Samantha Tattoo: ಡಿವೋರ್ಸ್​ ಆದರೂ ಸಮಂತಾ ಮೈ ಮೇಲಿದೆ ನಾಗ ಚೈತನ್ಯ ಸಹಿಯ ಟ್ಯಾಟೂ

ಸಮಂತಾ ದೇಹದ ಮೇಲೆ ಮೂರು ಟ್ಯಾಟೂಗಳಿವೆ. ಅವರು ಬೆನ್ನಿನ ಭಾಗದಲ್ಲಿ ವೈಎಂಸಿ ಎಂಬ ಟ್ಯಾಟೂ ಇದೆ. ಇದರ ಅರ್ಥ ‘ಯೇ ಮಾಯಾ ಚೇಸಾವೆ’.

Samantha Tattoo: ಡಿವೋರ್ಸ್​ ಆದರೂ ಸಮಂತಾ ಮೈ ಮೇಲಿದೆ ನಾಗ ಚೈತನ್ಯ ಸಹಿಯ ಟ್ಯಾಟೂ
ಸಮಂತಾ
Follow us
ರಾಜೇಶ್ ದುಗ್ಗುಮನೆ
|

Updated on: Apr 21, 2023 | 12:38 PM

ತಮ್ಮ ಹೆಸರು, ಪ್ರೀತಿ ಪಾತ್ರರ ಹೆಸರನ್ನು ದೇಹದ ಮೇಲೆ ಟ್ಯಾಟೂ ಆಗಿ ಹಾಕಿಸಿಕೊಳ್ಳುವ ಟ್ರೆಂಡ್ ಜೋರಾಗಿದೆ. ಅನೇಕ ಸೆಲೆಬ್ರಿಟಿಗಳು ಈ ರೀತಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಟಿ ಸಮಂತಾ ಕೂಡ ಇದಕ್ಕೆ ಹೊರತಾಗಿಲ್ಲ. ಸಮಂತಾ ದೇಹದ ಮೇಲೆ ವಿವಿಧ ಟ್ಯಾಟೂಗಳಿವೆ. ಇದರಲ್ಲಿ ಅವರ ಪತಿಯ ಸಹಿಯ ಟ್ಯಾಟೂ ಕೂಡ ಇದೆ. ವಿಚ್ಛೇದನ ಪಡೆದ ಹೊರತಾಗಿಯೂ ಸಮಂತಾ ಟ್ಯಾಟೂನ (Samantha Tattoo) ಹಾಗೆಯೇ ಇಟ್ಟುಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಇದನ್ನು ತೆಗೆಸುವಂತೆ ಅಭಿಮಾನಿಗಳು ಒತ್ತಾಯ ಹೇರುತ್ತಿದ್ದಾರೆ.

ಸುಮಾರು 10 ವರ್ಷಗಳ ಕಾಲ ಸಮಂತಾ ಮತ್ತು ನಾಗ ಚೈತನ್ಯ ಗೆಳೆಯರಾಗಿ, ಪ್ರೇಮಿಗಳಾಗಿದ್ದರು. ನಂತರ ಮದುವೆ ಆದರು. ಇವರ ಮದುವೆಗೆ ನಾಲ್ಕು ವರ್ಷ ತುಂಬುವುದರೊಳಗೆ ವಿಚ್ಛೇದನದ ಸುದ್ದಿ ಹೊರ ಬಿತ್ತು. ಈಗ ನಾಗ ಚೈತನ್ಯ ಹಾಗೂ ಸಮಂತಾ ಅಭಿಮಾನಿಗಳು ಕಿತ್ತಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಸಮಂತಾ ಹಚ್ಚೆ ವಿಚಾರ ಚರ್ಚೆಯಲ್ಲಿದೆ.

