‘ಭೀಮ’ ಚಿತ್ರದಿಂದ ಇತ್ತೀಚೆಗೆ ಮುಚ್ಚಲ್ಪಟ್ಟ 18 ಥಿಯೇಟರ್​ಗಳಿಗೆ ಮರುಜೀವ

ದುನಿಯಾ ವಿಜಯ್ ಅವರು ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಸಿನಿಮಾ ‘ಸಲಗ’ ಹಿಟ್ ಆಯಿತು. ಆ ಬಳಿಕ ಅವರು ನಿರ್ದೇಶನ ಮಾಡಿದ ಎರಡನೇ ಸಿನಿಮಾ ಎಂದರೆ ಅದು ‘ಭೀಮ’. ಈ ಸಿನಿಮಾ ಕೂಡ ರೌಡಿಸಂ ಬಗ್ಗೆ ಇರಲಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಭೀಮ’ ಚಿತ್ರದಿಂದ ಇತ್ತೀಚೆಗೆ ಮುಚ್ಚಲ್ಪಟ್ಟ 18 ಥಿಯೇಟರ್​ಗಳಿಗೆ ಮರುಜೀವ
ದುನಿಯಾ ವಿಜಯ್

Updated on: Jul 27, 2024 | 2:39 PM

ಚುನಾವಣೆ, ಐಪಿಎಲ್ ಕಾರಣದಿಂದ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಈಗ ಚಿತ್ರರಂಗಕ್ಕೆ ಮತ್ತೆ ಕಳೆ ಬರುತ್ತಿದೆ. ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಕರ್ನಾಟಕದಾದ್ಯಂತ 400ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ರಿಲೀಸ್ ಆಗಲಿದೆ. ವಿಶೇಷ ಎಂದರೆ ಇತ್ತೀಚೆಗೆ ಮುಚ್ಚಲ್ಪಟ್ಟ 18 ಥಿಯೇಟರ್​ಗಳು ಈಗ ಮರುಜೀವ ಪಡೆಯುತ್ತಿವೆ.

ದುನಿಯಾ ವಿಜಯ್ ಅವರು ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಸಿನಿಮಾ ‘ಸಲಗ’ ಹಿಟ್ ಆಯಿತು. ಆ ಬಳಿಕ ಅವರು ನಿರ್ದೇಶನ ಮಾಡಿದ ಎರಡನೇ ಸಿನಿಮಾ ಎಂದರೆ ಅದು ‘ಭೀಮ’. ಈ ಸಿನಿಮಾ ಕೂಡ ರೌಡಿಸಂ ಬಗ್ಗೆ ಇರಲಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಿರ್ಮಾಪಕ ಜಗದೀಶ್ ಗೌಡ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ. ‘ನಾನು ಸಣ್ಣ ವಯಸ್ಸಿನಲ್ಲಿದ್ದಾಗ ಬಿ+, ಸಿ+ ಸ್ಟುಡೆಂಟ್. ನಾನು ಎ+ ತೆಗೆದುಕೊಳ್ಳಬೇಕು ಎಂದು ನನ್ನ ತಂದೆ ನಿರೀಕ್ಷಿಸುತ್ತಿದ್ದರು. ಕೊನೆಗೂ ದುನಿಯಾ ವಿಜಯ್ ಅವರು ‘ಎ’ ಪ್ರಮಾಣಪತ್ರ ಕೊಡಿಸಿದ್ದಾರೆ. ಅವರ ಈ ಮೊದಲ ಚಿತ್ರ ಸಲಗ ಕೂಡ ಎ ಸರ್ಟಿಫಿಕೇಟ್ ಆಗಿತ್ತು. ಈ ಸಿನಿಮಾ ಕೆಲ ವರ್ಷಗಳ ಹಿಂದೆ ರಿಲೀಸ್ ಆಗಿ ಗೆದ್ದಿತ್ತು’ ಎಂದಿದ್ದಾರೆ ನಿರ್ಮಾಪಕ ಜಗದೀಶ್ ಗೌಡ.

ಭೀಮ ಸಿನಿಮಾ ಬೆಂಗಳೂರಿನ ಸ್ಲಮ್​ಗಳಲ್ಲಿ ಶೂಟ್ ಮಾಡಲಾಗಿದೆ. 125 ದಿನಗಳ ಕಾಲ ಸಿನಿಮಾ ಶೂಟ್ ಮಾಡಲಾಗಿದೆ. ಬಹುತೇಕ ಸಿನಿಮಾಗಳು ನಿಜವಾದ ಲೊಕೇಶನ್​ಗಳಲ್ಲಿ ಶೂಟ್ ಮಾಡಲಾಗಿದೆ. ಈ ಸಿನಿಮಾ ಮೂಲಕ ಹಲವು ಹೊಸ ಮುಖಗಳನ್ನು ದುನಿಯಾ ವಿಜಯ್ ಪರಿಚಯಿಸುತ್ತಿದ್ದಾರೆ. ಬ್ಲ್ಯಾಕ್​ ಡ್ರಾಗನ್ ಮಂಜು ಹೆಸರಿನ ವ್ಯಕ್ತಿ ಈ ಚಿತ್ರದ ಮೂಲಕ ವಿಲನ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.

ಇದನ್ನೂ ಓದಿ: ‘ಭೀಮ’ ರಿಲೀಸ್ ದಿನಾಂಕ ಘೋಷಿಸಿದ ದುನಿಯಾ ವಿಜಯ್ 

‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಭೈರಾಗಿ’ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು. ಇವರ ಜೊತೆ ಜಗದೀಶ್ ಗೌಡ ಕೂಡ ಕೈ ಜೋಡಿಸಿದ್ದಾರೆ. ಚರಣ್​ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿವಸೇನಾ ಅವರು ಈ ಚಿತ್ರವನ್ನು ಛಾಯಾಗ್ರಾಹಣ ಮಾಡಿದ್ದರು, ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us