Appu Movie: ‘ಅಪ್ಪು’ ಚಿತ್ರಕ್ಕೆ 22 ವರ್ಷ: ಪುನೀತ್ ಚಿತ್ರಕ್ಕೆ ಈ ಟೈಟಲ್ ಸಿಕ್ಕಿದ್ದು ಹೇಗೆ ಗೊತ್ತಾ?

| Updated By: Ganapathi Sharma

Updated on: Apr 26, 2024 | 11:04 AM

22 Years For Appu: ಪುನೀತ್ ರಾಜ್​ಕುಮಾರ್ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಗೆಲ್ಲುವಲ್ಲಿ ಸಿನಿಮಾದ ಮ್ಯೂಸಿಕ್ ಪಾತ್ರವೂ ದೊಡ್ಡದಿತ್ತು. ಸಿನಿಮಾಗೆ ‘ಅಪ್ಪು’ ಟೈಟಲ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಗುರುಕಿರಣ್ ಮಾಹಿತಿ ನೀಡಿದ್ದಾರೆ.

Appu Movie: ‘ಅಪ್ಪು’ ಚಿತ್ರಕ್ಕೆ 22 ವರ್ಷ: ಪುನೀತ್ ಚಿತ್ರಕ್ಕೆ ಈ ಟೈಟಲ್ ಸಿಕ್ಕಿದ್ದು ಹೇಗೆ ಗೊತ್ತಾ?
ಪುನೀತ್
Follow us on

ಪುನೀತ್ ರಾಜ್​ಕುಮಾರ್ ನಟನೆಯ ‘ಅಪ್ಪು’ ಸಿನಿಮಾ (Appu Movie) ರಿಲೀಸ್ ಆಗಿ ಇಂದಿಗೆ (ಏಪ್ರಿಲ್ 26) 22 ವರ್ಷ. 2002ರ ಏಪ್ರಿಲ್ 22ರಂದು ಈ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಅಂದಿನಕಾಲಕ್ಕೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದ ಮೂಲಕ ಪುನೀತ್ ರಾಜ್​ಕುಮಾರ್ ಅವರಿಗೆ ಹೀರೋ ಆಗಿ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಈ ಚಿತ್ರಕ್ಕೆ ‘ಅಪ್ಪು’ ಟೈಟಲ್ ಬಂದಿದ್ದು ಹೇಗೆ? ಈ ಟೈಟಲ್ ಫೈನಲ್ ಮಾಡಿದ್ದು ಯಾರು? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

2001ರಲ್ಲಿ ‘ಯುವರಾಜ’ ಸಿನಿಮಾ ರಿಲೀಸ್ ಆಗಿ ಹಿಟ್ ಆಯಿತು. ಶಿವಣ್ಣ ನಟನೆಯ ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ಇದೇ ವೇಳೆ ರಾಜ್​ಕುಮಾರ್ ಕುಟುಂಬದವರು ಪುನೀತ್​ನ ಪರಿಚಯಿಸಲು ಮುಂದಾಗಿದ್ದರು. ಆಗ ಮತ್ತೆ ಪುರಿ ಜಗನ್ನಾಥ್ ಅವರಿಗೆ ಆಫರ್ ನೀಡಲಾಯಿತು. ಇದನ್ನು ನಿರ್ದೇಶಕರು ಖುಷಿಯಿಂದ ಒಪ್ಪಿದರು. ಪುನೀತ್ ಅವರಿಗೆ ಹೊಂದಿಕೆ ಆಗುವಂಥ ಕಥೆಯನ್ನು ಬರೆದರು. ಛಾಯಾಗ್ರಾಹಕ ಬಿಸಿ ಗೌರಿಶಂಕರ್ ಮಗಳು ರಕ್ಷಿತಾ ಅವರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿತು.

ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಗುರುಕಿರಣ್. ಅವರು, ಸಿನಿಮಾಗೆ ಈ ಟೈಟಲ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ‘ಅಪ್ಪು ಟೈಟಲ್ ಫೈನಲ್ ಮಾಡಿದ್ದು ಪಾರ್ವತಮ್ಮ ಅವರು. ಮನೆಯಲ್ಲಿ ಪುನೀತ್ ಅವರನ್ನು ಅಪ್ಪು ಎಂದೇ ಕರೆಯುತ್ತಿದ್ದರು. ಇದು ಅವರ ಪೆಟ್​ ನೇಮ್. ಈ ಕಾರಣಕ್ಕೆ ಈ ಚಿತ್ರಕ್ಕೆ ಅಪ್ಪು ಎಂದು ಟೈಟಲ್ ಇಡಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಠಾತ್ ಹೃದಯಾಘಾತ ತಪ್ಪಿಸಲು ಮುಂದಾದ ಸರ್ಕಾರ; ಪುನೀತ್ ಸ್ಮರಣಾರ್ಥ ಹೊಸ ಯೋಜನೆ ಜಾರಿಗೆ

ವಿಶೇಷ ಎಂದರೆ ಈ ಸಿನಿಮಾ ತೆಲುಗು ಹಾಗೂ ತಮಿಳು ಭಾಷೆಗೆ ರಿಮೇಕ್ ಆಗಿದೆ. ತೆಲುಗಿನಲ್ಲಿ ‘ಈಡಿಯಟ್’ ಹೆಸರಿನಲ್ಲಿ ರಿಮೇಕ್ ಆಯಿತು. ಪುರಿ ಜಗನ್ನಾಥ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ರವಿತೇಜ ಹಾಗೂ ರಕ್ಷಿತಾ ಈ ಚಿತ್ರದಲ್ಲಿ ನಟಿಸಿದ್ದರು. ತಮಿಳಿಗೆ ಈ ಸಿನಿಮಾ ‘ದಮ್’ ಹೆಸರಲ್ಲಿ ರಿಮೇಕ್ ಆಯಿತು. ಈ ಚಿತ್ರಕ್ಕೂ ರಕ್ಷಿತಾ ನಾಯಕಿ. ಸಿಂಬು ಹೀರೋ ಆಗಿ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:28 am, Fri, 26 April 24