ಕೆ ಕಾರಣ ಏನು ಎಂಬುದನ್ನು ಸಮಂತಾ ಅವರು ಗೂಗಲ್​ನಲ್ಲಿ ಪತ್ತೆ ಹಚ್ಚಿದ್ದಾರೆ.

‘ಮನುಷ್ಯರ ಕಿವಿ ಮೇಲೆ ಕೂದಲು ಯಾಕೆ ಬೆಳೆಯುತ್ತದೆ’ ಎಂದು ಸಮಂತಾ ರುತ್​ ಪ್ರಭು ಅವರು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಾರೆ. ಅದಕ್ಕೆ ಗೂಗಲ್​ ತೋರಿಸಿದ ಉತ್ತರವನ್ನು ಸ್ಕ್ರೀನ್​ ಶಾಟ್​ ತೆಗೆದುಕೊಂಡು ಅದನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ‘ಲೈಂಗಿಕ ಆಸಕ್ತಿಗೆ ಸಂಬಂಧಿಸಿದ ಟೆಸ್ಟಾಸ್ಟಿರಾನ್​ ಹಾರ್ಮೋನ್​ ಜಾಸ್ತಿ ಇರುವ ಪುರುಷರ ಕಿವಿಯಲ್ಲಿ ಕೂದಲು ಬೆಳೆಯುತ್ತದೆ’ ಎಂಬ ಮಾಹಿತಿ ಈ ಸ್ಕ್ರೀನ್ ಶಾಟ್​ನಲ್ಲಿದೆ. ಇದು ನಿರ್ಮಾಪಕ ಚಿಟ್ಟಿಬಾಬು ಕುರಿತಾಗಿಯೇ ಸಮಂತಾ ಹೇಳಿದ್ದರು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

(ಸಮಂತಾ ಹಂಚಿಕೊಂಡ ಸ್ಕ್ರೀನ್​ ಶಾಟ್​)

ಸಮಂತಾ ಬಗ್ಗೆ ಚಿಟ್ಟಿಬಾಬು ಹೇಳಿದ್ದೇನು?

‘ಸಮಂತಾಳನ್ನು ಯಾರೂ ನಾಯಕಿಯಾಗಿ ತಮ್ಮ ಸಿನಿಮಾಗಳಲ್ಲಿ ಹಾಕಿಕೊಳ್ಳುತ್ತಿಲ್ಲ. ಅದಕ್ಕೆಂದೇ ಆಕೆ ಸ್ತ್ರೀ ಪ್ರಧಾನ ಸಿನಿಮಾಗಳನ್ನು ಮಾಡುತ್ತಿದ್ದಾಳೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಅಂಥ ಮುಖ ಇಟ್ಟುಕೊಂಡು ಶಕುಂತಲೆಯ ಪಾತ್ರ ಹೇಗೆ ಮಾಡುತ್ತಾಳೋ ಏನೋ? ಕ್ಯಾಮೆರಾಮ್ಯಾನ್ ಏನಾದರೂ ಗಿಮಿಕ್ ಮಾಡಬೇಕು ಅಷ್ಟೆ. ಟಾಪ್ ಹೀರೋಯಿನ್ ಪಟ್ಟದಿಂದ ಆಕೆ ಕೆಳಗೆ ಬಿದ್ದು ಬಹಳ ಸಮಯವಾಗಿದೆ. ಅದೇ ಕಾರಣಕ್ಕೆ ‘ಪುಷ್ಪ’ ಸಿನಿಮಾದಲ್ಲಿ ಊ ಅಂಟಾವ, ಊಹು ಅಂಟಾವ ಥರಹದ ಹಾಡಿನಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡಲು, ಇನ್ನೂ ಸ್ವಲ್ಪ ದಿನ ಇಂಡಸ್ಟ್ರಿಯಲ್ಲಿ ಇರಬೇಕೆಂಬ ಕಾರಣಕ್ಕೆ ಆ ರೀತಿಯ ಹಾಡುಗಳಲ್ಲಿ ನಟಿಸುತ್ತಿದ್ದಾಳೆ’ ಎಂದಿದ್ದರು ಚಿಟ್ಟಿಬಾಬು.

ಇದನ್ನೂ ಓದಿ
Image
Samantha Ruth Prabhu: ಮತ್ತೆ ಕೈ ಕೊಟ್ಟಿದೆ ಸಮಂತಾ ರುತ್​ ಪ್ರಭು ಆರೋಗ್ಯ; ಅಭಿಮಾನಿಗಳಿಗೆ ಆತಂಕ
Image
Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ
Image
ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ
Image
Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

ಇದನ್ನೂ ಓದಿ: ಲಂಡನ್​ನಲ್ಲಿ ವರುಣ್ ಧನವ್-ಸಮಂತಾ, ಕ್ಯೂಟ್ ಚಿತ್ರಗಳು ಇಲ್ಲಿವೆ

‘ಶಕುಂತಲೆ ಅಪ್ರತಿಮ ಸುಂದರಿ. ಆದರೆ ಆ ಪಾತ್ರ ಮಾಡಿರುವ ಸಮಂತಾ ಅದಕ್ಕೆ ಸೂಟ್ ಆಗಿಲ್ಲ. ಸಮಂತಾ ಮುಖ ಕಿತ್ತುಹೋಗಿದೆ. ಅದಕ್ಕಾಗಿ ಜನರನ್ನು ಸೆಳೆಯಲು ತಾನು ಸತ್ತು ಹೋಗುತ್ತೇನೆ.. ಅದೂ ಇದು ಅಂತ ಡ್ರಾಮಾ ಮಾಡುತ್ತಿರುತ್ತಾಳೆ. ಆಕೆಯ ಕರಿಯರ್ ಮುಗಿದು ಹೋಗಿದೆ. ಹಿಂದೆ ಯಾವುದೋ ಸಿನಿಮಾಕ್ಕೆ ಬೆಡ್​ ಮೇಲೆ ಮಲಗಿ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಇದೆಲ್ಲ ಪ್ರಚಾರ ತಂತ್ರ. ಹಿಂದೆ ಹಲವು ಕಲಾವಿದರು ತೀವ್ರ ಜ್ವರದ ನಡುವೆಯೂ ಸಿನಿಮಾಗಳಲ್ಲಿ ನಟಿಸಿದ್ದುಂಟು. ಈಕೆಯೇನು ಸ್ಪೆಷಲ್ಲಾ?’ ಎಂದು ಚಿಟ್ಟಿಬಾಬು ಪ್ರಶ್ನಿಸಿದ್ದರು.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:51 pm, Sun, 23 April 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್