ಇಂದು ಮೈಸೂರಿಗೆ ತೆರಳಲಿದ್ದಾರೆ ನಟ ದರ್ಶನ್; ಕಾರಣ ಏನು?

|

Updated on: Jun 18, 2024 | 6:55 AM

ದರ್ಶನ್ ಅವರು ಕೊಲೆ ಬಳಿಕ ಮೈಸೂರಿಗೆ ತೆರಳಿದ್ದರು. ಅಲ್ಲಿ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಇನ್ನು, ಶರಣಾಗಲು ಕೆಲವರು ಒಪ್ಪದೇ ಇದ್ದಾಗ ಮೈಸೂರಿಗೆ ಕರೆಸಿ ಅವರ ಮನ ಒಲಿಸೋ ಪ್ರಯತ್ನವನ್ನು ದರ್ಶನ್ ಮಾಡಿದ್ದರು. ಹೀಗಾಗಿ ಅಲ್ಲಿಯ ವಿಚಾರಣೆ ತುಂಬಾನೇ ಮುಖ್ಯವಾಗಲಿದೆ.

ಇಂದು ಮೈಸೂರಿಗೆ ತೆರಳಲಿದ್ದಾರೆ ನಟ ದರ್ಶನ್; ಕಾರಣ ಏನು?
ದರ್ಶನ್
Follow us on

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ಸ್ಟಾರ್ ಹೀರೋಗಳಿಗೆ ನೋಟಿಸ್ ನೀಡೋ ಕೆಲಸ ಆಗುತ್ತಿದೆ. ಪಾರ್ಟಿಯಲ್ಲಿ ಚಿಕ್ಕಣ್ಣ ಇದ್ದರು ಅನ್ನೋ ಕಾರಣಕ್ಕೆ ಅವರಿಗೂ ನೋಟಿಸ್ ಹೋಗಿದೆ. ಅವರು ವಿಚಾರಣೆಗೆ ಹಾಜರಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಧ್ಯೆ ಇಂದು (ಜೂನ್ 18) ನಟ ದರ್ಶನ್ (Darshan) ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ದರ್ಶನ್ ಅವರು ಕೊಲೆ ಬಳಿಕ ಮೈಸೂರಿಗೆ ತೆರಳಿದ್ದರು. ಅಲ್ಲಿ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಇನ್ನು, ಶರಣಾಗಲು ಕೆಲವರು ಒಪ್ಪದೇ ಇದ್ದಾಗ ಮೈಸೂರಿಗೆ ಕರೆಸಿ ಅವರ ಮನ ಒಲಿಸೋ ಪ್ರಯತ್ನವನ್ನು ದರ್ಶನ್ ಮಾಡಿದ್ದರು. ಹೀಗಾಗಿ, ಕೊಲೆ ಆರೋಪಿ ದರ್ಶನ್ ಜೊತೆ ಪವನ್, ನಾಗರಾಜ್, ನಂದೀಶ್, ಲಕ್ಷ್ಮಣ್, ದೀಪಕ್​ನನ್ನು ಮೈಸೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ.

ದರ್ಶನ್ ಉಳಿದುಕೊಂಡಿದ್ದ ಖಾಸಗಿ ಹೋಟೆಲ್ ಸೇರಿದಂತೆ ಹಲವೆಡೆ ಸ್ಥಳ ಮಹಜರು ಮಾಡೋ ಸಾಧ್ಯತೆ ಇದೆ. ವಿಚಾರಣೆ ದೃಷ್ಟಿಯಲ್ಲಿ ಇದು ತುಂಬಾನೇ ಮುಖ್ಯ ಆಗಲಿದೆ. ದರ್ಶನ್ ಮೈಸೂರಿನಲ್ಲಿ ಏನು ಮಾಡಿದರು, ಕೊಲೆಗೆ ಸಂಬಂಧಿಸಿ ಅವರು ಹೋಟೆಲ್​ನಲ್ಲಿ ಚರ್ಚೆ ಮಾಡಿದ್ದರೇ ಎನ್ನುವ ಕುರಿತು ತನಿಖೆ ನಡೆಯಲಿದೆ.

ಇದನ್ನೂ ಓದಿ: ದರ್ಶನ್​ ಕೇಸ್: ವಿಚಾರಣೆ ಬಳಿಕ ಚಿಕ್ಕಣ್ಣ ಪ್ರತಿಕ್ರಿಯೆ; ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ

ಕಳೆದ ಮಂಗಳವಾರ (ಜೂನ್ 11) ದರ್ಶನ್ ಅರೆಸ್ಟ್ ಆಗಿದ್ದರು. ದರ್ಶನ್ ಜೊತೆ ಪವಿತ್ರಾ ಗೌಡ, ಪವನ್, ವಿನಯ್ ಸೇರಿ 19 ಜನರ ಬಂಧನ ಆಗಿದೆ. ಅವರ ವಿಚಾರಣೆ ಪ್ರಗತಿಯಲ್ಲಿದೆ. ಈಗಾಗಲೇ ಪೊಲೀಸರು ಎರಡನೇ ಬಾರಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:51 am, Tue, 18 June 24