ಕನ್ನಡದ ಈ ಸ್ಟಾರ್ ನಟಿಯ ಬಾಲ್ಯದ ಚಿತ್ರದ ಜೊತೆ ಹೋಲಿಕೆ ಆಗ್ತಿದೆ ಐಶ್ವರ್ಯಾ ಮಗಳ ಫೋಟೋ

ಸೌಂದರ್ಯಾ ಅವರು ಹೆಸರಿಗೆ ತಕ್ಕಂತೆ ಇದ್ದರು. ಅವರು ಕನ್ನಡದಲ್ಲಿ ‘ಆಪ್ತಮಿತ್ರ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಖ್ಯಾತಿ ದೊಡ್ಡ ಮಟ್ಟದಲ್ಲಿ ಇತ್ತು. ಅವರು ಯುವತಿ ಆಗಿದ್ದಾಗಿನ ಫೋಟೋಗಳನ್ನು ಈಗ ಕೆಲವರು ಆರಾಧ್ಯಾಗೆ ಹೋಲಿಕೆ ಮಾಡುತ್ತಿದ್ದಾರೆ.

ಕನ್ನಡದ ಈ ಸ್ಟಾರ್ ನಟಿಯ ಬಾಲ್ಯದ ಚಿತ್ರದ ಜೊತೆ ಹೋಲಿಕೆ ಆಗ್ತಿದೆ ಐಶ್ವರ್ಯಾ ಮಗಳ ಫೋಟೋ
ಕನ್ನಡದ ಈ ಸ್ಟಾರ್ ನಟಿಯ ಬಾಲ್ಯದ ಚಿತ್ರದ ಜೊತೆ ಹೋಲಿಕೆ ಆಗ್ತಿದೆ ಐಶ್ವರ್ಯಾ ಮಗಳ ಫೋಟೋ
Edited By:

Updated on: May 27, 2024 | 9:25 AM

ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಮಗಳು ಆರಾಧ್ಯಾ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದಾಳೆ. ಸದ್ಯ ಶಿಕ್ಷಣ ಪಡೆಯುತ್ತಿರುವ ಅವರು ಅಮ್ಮನ ಜೊತೆ ಆಗಾಗ ಪೋಸ್​ ಕೊಡುತ್ತಾಳೆ. ಅವಳಿಗೆ ಈಗಾಗಲೇ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈಗ ಆರಾಧ್ಯಾಳ ಫೋಟೋವನ್ನು ಕೆಲವರು ದಕ್ಷಿಣದ ಸ್ಟಾರ್ ನಟಿಗೆ ಹೋಲಿಕೆ ಮಾಡುತ್ತಿದ್ದಾರೆ. ಇದನ್ನು ಕೆಲವರು ಒಪ್ಪಿದ್ದಾರೆ. ಅಷ್ಟಕ್ಕೂ ಅವರ ಮುಖ ಹೋಲಿಕೆ ಆಗುತ್ತಿರುವುದು ದಕ್ಷಿಣ ಭಾರತದ ಸ್ಟಾರ್ ನಟಿ ಸೌಂದರ್ಯಾ ಜೊತೆ.

ಸೌಂದರ್ಯಾ ಅವರು ಹೆಸರಿಗೆ ತಕ್ಕಂತೆ ಇದ್ದರು. ಅವರು ಕನ್ನಡದಲ್ಲಿ ‘ಆಪ್ತಮಿತ್ರ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಖ್ಯಾತಿ ದೊಡ್ಡ ಮಟ್ಟದಲ್ಲಿ ಇತ್ತು. ಅವರು ಯುವತಿ ಆಗಿದ್ದಾಗಿನ ಫೋಟೋಗಳನ್ನು ಈಗ ಕೆಲವರು ಆರಾಧ್ಯಾಗೆ ಹೋಲಿಕೆ ಮಾಡುತ್ತಿದ್ದಾರೆ. ಅನೇಕರು ಈ ಹೋಲಿಕೆಯನ್ನು ಒಪ್ಪಿದ್ದಾರೆ. ಸದ್ಯ ಈ ಫೋಟೋಗೆ ನಾನಾ ರೀತಿಯ ಕಮೆಂಟ್​ಗಳಿ ಬರುತ್ತಿವೆ. ವಿಶೇಷ ಎಂದರೆ ‘ಸೂರ್ಯವಂಶಂ’ ಸಿನಿಮಾದಲ್ಲಿ ಸೌಂದರ್ಯಾ ಅವರು ಆರಾಧ್ಯಾಳ ತಾತ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದರು.

ಸೌಂದರ್ಯಾ ಕೇವಲ ಗ್ಲಾಮರ್ ಮಾತ್ರವಲ್ಲದೆ ನಟನೆಯ ಮೂಲಕವೂ ಮೆಚ್ಚುಗೆ ಪಡೆದರು. ಆರಾಧ್ಯಾಗೆ ರೂಪ ಇದೆ. ಅವಳು ಕೂಡ ಚಿತ್ರರಂಗದಲ್ಲಿ ಮಿಂಚುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಬಚ್ಚನ್ ಕುಟುಂಬ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ಅಮಿತಾಭ್ ಬಚ್ಚನ್ ಸ್ಟಾರ್ ಹೀರೋ. ಐಶ್ವರ್ಯಾ, ಅಭಿಷೇಕ್ ಕೂಡ ಚಿತ್ರರಂಗದ ಜೊತೆ ಒಳ್ಳೆಯ ನಂಟು ಹೊಂದಿದ್ದಾರೆ. ಹೀಗಾಗಿ, ಆರಾಧ್ಯಾಳನ್ನು ಚಿತ್ರರಂಗಕ್ಕೆ ಪರಿಚಯಿಸೋದು ದೊಡ್ಡ ವಿಚಾರ ಅಲ್ಲವೇ ಅಲ್ಲ.

ಇದನ್ನೂ ಓದಿ: ರಮೇಶ್ ಅರವಿಂದ್, ಅನುಶ್ರೀ ಸೇರಿ ‘ಮಹಾನಟಿ’ ತಂಡದ ವಿರುದ್ಧ ದಾಖಲಾಯ್ತು ದೂರು; ಕಾರಣವೇನು?

ಸೌಂದರ್ಯಾ ಅವರ ಮೂಲ ಹೆಸರು ಸೌಮ್ಯಾ ಸತ್ಯನಾರಾಯಣ್​. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಎರಡು ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿದೆ. ಅವರು 2004ರ ಏಪ್ರಿಲ್ 7ರಂದು ವಿಮಾನ ಅಪಘಾತದಲ್ಲಿ ನಿಧನ ಹೊಂದಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:25 am, Mon, 27 May 24