ನಟ ಜಗ್ಗೇಶ್ ಓರ್ವ ಅಪ್ರತಿಮ ಕಲಾವಿದ ಎಂಬುದರಲ್ಲಿ ಅನುಮಾನವೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಅವರು ಮೂರು ದಶಕಗಳ ಹಿಂದೆಯೇ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದರು. ಈಗಲೂ ಬಹುಬೇಡಿಕೆಯ ಕಲಾವಿದನಾಗಿ ಸ್ಯಾಂಡಲ್ವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಬಾಲ್ಯದಲ್ಲಿ ಇದ್ದಾಗಲೇ ಅವರೊಳಗಿನ ಕಲಾವಿದನನ್ನು ಗುರುತಿಸಿದ್ದು ಯಾರು ಎಂಬ ಬಗ್ಗೆ ಜಗ್ಗೇಶ್ ಈಗ ಮಾಹಿತಿ ನೀಡಿದ್ದಾರೆ. ತೀವ್ರ ನೋವಿನೊಂದಿಗೆ ಅವರು ಆ ವಿಚಾರವನ್ನು ನೆನಪು ಮಾಡಿಕೊಂಡಿದ್ದಾರೆ.
ಹೌದು, ಜಗ್ಗೇಶ್ ಅವರು ಪ್ರೌಡಶಾಲಾ ವಿದ್ಯಾರ್ಥಿ ಆಗಿದ್ದಾಗಲೇ ಅವರೊಳಗಿನ ಕಲಾವಿದನ್ನು ಒಬ್ಬರು ಶಿಕ್ಷಕರು ಗುರುತಿಸಿದ್ದರು. ಅವರ ಹೆಸರು ಎಂ. ರಾಮಮೂರ್ತಿ. ಆದರೆ ಇಂದು ಅವರು ನಮ್ಮೊಂದಿಗಿಲ್ಲ. ಗುರುವಾರ ರಾತ್ರಿ 8.40ಕ್ಕೆ ಇಹಲೋಕ ತ್ಯಜಿಸಿದರು. ಟ್ವಿಟರ್ ಮೂಲಕ ಈ ಬೇಸರದ ಸುದ್ದಿಯನ್ನು ಜಗ್ಗೇಶ್ ತಿಳಿಸಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರನ್ನು ಅವರು ನೆನಪು ಮಾಡಿಕೊಂಡಿದ್ದಾರೆ.
‘ನನಗೆ ಗಣಿತ – ವಿಜ್ಞಾನ ಪಾಠ ಮಾಡಿ ಹಾಗು ಒಂದಲ್ಲಾ ಒಂದು ದಿನ ಇವನು ಕಲಾವಿದ ಆಗುತ್ತಾನೆ ಎಂದು ನಾನು 8ನೇ ಕ್ಲಾಸಿನಲ್ಲಿ ಇರಬೇಕಾದರೆ ಭವಿಷ್ಯ ನುಡಿದಿದ್ದ ಗುರುಗಳು. ಮಾರ್ಚ್ 18ರಂದು ಶಿವನಲ್ಲಿ ಲೀನವಾದರು. ನಮ್ಮ #MRM SIR.. #BPIHS ಶಾಲೆ ಮಲ್ಲೇಶ್ವರದ ಹೆಮ್ಮೆಯ ಪ್ರಾಧ್ಯಾಪಕರ ಆತ್ಮಕ್ಕೆ ಶಾಂತಿ ಕೋರುವ ನಿಮ್ಮ ತುಂಟ ವಿದ್ಯಾರ್ಥಿ ಈಶ್ವರ ಗೌಡ. ಓಂಶಾಂತಿ…’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಎಂ. ರಾಮಮೂರ್ತಿ ಅವರಿಗೆ ಜಗ್ಗೇಶ್ ರೀತಿಯೇ ಅನೇಕ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ನನಗೆ ಗಣಿತ ವಿಜ್ಞಾನ ಪಾಠ ಮಾಡಿ ಹಾಗು ಒಂದಲ್ಲಾ ಒಂದುದಿನ ಇವನು ಕಲಾವಿದ ಆಗುತ್ತಾನೆ ಎಂದು ನಾನು 8ನೆ ಕ್ಲಾಸಿನಲ್ಲಿ ಇರಬೇಕಾದರೆ ಭವಿಷ್ಯ ನುಡಿದಿದ್ದ ಗುರುಗಳು march18 ಶಿವನಲ್ಲಿ ಲೀನವಾದರು ನಮ್ಮ #MRM SIR..#BPIHS ಶಾಲೆ ಮಲ್ಲೇಶ್ವರದ ಹೆಮ್ಮೆಯ ಪ್ರಾಧ್ಯಾಪಕರ ಆತ್ಮಕ್ಕೆ ಶಾಂತಿ ಕೋರುವ ನಿಮ್ಮ ತುಂಟ ವಿದ್ಯಾರ್ಥಿ ಈಶ್ವರಗೌಡ? ಓಂಶಾಂತಿ.. pic.twitter.com/CV7QYOvpbz
— ನವರಸನಾಯಕ ಜಗ್ಗೇಶ್ (@Jaggesh2) March 19, 2021
ಎಂ. ರಾಮಮೂರ್ತಿ ನಿಧನದ ಬಗ್ಗೆ ಅವರ ಪುತ್ರ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. 60 ವರ್ಷಗಳ ಕಾಲ ಗಣಿತ ಮತ್ತು ವಿಜ್ಞಾನ ಪಾಠ ಮಾಡಿದ ಅನುಭವ ರಾಮಮೂರ್ತಿ ಅವರದ್ದಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವರು ಪಾಠ ಮಾಡಿದ್ದರು. ಬಿ.ಪಿ. ಇಂಡಿಯನ್ ಪಬ್ಲಿಕ್ ಸ್ಕೂಲ್ ಮತ್ತು ನಾಗಸೇನಾ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಜಗ್ಗೇಶ್ ಒಬ್ಬ ಕಲಾವಿದನಾಗುತ್ತಾರೆ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ರಾಮಮೂರ್ತಿ ಅವರು ಗುರುತಿಸಿದ್ದರು.
ಇದನ್ನೂ ಓದಿ: ನವರಸ ನಾಯಕ ಜಗ್ಗೇಶ್ಗೆ ಹ್ಯಾಪಿ ಬರ್ತ್ಡೇ ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!
Darshan Interview | ಜಗ್ಗೇಶ್ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್