‘ತಂದೆಯನ್ನು ಅಪಘಾತದಲ್ಲಿ ಕಳೆದುಕೊಂಡವನು ನಾನು, ಆ ನೋವು ಗೊತ್ತಿದೆ’; ಸುದ್ದಿಗೋಷ್ಠಿಯಲ್ಲಿ ಭಾವುಕರಾದ ನಾಗಭೂಷಣ್

| Updated By: ರಾಜೇಶ್ ದುಗ್ಗುಮನೆ

Updated on: Oct 09, 2023 | 1:23 PM

‘ನಾನು ಓಡಿ ಹೋಗಿಲ್ಲ. ನನಗೆ ಆ ನೋವು ಗೊತ್ತಿದೆ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನನ್ನ ತಂದೆಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದೆ. ಅಪಘಾತ ಮಾಡಿದವರು ಯಾರು ಎಂದು ಈಗಲೂ ಗೊತ್ತಿಲ್ಲ’ ಎಂದಿದ್ದಾರೆ ನಾಗಭೂಷಣ್.

‘ತಂದೆಯನ್ನು ಅಪಘಾತದಲ್ಲಿ ಕಳೆದುಕೊಂಡವನು ನಾನು, ಆ ನೋವು ಗೊತ್ತಿದೆ’; ಸುದ್ದಿಗೋಷ್ಠಿಯಲ್ಲಿ ಭಾವುಕರಾದ ನಾಗಭೂಷಣ್
ನಾಗಭೂಷಣ್
Follow us on

ಕೆಲ ದಿನಗಳ ಹಿಂದೆ ನಟ ನಾಗಭೂಷಣ್ (Nagabhushan) ಅವರ ಕಾರು ಅಪಘಾತಕ್ಕೆ ಒಳಗಾಗಿತ್ತು. ಈ ವೇಳೆ ಮಹಿಳೆ ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ನಾಗಭೂಷಣ್ ಕಾರು ಕೂಡ ಸಾಕಷ್ಟು ಜಖಂಗೊಂಡಿತ್ತು. ಇತ್ತೀಚೆಗೆ ಅವರ ಕಾರಿನ ಪರಿಶೀಲನೆ ಕೂಡ ಮಾಡಲಾಗಿದೆ. ಈಗ ನಾಗಭೂಷಣ್ ಅವರು ಈ ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

‘ಅಪಘಾತಕ್ಕೆ ಒಳಗಾದ ನಂತರ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದೆ. ಪೊಲೀಸರಿಗೆ ನಾನೇ ಮಾಹಿತಿ ನೀಡಿದ್ದೆ. ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟರು. ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿ ಪ್ರಕ್ರಿಯೆ ಮುಗಿಸಿದರು. ಅವರ ಬಳಿಯವರು ಬಂದ ಬಳಿಕ ನಾನು ಆಲ್ಕೋಹಾಲ್ ಕುಡಿದಿದ್ದೆನೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಿದರು. ಬ್ಲಡ್​ ಟೆಸ್ಟ್ ಕೂಡ ಮಾಡಲಾಯಿತು. ಅಲ್ಲಿಯೂ ಕುಡಿದಿಲ್ಲ ಎಂದು ವರದಿ ಬಂತು’ ಎಂದಿದ್ದಾರೆ ನಾಗಭೂಷಣ್.

‘ನಾನು ಓಡಿ ಹೋಗಿಲ್ಲ. ನನಗೆ ಆ ನೋವು ಗೊತ್ತಿದೆ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನನ್ನ ತಂದೆಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದೆ. ಅಪಘಾತ ಮಾಡಿದವರು ಯಾರು ಎಂದು ಈಗಲೂ ಗೊತ್ತಿಲ್ಲ. ಇಲ್ಲಿ ಅಟ್​ಲೀಸ್ಟ್​ ನನಗೆ ಅವಕಾಶ ಇದೆ. ಅವರ ನೋವಲ್ಲಿ ನಾನು ಭಾಗಿ ಆಗುತ್ತಿದ್ದೇನೆ. ಎಲ್ಲರೂ ನಗಿಸೋಕೆ ನನಗೆ ಇಷ್ಟ. ಬೇರೆಯವರಿಗೆ ದುಃಖ ಕೊಡೋಕೆ ನನಗೆ ಇಷ್ಟವಿಲ್ಲ’ ಎಂದಿದ್ದಾರೆ ನಾಗಭೂಷಣ್.

ಇದನ್ನೂ ಓದಿ: ನಟ ನಾಗಭೂಷಣ್​ಗೆ ಹೆಚ್ಚಿದ ಸಂಕಷ್ಟ; ಮತ್ತೊಂದು ಕೇಸ್ ದಾಖಲು ಸಾಧ್ಯತೆ

‘ಅಪಘಾತವಾದ ನಂತರ ದಯವಿಟ್ಟು ಓಡೋಗಬೇಡಿ. ನೀವು ಜೀವ ಉಳಿಸಬೇಕು. ನನಗೆ ಯಾರ ದೂರವಾಣಿ ಕರೆಯನ್ನು ಸ್ವೀಕರಿಸೋಕೆ ಸಾಧ್ಯವಾಗಿಲ್ಲ. ಅವರ ಮನೆಯವರನ್ನು ಭೇಟಿ ಮಾಡೋಕೆ ಆಗಿಲ್ಲ. ನಾನು ಏನೆಂದು ಹೋಗಿ ಭೇಟಿ ಮಾಡಬೇಕೋ ಗೊತ್ತಿಲ್ಲ. ದಯವಿಟ್ಟು ನನಗೆ ಸಮಯ ಕೊಡಿ. ನಾನು ಎಲ್ಲಿಯೂ ಓಡಿ ಹೋಗಲ್ಲ. ಇದು ಹಿಟ್ ಆ್ಯಂಡ್ ರನ್ ಕೇಸಲ್ಲ. ಅಪಘಾತ  ಆಕಸ್ಮಿಕ ’ ಎಂದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