ಅಭಿಷೇಕ್-ಅವಿವಾ ಕಡೆಯಿಂದ ಗುಡ್​ನ್ಯೂಸ್; ಮಗುವನ್ನು ಮುದ್ದಾಡಿದ ಸುಮಲತಾ

ಅಭಿಷೇಕ್ ಹಾಗೂ ಅವಿವಾ ಅವರು 2023ರಲ್ಲಿ ವಿವಾಹ ಆದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿತು. ಈಗ 2024 ಪೂರ್ಣಗೊಳ್ಳುವದರೊಳಗೆ ಕುಟುಂಬದಿಂದ ಖುಷಿ ಸುದ್ದಿ ಹೊರ ಬಂದಿದೆ. ಅವಿವಾ ಮಗು ಸಖತ್ ಮುದ್ದಾಗಿದೆ.

ಅಭಿಷೇಕ್-ಅವಿವಾ ಕಡೆಯಿಂದ ಗುಡ್​ನ್ಯೂಸ್; ಮಗುವನ್ನು ಮುದ್ದಾಡಿದ ಸುಮಲತಾ
Edited By:

Updated on: Nov 12, 2024 | 10:05 AM

ರೆಬೆಲೆ ಸ್ಟಾರ್ ಅಂಬರೀಷ್ ಮನೆಯಲ್ಲಿ ಈಗ ಖುಷಿ ಮನೆ ಮಾಡಿದೆ. ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ್ಪ ಪಾಲಕರಾಗಿದ್ದಾರೆ. ಅವಿವಾ ಅವರು ಗಂಡುಮಗುವಿಗೆ ಜನ್ಮನೀಡಿದ್ದಾರೆ. ಇಂದು (ನವೆಂಬರ್ 12) ಮಗು ಜನಿಸಿದೆ. ಮಗುವಿನ ಜೊತೆ ಸುಮಲತಾ ಅಂಬರೀಷ್ ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಅಭಿಷೇಕ್ ಹಾಗೂ ಅವಿವಾ ಅವರು 2023ರಲ್ಲಿ ವಿವಾಹ ಆದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿತು. ಈಗ 2024 ಪೂರ್ಣಗೊಳ್ಳುವದರೊಳಗೆ ಕುಟುಂಬದಿಂದ ಖುಷಿ ಸುದ್ದಿ ಹೊರ ಬಂದಿದೆ. ಇಂದು ಬೆಳಿಗ್ಗೆ 8.30 ಸುಮಾರಿಗೆ ಮಗುವಿನ ಆಗಮನ ಆಗಿದೆ. ಅವಿವಾ ಮಗು ಸಖತ್ ಮುದ್ದಾಗಿದೆ.

ಅವಿವಾ ಅವರು ಪ್ರೆಗ್ನೆಂಟ್ ಎನ್ನುವ ವಿಚಾರ ಇತ್ತೀಚೆಗೆ ರಿವೀಲ್ ಆಯಿತು. ಅದ್ದೂರಿಯಾಗಿ ಅವರ ಸೀಮಂತಶಾಸ್ತ್ರ ಕೂಡ ನೆರವೇರಿತ್ತು. ಈಗ ಅವರು ಗಂಡು ಮಗುವಿನ ತಾಯಿ ಆಗಿದ್ದಾರೆ. ‘ಅಂಬಿ ಮತ್ತೆ ಹುಟ್ಟಿ ಬಂದ’ ಎಂದು ಅಂಬರೀಷ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಅಂಬರೀಶ್ ಸೊಸೆ ಅವಿವಾ ಬಿದ್ಧಪ್ಪ ಸೀಮಂತ ಶಾಸ್ತ್ರ: ಇಲ್ಲಿವೆ ಚಿತ್ರಗಳು

ಇತ್ತೀಚೆಗೆ ಅವಿವಾ ಅವರ ಸೀಮಂತ ಕಾರ್ಯಕ್ರಮ ನೆರವೇರಿತ್ತು. ಸೀಮಂತ ಕಾರ್ಯಕ್ರಮದಲ್ಲಿ ಚಿತ್ರರಂಗದ ಕೆಲವು ಗಣ್ಯರು ಆಗಮಿಸಿದ್ದರು. ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು ಬಂದು ಅವಿವಾ ಅವರನ್ನು ಹರಸಿದ್ದರು. ಅವಿವಾ ಬಿದಪ್ಪ ಅವರು, ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪ ಅವರ ಪುತ್ರಿ. ಸ್ವತಃ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಬಿದಪ್ಪ ಮಾಡೆಲಿಂಗ್​ನಲ್ಲಿಯೂ ಆಸಕ್ತಿ ಹೊಂದಿದ್ದಾರೆ.

ಸಿನಿಮಾ ವಿಚಾರಕ್ಕೆ ಬರೋದಾದರೆ 2019ರ ‘ಅಮರ್’ ಚಿತ್ರದ ಮೂಲಕ ಅಭಿಷೇಕ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರು ಬ್ರೇಕ್ ಪಡೆದರು. 2023ರಲ್ಲಿ ‘ಬ್ಯಾಡ್ ಮ್ಯಾನರ್ಸ್’ ಹೆಸರಿನ ಸಿನಿಮಾ ಮಾಡಿದರು. ಅವರು ಈ ಮೊದಲು ‘ಕಾಳಿ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದರು. ಆದರೆ, ಈ ಬಗ್ಗೆ ಯಾವುದೇ ಅಪ್​ಡೇಟ್ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:54 am, Tue, 12 November 24