
ಬಾಲಿವುಡ್ (Bollywood) ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಶೇಷ ಸಾಂಗ್ ಮೂಲಕ ಗಮನ ಸೆಳೆದ ಅನೇಕ ಸಾಂಗ್ಗಳು ಇವೆ. ಹಲವು ಬಾರಿ ಸಿನಿಮಾ ಫ್ಲಾಪ್ ಆಗಿದ್ದರೂ ಆ ಚಿತ್ರದ ಐಟಂ ಸಾಂಗ್ ಹಿಟ್ ಆದ ಉದಾಹರಣೆ ಇದೆ. ಕಳೆದ ಕೆಲ ವರ್ಷಗಳಲ್ಲಿ ಐಟಂ ನಂಬರ್ಗಳು ಸಿನಿಮಾದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಿವೆ. ಈ ಹಿಂದೆ ಕೆಲವೇ ಕೆಲವು ನಟಿಯರು ಮಾತ್ರ ಅದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಟಾಪ್ ನಟಿಯರೂ ಈ ರೀತಿಯ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಐಟಂ ಸಾಂಗ್‌ಗಳನ್ನು ಮಾಡಲು ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆದ ಉದಾಹರಣೆ ಸಾಕಷ್ಟಿದೆ.
ಮಲೈಕಾದಿಂದ ಹಿಡಿದು ಸನ್ನಿ ಲಿಯೋನ್‌ವರೆಗೆ ಅನೇಕ ನಟಿಯರು ಚಿತ್ರಗಳಲ್ಲಿ ಐಟಂ ಹಾಡುಗಳನ್ನು ಮಾಡಿದ್ದಾರೆ. 4ರಿಂದ 5 ನಿಮಿಷದ ಹಾಡಿಗೆ ಹೆಜ್ಜೆ ಹಾಕೋಕೆ ಕೋಟಿಗಟ್ಟಲೆ ಸಂಭಾವನೆ ಪಡೆದ ಅನೇಕ ಹೀರೋಯಿನ್ಗಳು ಇದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ್ದು ಎಂದರೆ ಕೇವಲ 5 ನಿಮಿಷಗಳ ಡ್ಯಾನ್ಸ್ಗೆ 5 ಕೋಟಿ ರೂ ಪಡೆದಿದ್ದು. ಇದು ಇಲ್ಲಿಯವರೆಗಿನ ಅತಿ ದೊಡ್ಡ ಶುಲ್ಕ ಎಂದು ಪರಿಗಣಿಸಲಾಗಿದೆ.
ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲು ಹೆಸರುವಾಸಿಯಾದ ಅನೇಕ ನಟಿಯರಿದ್ದಾರೆ. ಈ ಪೈಕಿ ಮಲೈಕಾ ಅರೋರಾ ಕೂಡ ಒಬ್ಬರು. ವರದಿಗಳ ಪ್ರಕಾರ ಪ್ರತಿ ಹಾಡಿಗೆ ಅವರು 50 ಲಕ್ಷದಿಂದ 1 ಕೋಟಿ ರೂ ಪಡೆಯುತ್ತಾರೆ. ಕರೀನಾ ಕಪೂರ್ ಐಟಂ ಡ್ಯಾನ್ಸ್ಗೆ 1.5 ಕೋಟಿ ರೂಪಾಯಿ ಪಡೆಯುತ್ತಾರೆ. ತಮನ್ನಾ ಭಾಟಿಯಾ ಒಂದು ಹಾಡಿಗೆ ರೂ. 1 ಕೋಟಿ ರೂ., ಕತ್ರಿನಾ ಕೈಫ್ ವಿಶೇಷ ಸಾಂಗ್ನಲ್ಲಿ ಕಾಣಿಸಿಕೊಳ್ಳಲು 2 ಕೋಟಿ ರೂಪಾಯಿ ಪಡೆಯುತ್ತಾರೆ. ಬಾಲಿವುಡ್‌ನ ದುಬಾರಿ ಕಲಾವಿದರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರು. ಪ್ರತಿ ಹಾಡಿಗೆ 2-3 ಕೋಟಿ ರೂ ಪಡೆಯುತ್ತಾರೆ. ಅತ್ಯಂತ ದುಬಾರಿ ನಟಿ ಬೇರೆ ಎಂದತೆ ಅದು ಸಮಂತಾ.
ಇದನ್ನೂ ಓದಿ: ಅಟ್ಲಿ ಜೊತೆಗಿನ ಅಲ್ಲು ಅರ್ಜುನ್ ಸಿನಿಮಾಗೆ ಸಮಂತಾ ರುತ್ ಪ್ರಭು ನಾಯಕಿ?
ಅಲ್ಲು ಅರ್ಜುನ್ ಅವರ ‘ಪುಷ್ಪ’ ಚಿತ್ರದಲ್ಲಿ ‘ಹೂ ಅಂತೀಯಾ ಮಾವ..’ ಹಾಡು ಗಮನ ಸೆಳೆದಿತ್ತು. ಈ ಹಾಡಿಗಾಗಿ ಸಮಂತಾ ಅವರು 5 ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಐದು ನಿಮಿಷ ಕಾಣಿಸಿಕೊಂಡ ಸಮಂತಾ ಅವರ ವೃತ್ತಿಜೀವನದಲ್ಲಿ ಮೊದಲ ವಿಶೇಷ ಐಟಂ ಸಾಂಗ್ ಇದಾಗಿದ್ದು, ಆ ಹಾಡು ಸೂಪರ್ ಹಿಟ್ ಆಯಿತು. ಆರಂಭದಲ್ಲಿ ಅವರು ನಟಿಸಲು ಹಿಂಜರಿದಿದ್ದರು. ನಂತರ ಒಪ್ಪಿ ಖುಷಿಯಿಂದ ಡ್ಯಾನ್ಸ್ ಮಾಡಿದರು. ಸಖತ್ ಬೋಲ್ಡ್ ಆಗಿ ಅವರು ಗಮನ ಸೆಳದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