AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆಯ ಮೊತ್ತಕ್ಕೆ ಮಾರಾಟ ಆಗಲಿದೆ ‘ರಾಮಾಯಣ’ ಆಡಿಯೋ ಹಕ್ಕು

Ramayana movie: ‘ರಾಮಾಯಣ’ ಸಿನಿಮಾದ ಪ್ರಚಾರವನ್ನು ಬಲು ಅದ್ಧೂರಿಯಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾಡುತ್ತಿದ್ದಾರೆ. ಸಿನಿಮಾದ ಭಾರತದ ವಿತರಣೆ ಹಕ್ಕುಗಳ ಮಾರಾಟವನ್ನು ನಿರ್ಮಾಪಕರು ಇತ್ತೀಚೆಗಷ್ಟೆ ಮಾಡಿದ್ದು, ಕರಣ್ ಜೋಹರ್ ಹಾಗೂ ಇತರೆ ಕೆಲವರು ಸುಮಾರು 250 ಕೋಟಿಗೆ ಖರೀದಿ ಮಾಡಿದ್ದಾರೆ. ಇದೀಗ ಸಿನಿಮಾದ ಆಡಿಯೋ ಹಕ್ಕುಗಳನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಲು ನಮಿತ್ ಮಲ್ಹೋತ್ರಾ ಪ್ರಯತ್ನಿಸುತ್ತಿದ್ದಾರೆ.

ದಾಖಲೆಯ ಮೊತ್ತಕ್ಕೆ ಮಾರಾಟ ಆಗಲಿದೆ ‘ರಾಮಾಯಣ’ ಆಡಿಯೋ ಹಕ್ಕು
Ramayana Trailer
ಮಂಜುನಾಥ ಸಿ.
| Edited By: |

Updated on:Jul 30, 2026 | 10:05 AM

Share

ರಣ್​​ಬೀರ್ ಕಪೂರ್, ಯಶ್ (Yash), ಸಾಯಿ ಪಲ್ಲವಿ ಇನ್ನೂ ಹಲವಾರು ಸ್ಟಾರ್ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಬಲು ಅದ್ಧೂರಿಯಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾಡುತ್ತಿದ್ದಾರೆ. ಸಿನಿಮಾದ ಭಾರತದ ವಿತರಣೆ ಹಕ್ಕುಗಳ ಮಾರಾಟವನ್ನು ನಿರ್ಮಾಪಕರು ಇತ್ತೀಚೆಗಷ್ಟೆ ಮಾಡಿದ್ದು, ಕರಣ್ ಜೋಹರ್ ಹಾಗೂ ಇತರೆ ಕೆಲವರು ಸುಮಾರು 250 ಕೋಟಿಗೆ ಖರೀದಿ ಮಾಡಿದ್ದಾರೆ. ಇದೀಗ ಸಿನಿಮಾದ ಆಡಿಯೋ ಹಕ್ಕುಗಳನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಲು ನಮಿತ್ ಮಲ್ಹೋತ್ರಾ ಪ್ರಯತ್ನಿಸುತ್ತಿದ್ದಾರೆ.

‘ರಾಮಾಯಣ’ ಸಿನಿಮಾಕ್ಕೆ ವಿಶ್ವ ಸಿನಿಮಾದ ಇಬ್ಬರು ದಿಗ್ಗಜ ಸಂಗೀತ ನಿರ್ದೇಶಕರುಗಳು ಸಂಗೀತ ನೀಡಿದ್ದಾರೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕರುಗಳಾದ ಎಆರ್ ರೆಹಮಾನ್ ಮತ್ತು ಹಾಲಿವುಡ್​​ನ ಟಾಪ್ ಸಂಗೀತ ನಿರ್ದೇಶಕ ಹಾನ್ಸ್ ಜೀಮರ್ ಅವರುಗಳು ಒಟ್ಟಿಗೆ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ವಿಶ್ವದ ಇಬ್ಬರು ಅತ್ಯುತ್ತಮ ಸಂಗೀತ ನಿರ್ದೇಶಕರು ಸಂಗೀತ ನೀಡಿರುವ ಸಿನಿಮಾಕ್ಕೆ ಸಹಜವಾಗಿಯೇ ಭಾರಿ ದೊಡ್ಡ ಮೊತ್ತವನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ನಿರೀಕ್ಷಿಸುತ್ತಿದ್ದಾರೆ.

