AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಚೋರಿ’ ಮಾರುವ ಹುಡುಗನಿಗೆ ಶ್ರೀಮಂತ ಹುಡುಗಿ ಜತೆ ಲವ್ ಆದರೆ ಏನಾಗುತ್ತೆ? ಹೀಗೊಂದು ಸಿನಿಮಾ

ಗಂಗಾವತಿ ಸುತ್ತ ಇರುವ ಲೊಕೇಷನ್​ಗಳಲ್ಲಿ ‘ಕಚೋರಿ’ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ವಿಜಯ್​ ಪ್ರಕಾಶ್ ಅವರ ಧ್ವನಿಯಲ್ಲಿ ಮೂಡಿಬಂದ ಹಾಡನ್ನು ಮನಾಲಿಯಲ್ಲಿ ಚಿತ್ರೀಕರಿಸಲಾಗಿದೆ. ಸಿನಿಮಾಗೆ ಸೆನ್ಸಾರ್​ ಪ್ರಕ್ರಿಯೆ ಬಾಕಿಯಿದೆ. ಆರ್ಯನ್ ಮತ್ತು ಇಳಾ ವಿಟ್ಲ ಅವರು ಜೋಡಿಯಾಗಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ಕಚೋರಿ’ ಮಾರುವ ಹುಡುಗನಿಗೆ ಶ್ರೀಮಂತ ಹುಡುಗಿ ಜತೆ ಲವ್ ಆದರೆ ಏನಾಗುತ್ತೆ? ಹೀಗೊಂದು ಸಿನಿಮಾ
‘ಕಚೋರಿ’ ಸಿನಿಮಾ ತಂಡ
ಮದನ್​ ಕುಮಾರ್​
|

Updated on: Oct 09, 2023 | 7:24 PM

Share

ಹೊಸ ಹೊಸ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ (Kannada Film Industry) ಮುಂದುವರಿದಿದೆ. ಹೊಸ ತಂಡಗಳ ಆಗಮನ ಆಗುತ್ತಲೇ ಇದೆ. ಈಗ ಆ ಸಾಲಿಗೆ ಸೇರ್ಪಡೆ ಆಗಿರುವುದು ‘ಕಚೋರಿ’ ಸಿನಿಮಾ (Kachori Kannada movie) ಟೀಮ್​. ಕಚೋರಿ ಎಂದರೆ ಅನೇಕರು ಇಷ್ಟಪಡುವ ತಿನಿಸು. ಅದನ್ನೇ ಶೀರ್ಷಿಕೆಯಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದಕ್ಕೆ ಕಾರಣ ಕೂಡ ಇದೆ. ಈ ಸಿನಿಮಾದಲ್ಲಿ ಕಥಾನಾಯಕ ಕಚೋರಿ (Kachori) ಮಾರುವ ಹುಡುಗನಾಗಿರುತ್ತಾನೆ. ಆತನಿಗೆ ಓರ್ವ ಶ್ರೀಮಂತ ಹುಡುಗಿಯ ಮೇಲೆ ಲವ್ ಆಗುತ್ತದೆ. ಆ ನಂತರ ಆಗುವುದೇ ಬ್ರೇಕಪ್! ಆದರೆ ಆ ಬ್ರೇಕಪ್​ಗೆ ಕಾರಣ ಏನು ಎಂಬುದನ್ನು ಹುಡುಕುವುದೇ ಈ ಸಿನಿಮಾದ ಕಹಾನಿಯ ಎಳೆ. ಇತ್ತೀಚೆಗೆ ಈ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.

‘ಕಚೋರಿ’ ಸಿನಿಮಾಗೆ ಆರ್ಯನ್ ಅವರು ಹೀರೋ. ‘ಸಿನಿವೇ ಸಿನಿ ಕ್ರಿಯೇಶನ್ಸ್’ ಸಂಸ್ಥೆಯ ಮೂಲಕ ಆರ್ಯನ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಟನೆ, ನಿರ್ಮಾಣ ಮಾತ್ರವಲ್ಲದೇ ನಿರ್ದೇಶಕ ಕೂಡ ಅವರದ್ದೇ. ಹೌದು, ‘ಕಚೋರಿ’ ಚಿತ್ರಕ್ಕೆ ಆರ್ಯನ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅವರಿಗೆ ಜೋಡಿಯಾಗಿ ನಟಿ ಇಳಾ ವಿಟ್ಲ ಅವರು ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಕೀರ್ತಿರಾಜ್ ಅವರು ಈ ಸಿನಿಮಾದಲ್ಲಿ ಡಾನ್ ಪಾತ್ರ ಮಾಡಿದ್ದಾರೆ. ಕೃಪಾಕರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ 5 ಹಾಡುಗಳು ಇವೆ. ಪ್ರತಾಪ್‌ ರೆಡ್ಡಿ ಅವರು ಗೀತರಚನೆ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್​ ಪ್ರಕ್ರಿಯೆ ಬಾಕಿಯಿದೆ.

