Samantha: ಸೀರೆಯಲ್ಲೂ ಸಖತ್​ ಗ್ಲಾಮರಸ್​ ಅವತಾರ ತಾಳಿದ ನಟಿ ಸಮಂತಾ ರುತ್ ಪ್ರಭು; ಫೋಟೋ ವೈರಲ್​​

|

Updated on: Nov 02, 2023 | 8:17 PM

Samantha Ruth Prabhu: ಸಮಂತಾ ರುತ್​ ಪ್ರಭು ಅವರು ಯಾವ ಡ್ರೆಸ್​ ಧರಿಸಿದರೂ ಸೂಪರ್ ಆಗಿ ಕಾಣುತ್ತಾರೆ. ಗ್ಲಾಮರಸ್​ ಆಗಿ ಪೋಸ್​ ನೀಡಲು ಅವರು ಹಿಂದೇಟು ಹಾಕುವವರಲ್ಲ. ಸೀರೆ ಧರಿಸಿಯೂ ಅವರು ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ವೈರಲ್​ ಆಗಿರುವ ಈ ಫೋಟೋ ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Samantha: ಸೀರೆಯಲ್ಲೂ ಸಖತ್​ ಗ್ಲಾಮರಸ್​ ಅವತಾರ ತಾಳಿದ ನಟಿ ಸಮಂತಾ ರುತ್ ಪ್ರಭು; ಫೋಟೋ ವೈರಲ್​​
ಸಮಂತಾ ರುತ್​ ಪ್ರಭು
Follow us on

ಬಹುಬೇಡಿಕೆಯ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಸದ್ಯಕ್ಕೆ ಸಿನಿಮಾ ಕೆಲಸಗಳಿಂದ ಬ್ರೇಕ್​ ಪಡೆದುಕೊಂಡಿದ್ದಾರೆ. ಅವಸರಕ್ಕೆ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಮಯೋಸೈಟಿಸ್​ ಕಾಯಿಲೆ ಬಂದಾಗಿನಿಂದ ಅವರ ವೇಗ ಕಡಿಮೆ ಆಗಿದೆ. ಈ ಮೊದಲೇ ಒಪ್ಪಿಕೊಂಡಿದ್ದ ಸಿನಿಮಾಗಳ ಕೆಲಸಗಳನ್ನು ಮುಗಿಸಿಕೊಟ್ಟು, ಈಗ ಸಮಂತಾ (Samantha) ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ. ಅದರ ನಡುವೆಯೂ ಅವರು ಅಭಿಮಾನಿಗಳನ್ನು ಮರೆತಿಲ್ಲ. ಫ್ಯಾನ್ಸ್​ ಸಲುವಾಗಿ ಹೊಸ ಹೊಸ ಫೋಟೋಶೂಟ್​ (Samantha New Photoshoot) ಮಾಡಿಸುತ್ತಿದ್ದಾರೆ. ಆ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಲಕ್ಷಾಂತರ ಲೈಕ್ಸ್​ ಪಡೆಯುತ್ತಿದ್ದಾರೆ.

ಈ ವರ್ಷ ವಿಜಯ್​ ದೇವರಕೊಂಡ ಜೊತೆ ಸಮಂತಾ ರುತ್​ ಪ್ರಭು ಅಭಿನಯಿಸಿದ ‘ಖುಷಿ’ ಸಿನಿಮಾ ಬಿಡುಗಡೆಯಾಗಿ ಸಾಧಾರಣ ಸಕ್ಸಸ್​ ಕಂಡಿತು. ಆ ಬಳಿಕ ಅವರು ಚಿಕಿತ್ಸೆ ಪಡೆಯುವ ಸಲುವಾಗಿ ವಿದೇಶಕ್ಕೆ ತೆರಳಿದರು. ಹಾಗಂತ ಅವರು ಎಲ್ಲ ದಿನವೂ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿಲ್ಲ. ಚಿಕಿತ್ಸೆ ನಡುವೆ ಹಲವು ಊರುಗಳನ್ನು ಸುತ್ತುತ್ತ, ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಎಂಜಾಯ್​ ಮಾಡುತ್ತಿದ್ದಾರೆ. ಅದರ ಜೊತೆ ಫೋಟೋಶೂಟ್​ ಮಾಡಿಸುವತ್ತಲೂ ಗಮನ ಹರಿಸಿದ್ದಾರೆ. ಅಭಿಮಾನಿಗಳು ಈ ಫೋಟೋಗಳನ್ನು ಮೆಚ್ಚಿಕೊಂಡಿದ್ದಾರೆ.

