‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ: ಹೊಸ ದಿನಾಂಕದತ್ತ ಚಿತ್ರತಂಡದ ಚಿತ್ತ

Samantha Ruth Prabhu movie: ‘ಟಾಕ್ಸಿಕ್’ ಸಿನಿಮಾದ ದಿನಾಂಕ ಬದಲಾವಣೆ ಆದ ಬಳಿಕ ಅದರ ಪರಿಣಾಮದಿಂದಲೋ ಏನೋ ಎಷ್ಟೋಂದು ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾವಣೆ ಆಗಿವೆ, ಈಗಲೂ ಆಗುತ್ತಲೇ ಇವೆ. ‘ಉಸ್ತಾದ್ ಭಗತ್ ಸಿಂಗ್’, ‘ಡಕಾಯತ್’, ‘ಪೆದ್ದಿ’ ಸಿನಿಮಾಗಳ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಯ್ತು. ಇದೀಗ ಸಮಂತಾ ಋತ್ ಪ್ರಭು ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಮಾ ಇಂಟಿ ಬಂಗಾರಂ’ (Maa Inti Bangaram) ಬಿಡುಗಡೆಯ ದಿನಾಂಕದಲ್ಲಿ ಬದಲಾವಣೆಯಾಗಿದೆ.

‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ: ಹೊಸ ದಿನಾಂಕದತ್ತ ಚಿತ್ರತಂಡದ ಚಿತ್ತ
Maa Inti Bangaram

Updated on: May 06, 2026 | 7:53 PM

ಇತ್ತೀಚೆಗೆ ಸಿನಿಮಾಗಳ ಬಿಡುಗಡೆ ದಿನಗಳು ಪದೇ ಪದೇ ಬದಲಾವಣೆ ಆಗುತ್ತಲೇ ಇವೆ. ‘ಟಾಕ್ಸಿಕ್’ (Toxic) ಸಿನಿಮಾದ ದಿನಾಂಕ ಬದಲಾವಣೆ ಆದ ಬಳಿಕ ಅದರ ಪರಿಣಾಮದಿಂದಲೋ ಏನೋ ಎಷ್ಟೋಂದು ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾವಣೆ ಆಗಿವೆ, ಈಗಲೂ ಆಗುತ್ತಲೇ ಇವೆ. ‘ಉಸ್ತಾದ್ ಭಗತ್ ಸಿಂಗ್’, ‘ಡಕಾಯತ್’, ‘ಪೆದ್ದಿ’ ಸಿನಿಮಾಗಳ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಯ್ತು. ಇದೀಗ ಸಮಂತಾ ಋತ್ ಪ್ರಭು ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಮಾ ಇಂಟಿ ಬಂಗಾರಂ’ (Maa Inti Bangaram) ಬಿಡುಗಡೆಯ ದಿನಾಂಕದಲ್ಲಿ ಬದಲಾವಣೆಯಾಗಿದೆ. ಈ ಹಿಂದೆ ನಿಗದಿಯಾಗಿದ್ದ ದಿನಾಂಕದಂದು ಚಿತ್ರ ತೆರೆಗೆ ಬರುತ್ತಿಲ್ಲ, ಬದಲಿಗೆ ಬೇರೆ ದಿನಾಂಕವನ್ನು ರಿಲೀಸ್​​ಗೆ ನಿಗದಿ ಮಾಡಲಾಗುತ್ತಿದೆ.

ಈ ಹಿಂದೆ ‘ಮಾ ಇಂಟಿ ಬಂಗಾರಂ’ ಸಿನಿಮಾವು ಮೇ 15 ರಂದು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಚಿತ್ರತಂಡವೂ ಸಹ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿತ್ತು. ಆದರೆ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಇನ್ನೂ ಬಾಕಿ ಇರುವ ಕಾರಣ ಹಾಗೂ ಬಾಕ್ಸ್ ಆಫೀಸ್​​ನಲ್ಲಿ ಕೆಲವು ದೊಡ್ಡ ಸಿನಿಮಾಗಳು ಆ ಸಮಯದಲ್ಲಿ ಬಿಡುಗಡೆ ಆಗುತ್ತಿರುವ ಕಾರಣ, ಬಾಕ್ಸ್ ಆಫೀಸ್ ಪೈಪೋಟಿಯನ್ನು ತಪ್ಪಿಸಲೆಂದು ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕ ಬದಲಾವಣೆಗೆ ಮುಂದಾಗಿದೆ.

ಆರಂಭದಲ್ಲಿ ಈ ಚಿತ್ರವನ್ನು ಏಪ್ರಿಲ್ ಅಥವಾ ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಬಳಿಕ ಮೇ 15 ರಂದು ಚಿತ್ರವನ್ನು ಅದ್ಧೂರಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಬೇಸಿಗೆಯ ರಜಾದಿನಗಳ ಲಾಭವನ್ನು ಪಡೆಯಲು ಚಿತ್ರತಂಡ ಈ ದಿನಾಂಕವನ್ನು ಆಯ್ದುಕೊಂಡಿತ್ತು, ಆದರೆ ಈಗ ಮತ್ತೆ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಈಗಾಗಲೇ ಸಿನಿಮಾದ ಟೀಸರ್, ಹಾಡು ಬಿಡುಗಡೆ ಆಗಿದ್ದು, ಸಖತ್ ಕುತೂಹಲ ಮೂಡಿಸಿವೆ. ಸಮಂತಾ, ಮುದ್ದು ಸೊಸೆಯಾಗಿ ಜೊತೆಗೆ ಆಕ್ಷನ್ ಕ್ವೀನ್ ಆಗಿಯೂ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ಸಮಂತಾ ಜೊತೆಗೆ ಕನ್ನಡದ ನಟ ದಿಗಂತ್ ಸಹ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣವೂ ಸಹ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದಿರುವುದು ವಿಶೇಷ. ಸಿನಿಮಾವನ್ನು ಸಮಂತಾರ ಮೆಚ್ಚಿನ ನಿರ್ದೇಶಕಿ ಬಿವಿ ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಈ ಇಬ್ಬರಿಗೂ ಇದು ಎರಡನೇ ಸಿನಿಮಾ ಆಗಿದೆ. ಸಿನಿಮಾಕ್ಕೆ ಸಮಂತಾರ ಪತಿ, ನಿರ್ದೇಶಕ ರಾಜ್ ನಿಧಿಮೋರು ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us