ಕನ್ನಡದ ನಟಿ ತಾನ್ಯಾ ಹೋಪ್ಗೆ ಕಾಲಿವುಡ್ನಲ್ಲೂ ದೊಡ್ಡ ಬೇಡಿಕೆ ಇದೆ. ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಕನ್ನಡದಲ್ಲಿ ‘ಯಜಮಾನ’, ‘ಅಮರ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಮತ್ತೆ ತಮಿಳು ಚಿತ್ರರಂಗದ ಕದ ತಟ್ಟೋಕೆ ರೆಡಿ ಆಗಿದೆ. ಅವರಿಗೆ ಕಾಲಿವುಡ್ನಿಂದ ಆಫರ್ ಒಂದು ಬಂದಿದೆ.
ತಮಿಳು ನಟ ಶಿವ ಅವರು ನಿರ್ದೇಶಕ ಪೊನ್ ಕುಮಾರನ್ ಜತೆ ಕೈ ಜೋಡಿಸುತ್ತಿದ್ದಾರೆ. ಪೊನ್ ಕುಮಾರನ್ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಶಿವ ಜತೆ ಜೀವಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾಗ್ವಾರ್ ಸ್ಟುಡಿಯೋಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ಮುಂದಿನ ತಿಂಗಳು ಸೆಟ್ಟೇರಲಿದೆ. ಈಗ ಈ ಸಿನಿಮಾ ತಂಡಕ್ಕೆ ತಾನ್ಯಾ ಕೂಡ ಸೇರಿಕೊಂಡಿದ್ದಾರೆ.
ಪಾಯಲ್ ರಜಪೂತ್ ಮತ್ತು ತಾನ್ಯಾ ಹೋಪ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಾನ್ಯಾ ಅವರು ಕನ್ನಡದಲ್ಲಿ ಹೆಸರು ಮಾಡಿದ್ದಾರೆ. ಕನ್ನಡದ ‘ಹೋಮ್ ಮಿನಿಸ್ಟರ್’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈಗ ಅವರು ಈ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು, ಪಾಯಲ್ ರಜಪೂತ್ ‘ಹೆಡ್ ಬುಷ್’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೂ ಕಾಲಿಡುತ್ತಿದ್ದಾರೆ.
ಈ ಸಿನಿಮಾ ಮೂಲತಃ ತಮಿಳಿನಲ್ಲಿ ಸಿದ್ಧಗೊಳ್ಳುತ್ತಿದೆ. ನಿರ್ದೇಶಕರಿಗೆ ಕನ್ನಡ ಚಿತ್ರರಂಗದ ಜತೆ ಒಳ್ಳೆಯ ನಂಟು ಇರುವುದರಿಂದ ಅವರು ಈ ಸಿನಿಮಾವನ್ನು ಕನ್ನಡದಲ್ಲೂ ರಿಲೀಸ್ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಸಿನಿಮಾದ ಸಂಪೂರ್ಣ ಕಥೆ ಮಾರಿಷಿಯಸ್ನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಇದಕ್ಕೆ ಚಿತ್ರತಂಡದಿಂದ ಉತ್ತರ ಸಿಗಬೇಕಿದೆ.
ತಾನ್ಯಾ ಹಾಗೂ ಪಾಯಲ್ ಈ ಮೊದಲು ಒಟ್ಟಿಗೆ ನಟಿಸಿದ ಅನುಭವ ಹೊಂದಿದ್ದಾರೆ. ರವಿತೇಜ ನಟನೆಯ ‘ಡಿಸ್ಕೋ ರಾಜ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈಗ ಇಬ್ಬರೂ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಅನ್ನೋದು ವಿಶೇಷ.
ಇದನ್ನೂ ಓದಿ: ‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ
ನಂಬ್ತೀರೋ, ಬಿಡ್ತೀರೋ! ಒಂಬತ್ತು ವರ್ಷದ ಈ ಯೂಟ್ಯೂಬರ್ ಗಳಿಕೆ ₹ 217 ಕೋಟಿ