ಸಮಂತಾ ದೇಹದ ಮೇಲೆ ಮೂರು ಟ್ಯಾಟೂಗಳಿವೆ. ಅವರು ಬೆನ್ನಿನ ಭಾಗದಲ್ಲಿ ವೈಎಂಸಿ ಎಂಬ ಟ್ಯಾಟೂ ಇದೆ. ಇದರ ಅರ್ಥ ‘ಯೇ ಮಾಯಾ ಚೇಸಾವೆ’. ಈ ಸಿನಿಮಾ ರಾತ್ರೋರಾತ್ರಿ ಸಮಂತಾ ಅವರನ್ನು ಸ್ಟಾರ್​ ಆಗಿ ಮಾಡಿತು. ಮತ್ತೊಂದು ಟ್ಯಾಟೂನಲ್ಲಿ ನಾಗ ಚೈತನ್ಯ ಅವರ ಸಹಿ ಇದೆ. ಇದು ಹೊಟ್ಟೆ ಬಳಿ ಇದೆ. ಸಾಕಷ್ಟು ಫೋಟೋಶೂಟ್​​ಗಳಲ್ಲಿ ಈ ಸಹಿ ಎದ್ದು ಕಾಣಿಸಿದೆ. ಈಗಲೂ ಈ ಟ್ಯಾಟೂ ಹಾಗೆಯೇ ಇದೆ.

ಪ್ರಿಯಾಂಕಾ ಚೋಪ್ರಾ ನಟನೆಯ ‘ಸಿಟಾಡೆಲ್​’ ಸೀರಿಸ್​ ಪ್ರೀಮೀಯರ್ ಶೋ ವೀಕ್ಷಣೆಗೆ ಅವರಿಗೆ ಆಹ್ವಾನ ಬಂದಿತ್ತು. ಹೀಗಾಗಿ ಸಮಂತಾ ಅವರು ಲಂಡನ್​ಗೆ ತೆರಳಿದ್ದರು. ಈ ವೇಳೆ ತೆಗೆಸಿದ ಫೋಟೋ ವೈರಲ್ ಆಗಿದೆ. ಇದರಲ್ಲಿ ನಾಗ ಚೈತನ್ಯ ಸಹಿ ಇರುವ ಟ್ಯಾಟು ಕಾಣಿಸಿದೆ. ಇದನ್ನು ತೆಗೆಸುವಂತೆ ಅಭಿಮಾನಿಗಳು ಕೋರುತ್ತಿದ್ದಾರೆ.

ಇದನ್ನೂ ಓದಿ: ‘ಶಾಕುಂತಲಂ’ ಸಿನಿಮಾ ಸೋತ ಬಳಿಕ ಸಮಂತಾಗೆ ನೆನಪಾಯ್ತು ಭಗವದ್ಗೀತೆಯ ಶ್ಲೋಕ

ಬಾಲಿವುಡ್​ ಸ್ಟಾರ್​ ನಟಿ ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್​ ಅವರನ್ನು ಪ್ರೀತಿಸುತ್ತಿದ್ದಾಗ ಆರ್​ಕೆ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಇನ್ನು, ನಯನತಾರಾ ಪಿಡಿ (ಪ್ರಭುದೇವ) ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ, ಇವೆರಡೂ ಸಂಬಂಧ ಉಳಿದಿಲ್ಲ. ಲೇಸರ್​ ಸಹಾಯದಿಂದ ಇಬ್ಬರೂ ಈ ಟ್ಯಾಟೂ ತೆಗೆಸಿ ಹಾಕಿದ್ದರು. ಆದರೆ, ಸಮಂತಾ ಆ ರೀತಿ ಮಾಡಿಲ್ಲ.

ಇತ್ತೀಚೆಗೆ ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ರಿಲೀಸ್ ಆಗಿ ಸೋಲು ಕಂಡಿತು. ಈ ಮೊದಲು ನಾಗ ಚೈತನ್ಯ ನಟನೆಯ ‘ಥ್ಯಾಂಕ್​ ಯೂ’ ಸಿನಿಮಾ ಸೋತಾಗ ಸಮಂತಾ ಅಭಿಮಾನಿಗಳು ಟೀಕೆ ಮಾಡಿದ್ದರು. ಈಗ ‘ಶಾಕುಂತಲಂ’ ಚಿತ್ರದ ಸೋಲನ್ನು ನಾಗ ಚೈತನ್ಯ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇಬ್ಬರ ಮಧ್ಯೆ ದಿನ ಕಳೆದಂತೆ ದ್ವೇಷ ಹೆಚ್ಚುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