ಸಮಂತಾ ರುತ್​ ಪ್ರಭು ಅವರು ಯಾವ ಡ್ರೆಸ್​ ಧರಿಸಿದರೂ ಸೂಪರ್ ಆಗಿ ಕಾಣುತ್ತಾರೆ. ಗ್ಲಾಮರಸ್​ ಆಗಿ ಪೋಸ್​ ನೀಡಲು ಅವರು ಹಿಂದೇಟು ಹಾಕುವವರಲ್ಲ. ಸೀರೆ ಧರಿಸಿಯೂ ಅವರು ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ವೈರಲ್​ ಆಗಿರುವ ಈ ಫೋಟೋ ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಇತ್ತೀಚೆಗೆ ಸಮಂತಾ ಅವರಿಗೆ ಸೀರೆ ಬಗ್ಗೆ ವಿಶೇಷ ಒಲವು ಮೂಡಿದಂತಿದೆ. ಬಣ್ಣಬಣ್ಣದ ಸೀರೆ ಧರಿಸಿ ಅವರು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಫ್ಯಾನ್ಸ್​ ವಲಯದಲ್ಲಿ ಈ ಫೋಟೋಸ್​ ವೈರಲ್​ ಆಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ಹೆಚ್ಚಾಗಿದೆ ಸಮಂತಾ ಓಡಾಟ; ಹಿಂದಿ ಸಿನಿಮಾ ಮಾಡ್ತಾರಾ?

ನಟ ನಾಗಚೈತನ್ಯ ಅವರ ಜೊತೆಗಿನ ದಾಂಪತ್ಯವನ್ನು ಕಡಿದುಕೊಂಡ ಬಳಿಕ ಸಮಂತಾ ಅವರ ಬದುಕಿನಲ್ಲಿ ಹೊಸ ಇನ್ನಿಂಗ್ಸ್​ ಆರಂಭ ಆಯಿತು. ಸಿನಿಮಾಗಳ ಆಯ್ಕೆಯಲ್ಲಿ ಅವರು ಬೇರೆಯದೇ ನಿಯಮ ಪಾಲಿಸಲು ಆರಂಭಿಸಿದರು. ಪಾತ್ರಕ್ಕೆ ಅನಿವಾರ್ಯ ಎನಿಸಿದಾಗ ಯಾವುದೇ ಮಡಿವಂತಿಕೆ ಇಲ್ಲದೇ ಅಭಿನಯಿಸಲು ಶುರು ಮಾಡಿದರು. ಸದ್ಯಕ್ಕೆ ಅವರಿಗೆ ಸಖತ್​ ಬೇಡಿಕೆ ಇದೆ. ತೆಲುಗು ಮಾತ್ರವಲ್ಲದೇ ಬಾಲಿವುಡ್​ನಿಂದಲೂ ಹೆಚ್ಚು ಆಫರ್​ಗಳು ಅವರಿಗೆ ಬರುತ್ತಿವೆ. ವೆಬ್​ ಸಿರೀಸ್​ ಲೋಕದಲ್ಲೂ ಸಮಂತಾಗೆ ಭಾರಿ ಡಿಮ್ಯಾಂಡ್​ ಸೃಷ್ಟಿಯಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.