‘777 ಚಾರ್ಲಿ’ ಸಿನಿಮಾ (777 Charlie) ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದವರು ನಿರ್ದೇಶಕ ಕಿರಣ್ ರಾಜ್. ಅವರು ಸದ್ಯ ಬ್ರೇಕ್ನಲ್ಲಿದ್ದಾರೆ. ಅವರ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಿರುವಾಗಲೇ ಅವರು ಬಾಲಿವುಡ್ನ ಖ್ಯಾತ ನಟ ಜಾನ್ ಅಬ್ರಾಹಂ ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋನ ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಜಾನ್ ಅಬ್ರಹಾಂ ಜೊತೆ ನಿಂತಿರೋ ಫೋಟೋ ಹಂಚಿಕೊಂಡಿರುವ ಅವರು, ‘ಎಂತಹ ಅದ್ಭುತ ದಿನ’ ಎಂದು ಬರೆದಿಕೊಂಡಿದ್ದಾರೆ. ಹೃದಯದಿಂದ ಹಾಗೂ ಒಳ್ಳೆಯ ಉದ್ದೇಶದಿಂದ ಮಾಡಿದ ಎಲ್ಲಾ ಕೆಲಸಗಳನ್ನು ಯಾವಾಗಲೂ ಪ್ರೀತಿಯಿಂದ ಸ್ವೀಕರಿಸಲಾಗುತ್ತದೆ. 777 ಚಾರ್ಲಿ ರಿಲೀಸ್ ಸಂದರ್ಭದಲ್ಲಿ ನಾವು ಫೋನ್ ಮೂಲಕ ಮಾತನಾಡಿದ್ದೆವು. ಈಗ ಸುಮಾರು ಒಂದೂವರೆ ವರ್ಷಗಳ ನಂತರ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಸಿಕ್ಕಿತು. ಅವರು ತೋರಿದ ನಮ್ರತೆ ನಿಜವಾಗಿಯೂ ಹೃದಯಸ್ಪರ್ಶಿ. ಈ ದಿನಕ್ಕೆ ಕೃತಜ್ಞ’ ಎಂದು ಕಿರಣ್ ರಾಜ್ ಬರೆದುಕೊಂಡಿದ್ದಾರೆ.
What a wonderful day! 😊
All things done with heart and pure intentions will always be received with love! It was during the release of 777 Charlie that we first spoke over a call, and now almost a year and a half later, had the privilege to meet him personally! The humility… pic.twitter.com/wyn8YdJJWy
— Kiranraj K (@Kiranraj61) April 25, 2024
2022ರ ಜೂನ್ 10ರಂದು ‘777 ಚಾರ್ಲಿ’ ಸಿನಿಮಾ ರಿಲೀಸ್ ಆಯಿತು. ಈಗ ಎರಡು ವರ್ಷ ಪೂರ್ಣಗೊಳ್ಳುತ್ತಾ ಬಂದರೂ ಕಿರಣ್ ರಾಜ್ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಈಗ ಜಾನ್ ಅಬ್ರಹಾಂ ಭೇಟಿ ಬಳಿಕ ಅವರು ಬಾಲಿವುಡ್ನಲ್ಲಿ ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಕುತೂಹಲ ಹೆಚ್ಚಿದೆ.
ಇದನ್ನೂ ಓದಿ: ‘ಅಯ್ಯಪ್ಪನುಂ ಕೋಶಿಯುಂ’ ಹಿಂದಿ ರಿಮೇಕ್ನಲ್ಲಿ ಜಾನ್ ಅಬ್ರಹಾಂ- ಅರ್ಜುನ್ ಕಪೂರ್; ನಿರ್ದೇಶನ ಮಾಡಲಿದ್ದಾರೆ ಈ ಹಿಟ್ ನಿರ್ದೇಶಕ
ಜಾನ್ ಅಬ್ರಹಾಂ ಅವರು ಇತ್ತೀಚೆಗೆ ಹೀರೋ ಪಾತ್ರಗಳ ಜೊತೆ ವಿಲನ್ ಪಾತ್ರಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದಲ್ಲಿ ಅವರು ಖಡಕ್ ವಿಲನ್ ಆಗಿ ಗಮನ ಸೆಳೆದಿದ್ದರು. ಈ ಮೂಲಕ ಅವರ ಜನಪ್ರಿಯತೆ ಹೆಚ್ಚಿದೆ. ಇದರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅವರು ಹೀರೋ ಆಗಿಯೂ ಗಮನ ಸೆಳೆಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.