
ಈ ಹಿಂದೆ ‘ಪಿಕೆ’ ಸಿನಿಮಾದಲ್ಲಿ ನಟ ಆಮಿರ್ ಖಾನ್ ಅವರು ಬೆತ್ತಲಾಗಿ ನಟಿಸಿದ್ದು ನಿಮಗೆ ನೆನಪಿರಬಹುದು. ಮಾನ ಮುಚ್ಚಿಕೊಳ್ಳಲು ಅವರು ಒಂದು ರೇಡಿಯೋ ಅಡ್ಡಲಾಗಿ ಹಿಡಿದುಕೊಂಡಿದ್ದರು. ಈಗ ಅದೇ ರೀತಿ ಜನಪ್ರಿಯ ನಟ ಸಂಪೂರ್ಣೇಶ್ ಬಾಬು ಅವರು ಬೆತ್ತಲಾಗಿದ್ದಾರೆ. ಅವರ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಅದರಲ್ಲಿ ಅವರು ನಗ್ನವಾಗಿ ನಟಿಸಿರುವುದು ಗೊತ್ತಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್ ವೈರಲ್ ಆಗುತ್ತಿದೆ. ಪೋಸ್ಟರ್ನ ಹಿಂದಿರುವ ಕಹಾನಿ ಏನೆಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.
ಟಾಲಿವುಡ್ನಲ್ಲಿ ಕಾಮಿಡಿ ಸಿನಿಮಾಗಳ ಮೂಲಕ ಹೆಸರಾದವರು ಸಂಪೂರ್ಣೇಶ್ ಬಾಬು. ಕಮರ್ಷಿಯಲ್ ಸಿನಿಮಾಗಳ ಅತಿರೇಕವನ್ನು ತಮ್ಮದೇ ಶೈಲಿಯಲ್ಲಿ ಲೇವಡಿ ಮಾಡುವಂತಹ ಚಿತ್ರಗಳಲ್ಲಿ ನಟಿಸಿ ಅವರು ಸಿಕ್ಕಾಪಟ್ಟೆ ಫೇಮಸ್ ಆದವರು. ಈಗ ಅವರು ‘ಕಾಲಿಫ್ಲವರ್’ ಶೀರ್ಷಿಕೆಯ ಹೊಸ ಸಿನಿಮಾ ಚಿತ್ರದಲ್ಲಿ ನಟಿಸುತ್ತಿದ್ದು, ಅದೇ ಚಿತ್ರದ ಪೋಸ್ಟರ್ನಲ್ಲಿ ಸಂಪೂರ್ಣ ಬೆತ್ತಲಾಗಿ ಪೋಸ್ ನೀಡಿದ್ದಾರೆ.
ಈ ಪೋಸ್ಟರ್ನಲ್ಲಿ ಕೆಲವು ಸುಳಿವು ಬಿಟ್ಟುಕೊಡಲಾಗಿದೆ. ಅಸೆಂಬ್ಲಿ ಎದುರುಗಡೆ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ. ಪೊಲೀಸರಿಂದ ಲಾಠಿ ಏಟು ತಿಂದು ಬಂದಿರುವ ಸಂಪೂರ್ಣೇಶ್ ಪೂರ್ತಿ ಬೆತ್ತಲಾಗಿ ನಿಂತುಕೊಂಡಿದ್ದಾರೆ. ಮಾನ ಮುಚ್ಚಿಕೊಳ್ಳಲು ಹೂಕೋಸು ಅಡ್ಡಲಾಗಿ ಹಿಡಿದುಕೊಂಡಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಮಾಧ್ಯಮದ ಕ್ಯಾಮಾರಾವೊಂದು ಸೆರೆ ಹಿಡಿಯುತ್ತಿದೆ. ಇವು ‘ಕಾಲಿಫ್ಲವರ್’ ಪೋಸ್ಟರ್ನಲ್ಲಿ ಕಾಣಿಸಿದ ಅಂಶಗಳು.
ಆರ್.ಕೆ. ಮಾಲಿನೇನಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಆಶಾ ಜ್ಯೋತಿ ಗೊಗಿನೇನಿ ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ಸಂಪೂರ್ಣೇಶ್ ಬಾಬು ಜನ್ಮದಿನದಂದು ಟೀಸರ್ ಬಿಡುಗಡೆ ಮಾಡಲಾಗಿತ್ತು. ಆ ಟೀಸರ್ಗಿಂತಲೂ ಈಗ ಹೊರಬಂದಿರುವ ಪೋಸ್ಟರ್ ಹೆಚ್ಚು ವೈರಲ್ ಆಗುತ್ತಿದೆ. ‘ಶೀಲಾ ರಕ್ಷತಿ ರಕ್ಷಿತಃ’ ಎಂಬ ಕ್ಯಾಪ್ಷನ್ ಕೂಡ ಗಮನ ಸೆಳೆಯುತ್ತಿದೆ.
శాసనసభ ఎదుట,
క్యాలీఫ్లవర్ సాక్షి గా,
శీలో రక్షతి రక్షితః ✊
Here comes the Title Justification poster of #Cauliflower #RKMalineni
?#Prajwal
? #MujeerMalik
? #Ashajyothi in #MadhuSudhanaCreations #SridharGuduru Presents #RadhaKrishnaTalkies pic.twitter.com/IXJh4rsoQ2— Sampoornesh Babu (@sampoornesh) July 3, 2021
ವಾಸಂತಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಆದಷ್ಟು ಬೇಗ ಚಿತ್ರ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಂಪೂರ್ಣ ಕಾಮಿಡಿ ಶೈಲಿಯಲ್ಲಿ ‘ಕಾಲಿಫ್ಲವರ್’ ಮೂಡಿಬರುತ್ತಿದೆ.
ಇದನ್ನೂ ಓದಿ:
ನಗ್ನವಾಗಿ ನಟಿಸುತ್ತೀರಾ ಎಂದು ಕೇಳಿದ ರಿಪೋರ್ಟರ್ಗೆ ನಟಿ ಕರೀನಾ ಕಪೂರ್ ನೀಡಿದ ಉತ್ತರ ಹೇಗಿತ್ತು?
ರಾಧಿಕಾ ಜೊತೆ ನಗ್ನ ದೃಶ್ಯದಲ್ಲಿ ನಟಿಸುವಾಗ ನಡೆದ ಮಾತುಕತೆ ಬಗ್ಗೆ ಬಾಯಿ ಬಿಟ್ಟ ನಟ ಆದಿಲ್ ಹುಸೇನ್
Published On - 1:36 pm, Sun, 4 July 21