ಇದನ್ನೂ ಓದಿ: ’ರಾಜಯೋಗ’ ಸಿನಿಮಾದಲ್ಲಿ ಧರ್ಮಣ್ಣನ ಮಾತ್ರವಲ್ಲ ಇದ್ದಾರೆ ಇನ್ನೂ ಇಬ್ಬರು ನಾಯಕರು

ಆರ್ಯನ್​ ಅವರು ‘ಸಿನಿವೇ ಸಿನಿ ಆಕ್ಟಿಂಗ್ ಕ್ಲಾಸ್’ ನಡೆಸುತ್ತಿದ್ದಾರೆ. ಮಕ್ಕಳ ಚಿತ್ರವನ್ನು ಮಾಡಬೇಕು ಎಂಬುದು ಅವರ ಆಶಯ ಆಗಿತ್ತು. ಕೊವಿಡ್ ಸಂದರ್ಭದಲ್ಲಿ ಸಿನಿಮಾ ಕೆಲಸ ಶುರುವಾಯಿತು. ಗೆಳೆಯರಾದ ಮಂಜುನಾಥ್, ರಮೇಶ್, ಖಾಜಾಹುಲಿ ಅವರ ಬೆಂಬಲದಿಂದ ಈ ಸಿನಿಮಾ ಮಾಡಲಾಗಿದೆ ಎಂದು ಆರ್ಯನ್​ ತಿಳಿಸಿದ್ದಾರೆ. ಗಂಗಾವತಿ ಸುತ್ತ ಇರುವ ಲೊಕೇಷನ್​ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಜಯ್​ ಪ್ರಕಾಶ್ ಅವರ ಧ್ವನಿಯಲ್ಲಿ ಮೂಡಿಬಂದ ಹಾಡನ್ನು ಮನಾಲಿಯಲ್ಲಿ ಚಿತ್ರೀಕರಿಸಲಾಗಿದೆ. ಕೆಂಪೇಗೌಡ ಮತ್ತು ಮೋಹನ್ ಜುನೇಜಾ ಅವರು ಈ ಸಿನಿಮಾದಲ್ಲಿ ಹಾಸ್ಯ ಪಾತ್ರಗಳನ್ನು ಮಾಡಿದ್ದಾರೆ. ಇದು ಫ್ಯಾಮಿಲಿ ಪ್ರೇಕ್ಷಕರು ನೋಡುವಂತಹ ಸಿನಿಮಾ ಎಂದು ಆರ್ಯನ್​ ಹೇಳಿದ್ದಾರೆ.

ಇದನ್ನೂ ಓದಿ: ತೃತೀಯ ಲಿಂಗಿ ನಟಿಗೆ ಸಿನಿಮಾದಲ್ಲಿ ಅವಕಾಶ ನೀಡಿದ ‘ಮಿಸ್ಟರ್​ ಆ್ಯಂಡ್​ ಮಿಸಸ್​ ಮನ್ಮಥ’ ಚಿತ್ರತಂಡ

ಕೀರ್ತಿರಾಜ್ ಅವರು ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ‘ಈ ಸಿನಿಮಾದಲ್ಲಿ ನಾನು ಡಾನ್ ಪಾತ್ರ ಮಾಡಿದ್ದೇನೆ. ಬದುಕಿನಲ್ಲಿ ನೊಂದಿರುವ ಕಥಾನಾಯಕ ನನ್ನ ಆಶ್ರಯ ಪಡೆಯುತ್ತಾನೆ. ಅಲ್ಲಿ ಆತ ಹೇಗೆ ಬೆಳೆಯುತ್ತಾನೆ ಎಂಬುದೇ ಕಥೆಯ ಸಾರಾಂಶ. ಆರ್ಯನ್ ಅವರಿಗೆ ಇದು ಮೊದಲ ಸಿನಿಮಾ ಆಗಿದ್ದರೂ ಕೂಡ ಹಲವು ಚಿತ್ರ ಮಾಡಿದವರ ರೀತಿ ಕೆಲಸ ಮಾಡಿದ್ದಾರೆ’ ಎಂದು ಅವರು ಹೇಳಿದ್ದಾರೆ. ನಾಯಕಿ ಇಳಾ ವಿಟ್ಲ ಅವರಿಗೆ ಇದು ನನ್ನ 3ನೇ ಸಿನಿಮಾ. ಇದರಲ್ಲಿ ಅವರು ಎರಡು ಶೇಡ್​ ಇರುವ ಪಾತ್ರ ಮಾಡಿದ್ದಾರೆ. ಮಂಜುನಾಥ್, ದೊಡ್ಡ ಬಸವರಾಜ್ ಮುಂತಾದವರು ಕೂಡ ‘ಕಚೋರಿ’ ಚಿತ್ರದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.