AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂದವರಿಗೆ ಹಳೆಯ ಸೀತಾ ಪಾತ್ರಧಾರಿ ತಿರುಗೇಟು

ರಾಮನಂದ್ ಸಾಗರ್ ಅವರ ‘ರಾಮಾಯಣ’ದ ಸೀತೆ ದೀಪಿಕಾ ಚಿಖಾಲಿಯಾ, ಹೊಸ ಸಿನಿಮಾದಲ್ಲಿ ಸೀತೆಯಾಗಿ ನಟಿಸುತ್ತಿರುವ ಸಾಯಿ ಪಲ್ಲವಿ ಕಾಸ್ಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಾಯಿ ಪಲ್ಲವಿ ಅದ್ಭುತ ನಟಿ ಎಂದಿರುವ ದೀಪಿಕಾ, ತುಳಸಿದಾಸರ ರಾಮಾಯಣದಲ್ಲಿನ ಸೀತೆಯ ದೈಹಿಕ ಲಕ್ಷಣಗಳನ್ನು ನೆನಪಿಸಿಕೊಂಡು, ಹೊಸ ಚಿತ್ರದ ಝಲಕ್ ನೋಡಿದ ಬಳಿಕವಷ್ಟೇ ಅವರ ಲುಕ್ ಬಗ್ಗೆ ಹೇಳಲು ಸಾಧ್ಯ ಎಂದಿದ್ದಾರೆ.

ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂದವರಿಗೆ ಹಳೆಯ ಸೀತಾ ಪಾತ್ರಧಾರಿ ತಿರುಗೇಟು
ಸಾಯಿ ಪಲ್ಲವಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 24, 2026 | 8:07 AM

Share

ಮುಖ್ಯಾಂಶಗಳು

  • ಸಾಯಿ ಪಲ್ಲವಿ ನಟನೆಗೆ ದೀಪಿಕಾ ಮೆಚ್ಚುಗೆ
  • ಅಂದು ರಾಮನಂದ್ ಸಾಗರ್ ಸೀತೆಯನ್ನು ಹುಡುಕಿದ ಮಾನದಂಡಗಳಿವು
  • ರಣಬೀರ್, ಯಶ್ ಜೊತೆ ದಶರಥನಾಗಿ ಮರಳಲಿದ್ದಾರೆ ಹಳೆಯ ರಾಮ

ನಿತೇಶ್ ತಿವಾರಿ ನಿರ್ದೇಶನದ ಹೊಸ ‘ರಾಮಾಯಣ’ ಸಿನಿಮಾ ಬರುತ್ತಿದೆ. ಇದರಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಈ ಕಾಸ್ಟಿಂಗ್ ಬಗ್ಗೆ ದೀಪಿಕಾ ಚಿಖಾಲಿಯಾ ಮಾತನಾಡಿದ್ದಾರೆ. ವಿದೇಶಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ರಾಮನಂದ್ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ದೀಪಿಕಾ ಚಿಖಾಲಿಯಾ ನಟಿಸಿದ್ದರು.

ಸಾಯಿ ಪಲ್ಲವಿ ಅದ್ಭುತ ನಟಿ

ದೀಪಿಕಾ ಅವರು ಸಾಯಿ ಪಲ್ಲವಿ ನಟನೆಯನ್ನು ಹೊಗಳಿದ್ದಾರೆ. ‘ನಾನು ಸಾಯಿ ಪಲ್ಲವಿ ಅವರ ಸಿನಿಮಾಗಳನ್ನು ನೋಡಿದ್ದೇನೆ. ಅವರು ತುಂಬಾ ಅದ್ಭುತವಾದ ನಟಿ. ಆದರೆ ಅವರು ಸೀತೆಯ ಪಾತ್ರದಲ್ಲಿ ಹೇಗೆ ಕಾಣಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ಸಿನಿಮಾದ ಝಲಕ್ ನೋಡಿದ ಮೇಲಷ್ಟೇ ನಮಗೆ ಒಂದು ಕಲ್ಪನೆ ಸಿಗುತ್ತದೆ. ಸದ್ಯಕ್ಕೆ ನನಗೆ ಈ ಬಗ್ಗೆ ಯಾವುದೇ ಕಲ್ಪನೆ ಇಲ್ಲ’ ಎಂದು ದೀಪಿಕಾ ಹೇಳಿದ್ದಾರೆ. ಹೊಸ ಸಿನಿಮಾದ ನಟರೆಲ್ಲರೂ ಪ್ರತಿಭಾವಂತರು. ಅವರು ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೊಂಡರೆ ಚಿತ್ರ ಚೆನ್ನಾಗಿರಲಿದೆ ಎಂದಿದ್ದಾರೆ.

ರಾಮನಂದ್ ಸಾಗರ್ ಸೀತೆಯನ್ನು ಹುಡುಕಿದ ನೆನಪು

ತುಳಸಿದಾಸರ ರಾಮಾಯಣದಲ್ಲಿ ಸೀತೆಯ ರೂಪದ ಬಗ್ಗೆ ಕೆಲವು ವಿವರಣೆಗಳಿವೆ. ಬಾದಾಮಿ ಆಕಾರದ ಕಣ್ಣುಗಳು ಇರಬೇಕು. ನಿರ್ದಿಷ್ಟ ಎತ್ತರ ಹಾಗೂ ಕೇಶರಾಶಿ ಇರಬೇಕು. ಇಂತಹ ದೈಹಿಕ ಲಕ್ಷಣಗಳುಳ್ಳ ನಟಿಯನ್ನು ರಾಮನಂದ್ ಸಾಗರ್ ಹುಡುಕುತ್ತಿದ್ದರು. ಆ ಲಕ್ಷಣಗಳು ನನ್ನಲ್ಲಿದ್ದವು. ಅದಕ್ಕಾಗಿಯೇ ನನಗೆ ಸೀತೆಯ ಪಾತ್ರ ಸಿಕ್ಕಿತ್ತು ಎಂದು ದೀಪಿಕಾ ನೆನಪಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಪಾತ್ರಗಳ ಕಾಸ್ಟಿಂಗ್ ವಿಭಿನ್ನವಾಗಿರುತ್ತಿದೆ ಎಂದಿದ್ದಾರೆ.

ನಿತೇಶ್ ತಿವಾರಿ ‘ರಾಮಾಯಣ’

ಈ ಹೊಸ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಳೆಯ ರಾಮಾಯಣದ ‘ರಾಮ’ ಅರುಣ್ ಗೋವಿಲ್ ಅವರು ಈ ಚಿತ್ರದಲ್ಲಿ ದಶರಥ ಮಹಾರಾಜನ ಪಾತ್ರ ಮಾಡುತ್ತಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿದ್ದಾರೆ. ಈ ಚಿತ್ರದ ಝಲಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Follow Us
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