ದಾಂಪತ್ಯ ಜೀವನದಿಂದ ಹೊರ ಬಂದ ಬೆನ್ನಲ್ಲೇ ಟಾಲಿವುಡ್ ನಟಿ ಸಮಂತಾ ರಿಷಿಕೇಶಕ್ಕೆ ತೆರಳಿದ್ದಾರೆ. ತಾವು ತಂಗಿರುವ ಬೆಟ್ಟಗಳ ನಡುವಿರುವ ರೆಸಾರ್ಟ್ನಿಂದ ಮನಮೋಹಕ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸುಂದರವಾಗಿರುವ ಈಜುಕೊಳದ ಚಿತ್ರವನ್ನೂ ಅವರು ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಇವುಗಳಿಗಿಂತ ಹೆಚ್ಚಾಗಿ ಸದ್ಯ ಚರ್ಚೆಯಾಗುತ್ತಿರುವುದು ಸಮಂತಾ ಹಂಚಿಕೊಂಡಿರುವ ಆಶ್ರಮದ ಚಿತ್ರಗಳು. ಆಶ್ರಮವೊಂದರ ದ್ವಾರದ ಹಾಗೂ ಅಲ್ಲಿರುವ ಫಲಕವೊಂದರ ಚಿತ್ರಗಳನ್ನು ಸಮಂತಾ ಪೋಸ್ಟ್ ಮಾಡಿದ್ದು, ಅವರು ಆಶ್ರಮಕ್ಕೆ ತೆರಳಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
ರಿಷಿಕೇಶದಲ್ಲಿರುವ ಶ್ರೀ ಸ್ವಾಮಿ ಪುರುಷೋತ್ತಮಾನಂದ ಜೀ ಮಹರಾಜ್ ವಸಿಷ್ಠ್ ಆಶ್ರಮದ ದ್ವಾರದ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಜೊತೆಗೆ ‘ಸಂತಸ ಬೇರೆಲ್ಲೂ ಇಲ್ಲ, ನಮ್ಮೊಳಗಿದೆ’ ಎಂದು ಬರೆದುಕೊಂಡಿರುವ ಫಲಕದ ಚಿತ್ರವನ್ನೂ ಹಂಚಿಕೊಂಡಿದ್ದು, ಸಮಂತಾ ರಜೆಯ ಅವಧಿಯಲ್ಲಿ ಆಶ್ರಮಕ್ಕೂ ತೆರಳಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಿದೆ. ಒಟ್ಟಿನಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಸಮಂತಾ ತಮ್ಮನ್ನು ತಾವು ಸದಾ ಕ್ರಿಯಾಶೀಲರಾಗಿಟ್ಟುಕೊಂಡಿದ್ದಾರೆ.
ಸಮಂತಾ ಹಂಚಿಕೊಂಡ ಆಶ್ರಮದ ಚಿತ್ರಗಳು ಇಲ್ಲಿವೆ:
ಕೆಲ ಸಮಯದ ಹಿಂದಷ್ಟೇ ಸಾಮಾಜಿಕ ಜಾಲತಾಣಗಳ ಮುಖಾಂತರ ಸಮಂತಾ ಹಾಗೂ ನಾಗ ಚೈತನ್ಯ ಪರಸ್ಪರ ದೂರವಾಗುತ್ತಿರುವ ನಿರ್ಧಾರವನ್ನು ಘೋಷಿಸಿದ್ದರು. ಇದೊಂದು ಕಠಿಣ ನಿರ್ಧಾರವಾಗಿದ್ದು, ಬಹಳ ನೋವು ನೀಡುತ್ತಿದೆ ಎಂದೂ ಅವರು ಬರೆದುಕೊಂಡಿದ್ದರು. ಇತ್ತೀಚೆಗೆ ಅವರು ಡಿವೋರ್ಸ್ ಕುರಿತು ಹರಿದಾಡುತ್ತಿರುವ ವೈಯಕ್ತಿಕ ದಾಳಿಯ ವಿರುದ್ಧ ಮಾತನಾಡಿ, ಅವುಗಳನ್ನು ಸಂಪೂರ್ಣ ನಿರಾಕರಿಸಿದ್ದರು.
ಇದನ್ನೂ ಓದಿ:
‘ಇಲ್ಲಿ ಕೂರಲು ಭಯವಾಗುತ್ತಿದೆ’; ಡಿವೋರ್ಸ್ ಬಳಿಕ ಮೊದಲ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಸಮಂತಾ ಮಾತು