‘ರಾಮಾಯಣ’ ಸಿನಿಮಾದ ಸಂಗೀತ ಹಕ್ಕುಗಳ 100 ಕೋಟಿ ರೂಪಾಯಿಗೆ ಮಾರಾಟ ಮಾಡಲು ನಿರ್ಮಾಪಕ ನಮಿತ್ ಮಲ್ಹೋತ್ರಾ ಯತ್ನಿಸುತ್ತಿದ್ದಾರೆ. ಮಾಹಿತಿಯ ಪ್ರಕಾರ, ಭಾರತದ ಪ್ರಮುಖ ಸಂಗೀತ ಸಂಸ್ಥೆಗಳು ಈ ಹಕ್ಕುಗಳನ್ನು ಪಡೆಯಲು ಆಸಕ್ತಿ ತೋರಿದ್ದು, ಅವುಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಚಿತ್ರದ ಮೇಲಿರುವ ಭಾರೀ ನಿರೀಕ್ಷೆ ಮತ್ತು ಅದರ ಜಾಗತಿಕ ವ್ಯಾಪ್ತಿಯೇ ಈ ಒಪ್ಪಂದದ ಮೌಲ್ಯವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ಸಿನಿಮಾಕ್ಕೆ ಭಾರತದಲ್ಲಿ ಮಾತ್ರವಲ್ಲ ಹಾಲಿವುಡ್​​ನಲ್ಲೂ ಬೇಡಿಕೆ ಇರುವ ಕಾರಣ ಹಾಗೂ ಹಾಲಿವುಡ್ ಸ್ಟಾರ್ ಕಂಪೋಸರ್ ಹಾನ್ಸ್ ಜೀಮರ್ ಸಹ ಜೊತೆಗಿರುವ ಕಾರಣ, ಸಿನಿಮಾದ ಆಡಿಯೋಕ್ಕೆ ಬೇಡಿಕೆ ಸಹಜವಾಗಿಯೇ ವಿಶ್ವಮಟ್ಟದಲ್ಲಿ ಹೆಚ್ಚಿದೆ.

ಇದನ್ನೂ ಓದಿ:‘ರಾಮಾಯಣ’ ಶೂಟಿಂಗ್ ಸೆಟ್‌ನಲ್ಲಿ ಶಿವನ ಹಾಡುಗಳನ್ನು ದೊಡ್ಡದಾಗಿ ಹಾಕುತ್ತಿದ್ದ ನಟ ಯಶ್

ಸಿನಿಮಾದ ಸಣ್ಣ ಟೀಸರ್ ಅಷ್ಟೆ ಈ ವರೆಗೆ ಬಿಡುಗಡೆ ಮಾಡಲಾಗಿದೆ. ಟೀಸರ್​​ನ ಹಿನ್ನೆಲೆ ಸಂಗೀತ ಈಗಾಗಲೇ ಪ್ರೇಕ್ಷಕರನ್ನು ಸೆಳೆದಿದೆ. ಸಿನಿಮಾದ ಯಾವುದೇ ಹಾಡುಗಳನ್ನು ಈ ವರೆಗೆ ಚಿತ್ರತಂಡ ಬಿಡುಗಡೆ ಮಾಡಿಲ್ಲ. ಸಿನಿಮಾದ ಆಡಿಯೋ ಒಪ್ಪಂದಗಳು ಮುಗಿದ ಬಳಿಕವೇ ಹಾಡುಗಳು ಬಿಡುಗಡೆ ಆಗುವ ಸಾಧ್ಯತೆ ಇದೆ. ‘ರಾಮಾಯಣ’ ಸಿನಿಮಾಕ್ಕೆ ಭಾರತದ ಇನ್ಯಾವ ಸಿನಿಮಾಕ್ಕೂ ಹೂಡದಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಸಿನಿಮಾದ ಎರಡೂ ಭಾಗಗಳಿಗೆ ಸುಮಾರು 2000 ಕೋಟಿ ಹೂಡಿಕೆ ಮಾಡಲಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾದ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Tue, 28 July 26

Follow Us