Nikhil Kumarswamy: ತಂದೆ ಆಗುತ್ತಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ

| Updated By: ಮದನ್​ ಕುಮಾರ್​

Updated on: Jun 26, 2021 | 5:10 PM

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿ ಹರಡಿತ್ತು. ಆದರೆ, ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ನಿಖಿಲ್ ಕುಮಾರಸ್ವಾಮಿ ಈ ಬಗ್ಗೆ ಮಾತನಾಡಿದ್ದಾರೆ.

Nikhil Kumarswamy: ತಂದೆ ಆಗುತ್ತಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ
ನಿಖಿಲ್​ ಕುಮಾರಸ್ವಾಮಿ
Follow us on

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿ ಹರಡಿತ್ತು. ಆದರೆ, ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಹೀಗಾಗಿ, ಈ ಸುದ್ದಿ ನಿಜವೋ ಅಥವಾ ಸುಳ್ಳೋ ಎನ್ನುವ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟತೆ ಇರಲಿಲ್ಲ. ಈಗ ನಿಖಿಲ್ ಕುಮಾರಸ್ವಾಮಿ ಈ ಬಗ್ಗೆ ಮಾತನಾಡಿದ್ದು, ತಾವು ತಂದೆ ಆಗುತ್ತಿರುವುದು ಹೌದು ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಈ ಬಗ್ಗೆ ನಿಖಿಲ್​ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಇದು ವೈಯಕ್ತಿಕ ವಿಚಾರ. ಕೆಲವೊಂದು ವೈಯಕ್ತಿಕ ವಿಚಾರವನ್ನು ನಾನು ಹೊರಗೆ ಹೇಳೋಕೆ ಇಷ್ಟ ಪಡುವುದಿಲ್ಲ. ಆದರೆ, ನಾವು ಸಾರ್ವಜನಿಕ ಬದುಕಲ್ಲಿ ಇದ್ದಮೇಲೆ ಕೆಲವೊಂದಷ್ಟು ವಿಚಾರಗಳು ಹರಿದು ಬರುತ್ತವೆ. ನೀವು ಕೇಳಿರುವ ವಿಚಾರ ನಿಜ. ಅತಿ ಶೀಘ್ರದಲ್ಲಿ ನಾನು ತಂದೆ ಆಗುತ್ತಿದ್ದೇನೆ’ ಎಂದು ಸಂತಸ ಹೊರ ಹಾಕಿದರು.

ನಿಖಿಲ್ ಹಾಗೂ ರೇವತಿ ಕಳೆದ ವರ್ಷ ಅದ್ದೂರಿಯಾಗಿ ಮದುವೆ ಆಗಲು ನಿರ್ಧರಿಸಿದ್ದರು. ಮಂಡ್ಯದಲ್ಲಿ ಸಾವಿರಾರು ಜನರಿಗೆ ಊಟ ಹಾಕೋಕೆ ಸಿದ್ಧತೆ ನಡೆದಿತ್ತು. ಆದರೆ, ಆಗ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಹೀಗಾಗಿ, ಮದುವೆ ಸಮಾರಂಭ ಸಿಂಪಲ್ ಆಗಿ ನಡೆದಿತ್ತು. ಕುಟುಂಬದವರ ಸಮ್ಮುಖದಲ್ಲಿ ನಿಖಿಲ್ ಹಾಗೂ ರೇವತಿ ಮದುವೆ ಆದರು. ಈಗ ನಿಖಿಲ್ ತಂದೆ ಆಗುತ್ತಿರುವ ವಿಚಾರ ಅವರ ಅಭಿಮಾನಿ ಬಳಗಕ್ಕೆ ಖುಷಿ ನೀಡಿದೆ.

ನಿಖಿಲ್ ‘ರೈಡರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಸೀತಾರಾಮ ಕಲ್ಯಾಣ’ ಚಿತ್ರದ ನಂತರ ಅವರ ನಟನೆಯ ಬೇರೆ ಯಾವುದೇ ಸಿನಿಮಾಗಳು ತೆರೆಕಂಡಿಲ್ಲ. ರೈಡರ್ ಸಿನಿಮಾದ ಶೂಟಿಂಗ್​ಗಾಗಿ ಕೆಲ ತಿಂಗಳ ಹಿಂದೆ ಲೇಹ್-ಲಡಾಕ್​ಗೆ ತೆರಳಿದ್ದರು. ಆಗ ಅವರು ಕೊವಿಡ್​ ಪರೀಕ್ಷೆಗೆ ಒಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿತ್ತು. ನಂತರ ಅವರು ಚೇತರಿಕೆ ಕಂಡಿದ್ದರು.

ಇದನ್ನೂ ಓದಿ:

Nikhil Kumarswamy: ಕುಮಾರಸ್ವಾಮಿ ಕುಟುಂಬದಿಂದ ಸಿಹಿ ಸುದ್ದಿ; ಶೀಘ್ರವೇ ತಂದೆ ಆಗಲಿದ್ದಾರೆ ನಿಖಿಲ್​ ​