Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಫ್ರೀ ಬಸ್​ನಿಂದ ಹೆಣ್ಮಕ್ಕಳು ಎಲ್ಲೆಲ್ಲೋ ಹೋದ್ರು’ ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್​

ಚುನಾವಣಾ ಪ್ರಚಾರದ ವೇಳೆ ನಟಿ ಶ್ರುತಿ ಆಡಿದ ಮಾತುಗಳನ್ನು ವಿರೋಧಿಸಿ ಮಹಿಳಾ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ಮನೋಹರ್ ಅವರು ದೂರು ನೀಡಿದ್ದರು. ಅದರ ಅನ್ವಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ನಟಿ ಶ್ರುತಿಗೆ ನೋಟಿಸ್ ನೀಡಿದ್ದಾರೆ. ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ನೋಟಿಸ್​ನಲ್ಲಿ ಸೂಚಿಸಲಾಗಿದೆ. ಶ್ರುತಿ ಅವರ ಹೇಳಿಕೆಯನ್ನು ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಮಹಿಳೆಯರು ವಿರೋಧಿಸಿದ್ದಾರೆ.

‘ಫ್ರೀ ಬಸ್​ನಿಂದ ಹೆಣ್ಮಕ್ಕಳು ಎಲ್ಲೆಲ್ಲೋ ಹೋದ್ರು’ ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್​
ನಟಿ ಶ್ರುತಿ
Follow us
ಮದನ್​ ಕುಮಾರ್​
|

Updated on: Apr 25, 2024 | 7:04 PM

ಇತ್ತೀಚೆಗೆ ಉಡುಪಿಯಲ್ಲಿ ಬಿಜೆಪಿ (BJP) ಪರ ಚುನಾವಣಾ ಪ್ರಚಾರ ಮಾಡಿದ್ದ ನಟಿ ಶ್ರುತಿ (Shruthi) ಅವರು ರಾಜ್ಯ ಸರ್ಕಾರದ ಮಹಿಳಾಪರ ಯೋಜನೆಗಳನ್ನು ಟೀಕಿಸಿದ್ದರು. ರಾಜ್ಯ ಸರ್ಕಾರ ‘ಶಕ್ತಿ ಯೋಜನೆ’ (Shakti Scheme) ಹೆಸರಿನಲ್ಲಿ ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದನ್ನು ಶ್ರುತಿ ವಿರೋಧಿಸಿದ್ದರು. ‘ಫ್ರೀ ಬಸ್​ನಿಂದ ಹೆಣ್ಮಕ್ಕಳು ಎಲ್ಲೆಲ್ಲಿಗೋ ಹೋಗ್ತಾ ಇದ್ದಾರೆ’ ಎಂದು ಅವರು ಹೇಳಿದ್ದಕ್ಕೆ ಅನೇಕರಿಂದ ಖಂಡನೆ ವ್ಯಕ್ತವಾಗಿತ್ತು. ಈಗ ಶ್ರುತಿಗೆ ಮಹಿಳಾ ಆಯೋಗದಿಂದ ನೋಟಿಸ್​ ನೀಡಲಾಗಿದೆ.

ನಟಿ ಶ್ರುತಿ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಮನೋಹರ್ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಶ್ರುತಿಗೆ ನೋಟೀಸ್ ನೀಡಿದ್ದಾರೆ. ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್​ನಲ್ಲಿ ಸೂಚಿಸಲಾಗಿದೆ. ಶ್ರುತಿ ಅವರ ಹೇಳಿಕೆಗೆ ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಮಹಿಳೆಯರು ಕೂಡ ವಿರೋಧ ವ್ಯಕ್ತಪಡಿಸಿದ್ದರು.

