ನಾಗ ಚೈತನ್ಯ ಹಾಗೂ ಸಮಂತಾ ಅವರದ್ದು ಮುಗಿದು ಹೋದ ಕಥೆ. ಇಬ್ಬರೂ ದೂರ ಆಗಿ ಕೆಲವು ವರ್ಷಗಳು ಕಳೆದಿವೆ. ಹೀಗಿರುವಾಗಲೇ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ವರಿಸಲು ಸಿದ್ಧರಾಗಿದ್ದಾರೆ ಎಂದು ವರದಿ ಆಗಿದೆ. ಇಬ್ಬರೂ ಇಂದು (ಆಗಸ್ಟ್ 8) ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ನಾಗ ಚೈತನ್ಯ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಆದರೆ, ಸಮಂತಾ ಫ್ಯಾನ್ಸ್ ಕೋಪಕ್ಕೆ ಕಾರಣ ಆಗಿದೆ.
2021ರ ಅಕ್ಟೋಬರ್ ತಿಂಗಳಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಬೇರೆ ಆಗುವ ಬಗ್ಗೆ ಘೋಷಣೆ ಮಾಡಿದರು. ಇದಕ್ಕೆ ಕಾರಣ ಏನು ಎಂಬುದನ್ನು ಯಾರೂ ರಿವೀಲ್ ಮಾಡಿಲ್ಲ. ಆ ಬಳಿಕ ನಾಗ ಚೈತನ್ಯ ಅವರು ಶೋಭಿತಾ ಜೊತೆ ಡೇಟಿಂಗ್ ಆರಂಭಿಸಿದರು. ಅನೇಕ ಬಾರಿ ಇವರು ಫ್ಯಾನ್ಸ್ ಕೈಗೆ ಸಿಕ್ಕಿ ಬಿದ್ದಿದ್ದೂ ಇದೆ. ಈಗ ಇವರು ತಮ್ಮ ಸಂಬಂಧವನ್ನು ಅಧಿಕೃತ ಮಾಡಲು ಹೊರಟಿದ್ದಾರೆ. ಇದನ್ನು ಯಾರೂ ಖಚಿತ ಪಡಿಸಿಲ್ಲ. ಟಾಲಿವುಡ್ ಅಂಗಳದಲ್ಲಿ ಹೀಗೊಂದು ಸುದ್ದಿ ಹರಿದಾಡುತ್ತಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಜೂನ್ ತಿಂಗಳಲ್ಲಿ ಯುರೋಪ್ ಪ್ರವಾಸ ತೆರಳಿದ್ದರು. ಈ ಫೋಟೋಗಳು ವೈರಲ್ ಆಗಿತ್ತು. ಇದರಿಂದ ಇವರು ಶೀಘ್ರವೇ ವಿವಾಹ ಆಗಲಿದ್ದಾರೆ ಅನ್ನೋದು ಖಚಿತ ಆಯಿತು. ಈಗ ಇವರು ನಿಶ್ಚಿತಾರ್ಥ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಈ ನಿಶ್ಚಿತಾರ್ಥ ಪೂರ್ಣಗೊಂಡ ಬಳಿಕ ನಾಗ ಚೈತನ್ಯ ತಂದೆ ನಾಗಾರ್ಜುನ ಅವರು ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಎಂಗೇಜ್ಮೆಂಟ್ಗೆ ಅವರದ್ದೇ ಸಾರಥ್ಯ ಇದೆ.
#NagaChaitanya and #SobhitaDhulipala are getting engaged tomorrow at his residence 💍 pic.twitter.com/l5ZD8QfJ1g
— Tollywood Box Office (@Tolly_BOXOFFICE) August 7, 2024
ಇದನ್ನೂ ಓದಿ: ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟ ಸಮಂತಾ, ಏನದು?
ಈ ಬೆಳವಣಿಗೆ ಸಹಜವಾಗಿಯೇ ಸಮಂತಾ ಫ್ಯಾನ್ಸ್ಗೆ ಕೋಪ ತರಿಸಿದೆ. ಈ ಮೊದಲು ನಾಗ ಚೈತನ್ಯ ಡಿವೋರ್ಸ್ ತೆಗೆದುಕೊಂಡು ದೂರ ಆದಾಗ ಸಮಂತಾ ಅಭಿಮಾನಿಗಳು ನಾಗ ಚೈತನ್ಯ ವಿರುದ್ಧ ಕೋಪ ಹೊರ ಹಾಕಿದ್ದರು. ಈಗ ಅವರು ವಿವಾಹ ಆಗುತ್ತಿದ್ದಾತೆ ಎಂದರೆ ಅವರ ಬಗ್ಗೆ ಹಾಗೂ ಶೋಭಿತಾ ಬಗ್ಗೆ ಸಿಟ್ಟನ್ನು ಹೊರಹಾಕುವುದನ್ನು ನಿರೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.