ಇಬ್ಬರು ಕನ್ನಡಿಗರ ಮಧ್ಯೆ ಸಿಕ್ಕಿಹಾಕಿಕೊಂಡ ಸಮಂತಾ

ಟಾಲಿವುಡ್ ನಟಿ ಸಮಂತಾ ನಟಿಸಿ, ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಸಮಂತಾ ಸಾಂಪ್ರದಾಯಿಕ ಸೊಸೆ ಹಾಗೂ ರಗಡ್ ಭೂಗತ ಮಹಿಳೆಯಾಗಿ ಎರಡು ವಿಭಿನ್ನ ಶೇಡ್‌ಗಳಲ್ಲಿ ಮಿಂಚಿದ್ದಾರೆ. ಕನ್ನಡಿಗ ದಿಗಂತ್ ಮಂಚಾಲೆ ಹಾಗೂ ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಜೂನ್ 19ರಂದು ಚಿತ್ರ ತೆರೆ ಕಾಣಲಿದೆ.

ಇಬ್ಬರು ಕನ್ನಡಿಗರ ಮಧ್ಯೆ ಸಿಕ್ಕಿಹಾಕಿಕೊಂಡ ಸಮಂತಾ
ಮಾ ಇಂಟಿ ಬಂಗಾರಂ

Updated on: May 26, 2026 | 12:53 PM

ಟಾಲಿವುಡ್​​ನ ಸ್ಟಾರ್ ನಾಯಕಿ ಸಮಂತಾ (Samantha) ಹಾಗೂ ಕನ್ನಡಿಗ ದಿಗಂತ್ ಮಂಚಾಲೆ ಅಭಿನಯದ ‘ಮಾ ಇಂಟಿ ಬಂಗಾರಂ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಸಮಂತಾ ಅವರು ಆ್ಯಕ್ಷನ್ ಮೆರೆದಿದ್ದಾರೆ. ಅವರು ಈ ಚಿತ್ರಕ್ಕೆ ನಿರ್ಮಾಪಕಿ ಕೂಡ ಹೌದು. ಸಮಂತಾ ಅವರು ಕೇವಲ ನಾಯಕಿಯಾಗಿ ಮಾತ್ರವಲ್ಲದೆ, ನಿರ್ಮಾಪಕಿಯಾಗಿಯೂ ಈ ಚಿತ್ರದ ಮೂಲಕ ಗಮನ ಸೆಳೆಯಲಿದ್ದಾರೆ.

ಟ್ರೇಲರ್‌ನಲ್ಲಿ ಸಮಂತಾ ಅವರ ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಟ್ರೇಲರ್‌ನಲ್ಲಿ ಸ್ಯಾಮ್ ಎರಡು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೆಡೆ ಅತ್ಯಂತ ಸಾಂಪ್ರದಾಯಿಕ ಹಾಗೂ ಮುಗ್ಧ ಸೊಸೆಯಾಗಿ ಇಷ್ಟವಾಗುವ ಅವರು, ಮತ್ತೊಂದೆಡೆ ಅನಿವಾರ್ಯವಾಗಿ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟು ಗೂಂಡಾಗಳ ಎದೆಯಲ್ಲಿ ನಡುಕ ಹುಟ್ಟಿಸುವ ರಗಡ್ ಮಹಿಳೆಯಾಗಿ ಅಬ್ಬರಿಸಿದ್ದಾರೆ. ‘ನನ್ನ ಜೀವ ಅಪಾಯದಲ್ಲಿದ್ದರೂ ಸಹ ನನ್ನ ಕುಟುಂಬಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೇನೆ’ ಎಂಬ ಸಮಂತಾ ಬಾಯಿಂದ ಬರುವ ಪವರ್‌ಫುಲ್ ಡೈಲಾಗ್‌ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

ಇದನ್ನೂ ಓದಿ: ಟಾಲಿವುಡ್​​​ನಲ್ಲಿ ಮತ್ತೊಂದು ಸಮಂತಾ ಆಗ್ತಾರಾ ಜಾನ್ವಿ ಕಪೂರ್ ?

ಸಮಂತಾ ‘ಓ ಬೇಬಿ’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರವನ್ನು ನಿರ್ದೇಶಿಸಿದ್ದ ನಂದಿನಿ ರೆಡ್ಡಿ ಅವರೇ ‘ಮಾ ಇಂಟಿ ಬಂಗಾರಂ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಮಂತಾ ಪತಿ, ನಿರ್ದೇಶಕ ರಾಜ್ ನಿಡಿಮೋರು ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಮಂತಾ ತಮ್ಮದೇ ಆದ ‘ತ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಮಾ ಇಂಟಿ ಬಂಗಾರಂ ಟ್ರೇಲರ್

YouTube video player

ಕನ್ನಡಿಗ ದಿಗಂತ್ ಸೇರಿದಂತೆ ತಾರಾಗಣದಲ್ಲಿ ಯಾರಿದ್ದಾರೆ?

ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಒಂದಾಗಿದೆ. ವಿಶೇಷವಾಗಿ ಕನ್ನಡದ ಚಾಕಲೇಟ್ ಹೀರೊ ದಿಗಂತ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಅವರೊಂದಿಗೆ ಮತ್ತೋರ್ವ ಕನ್ನಡಿಗ ಗುಲ್ಶನ್ ದೇವಯ್ಯ ಇದ್ದಾರೆ. ಇದರಲ್ಲಿ ದಿಗಂತ್ ಹಾಲಿ ಪತಿ ಆದರೆ, ಗುಲ್ಶನ್ ಮಾಜಿ ಪತಿ ಎನ್ನಲಾಗಿದೆ. ಇಬ್ಬರ ಮಧ್ಯೆ ಸಮಂತಾ ಸಿಕ್ಕಿ ಹಾಕಿಕೊಳ್ಳುತ್ತಾರೆ. ಜೂನ್ 19 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us