ನಟಿ ಶ್ರುತಿ ಹೇಳಿಕೆ ಏನು? ‘ಬಸ್ಸಿನ ಸೀಟಿಗೋಸ್ಕರ ಹೆಣ್ಮಕ್ಕಳು ಜುಟ್ಟು ಹಿಡಿದುಕೊಂಡು ಹೊಡೆದಾಡುವಂತೆ ಮಾಡಿದ್ದೀರಿ ನೀವು. ನನ್ನ ಹೆಂಡತಿ ಎಲ್ಲಿಗೆ ಹೋದಳೋ ಗೊತ್ತಿಲ್ಲ ಅಂತ ಎಷ್ಟೋ ಮನೆಯ ಗಂಡಸರು ಅಳುತ್ತಾ ಇದ್ದಾರೆ. ಎಷ್ಟೋ ಮನೆಯಲ್ಲಿ ಮಕ್ಕಳು ಉಪವಾಸ ಬಿದ್ದಿದ್ದಾರೆ. ಫ್ರೀ ಬಸ್​ ಕೊಟ್ಟರು ಅಂದ ತಕ್ಷಣ ಹೆಣ್ಮಳ್ಳಲು ಎಲ್ಲೆಲ್ಲೋ ಹೋಗುತ್ತಿದ್ದಾರೆ. ತೀರ್ಥಯಾತ್ರೆಗೆ ಹೋಗಬೇಕು ಎಂಬ ನೆಪದಲ್ಲಿ ಎಲ್ಲಿಗೆ ಹೋಗಬೇಕು ಎಂಬುದು ಕೂಡ ಗೊತ್ತಿಲ್ಲ. ಗೊತ್ತು-ಗುರಿ ಇಲ್ಲದಂತೆ ಮಾಡಿದ್ದಾರೆ’ ಎಂದು ಶ್ರುತಿ ಹೇಳಿದ್ದರು.

ಇದನ್ನೂ ಓದಿ: ಮಹಿಳೆಯರ ಬಗ್ಗೆ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ: ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಮಹಿಳಾ ಆಯೋಗ

‘ಗಂಡ್ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಆಟೋ ಓಡಿಸುವವರ ಮನೆ ನಡೆಯುತ್ತಿತ್ತು. ಫ್ರೀ ಬಸ್​ನಿಂದ ಅವರಿಗೆ ಅನ್ನ ಇಲ್ಲದಂತಾಗಿದೆ. 2 ಸಾವಿರ ರೂಪಾಯಿ ಕೊಡ್ತೀನಿ ಅಂತ ಹೇಳುತ್ತಾರೆ. ಆ ಹಣ ನಿಮ್ಮ ಕೈಯಲ್ಲಿ ಎಷ್ಟು ದಿನ ಉಳಿಯುತ್ತೆ? ಯಾವುದೇ ಯೋಜನೆಯು ಮಹಿಳೆಯ ರಕ್ಷಣೆಗೆ ಇರಬೇಕು. ಬರೀ ಆಕರ್ಷಣೆ ಆಗಿರಬಾರದು. ರಾಮಾಯಣದಲ್ಲಿ ಸೀತೆಗೆ ಲಕ್ಷ್ಮಣರೇಖೆ ಹಾಕಿದಾಗ ಆಕೆಯ ಎದುರಿಗೆ ಕಂಡಿದ್ದು ಬಂಗಾರದ ಚಿಂಕೆ. ಆದರೂ ಆಕೆ ಲಕ್ಷ್ಮಣರೇಖೆಯನ್ನು ದಾಡಿದಳು. ನಂತರ ಅವಳ ಅಪಹರಣ ಆಯಿತು. ಇಂದು ಕಾಂಗ್ರೆಸ್​ ಕೊಡುತ್ತಿರುವ ಬಿಟ್ಟಿ ಭಾಗ್ಯಗಳು ಕೂಡ ಬಂಗಾರದ ಚಿಂತೆಯ ರೀತಿ. ಅದನ್ನು ನಂಬಿಕೊಂಡು ನೀವು ಭಾರತೀಯ ಸಂಸ್ಕೃತಿ ಎಂಬ ಲಕ್ಷ್ಮಣರೇಖೆ ದಾಡಿದರೆ ಆ ಪಕ್ಷದವರು ನಿಮ್ಮನ್ನು ಅಪಹರಣ ಮಾಡುತ್ತಾರೆ’ ಎಂದು ಶ್ರುತಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.