ರಾಜ್ಕುಮಾರ್ ಸಿನಿಮಾ ಸಹಿಹಾಕಿದ ಬಳಿಕ ಬದಲಾಯ್ತು ಸುಧೀರ್ ಬದುಕು
1973ರ ‘ಬೀಸಿದ ಬಲೆ’ ಸಿನಿಮಾ ಮೂಲಕ ಸುಧೀರ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಏಳೆಂಟು ವರ್ಷಗಳಲ್ಲಿ ಕೆಲವೇ ಕೆಲವು ಸಿನಿಮಾ ಮಾಡಿದರು. 1981ರಲ್ಲಿ ರಿಲೀಸ್ ಆದ ರಾಜ್ಕುಮಾರ್ ನಟನೆಯ ‘ನೀ ನನ್ನ ಗೆಲ್ಲಲಾರೆ’ ಹಾಗೂ ‘ಕೆರಳಿದ ಸಿಂಹ’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ ಅವರು ಗಮನ ಸೆಳೆದರು.
ನಟ ಸುಧೀರ್ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರಿಗೆ ಬೇಡಿಕೆಯ ಖಳನಟನಾಗಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು. ಅವರ ಮಗ ತರುಣ್ ಈಗ ಚಿತ್ರರಂಗದ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸುಧೀರ್ ಅವರ ಬದುಕು ಆರಂಭದಲ್ಲಿ ಸಾಮಾನ್ಯ ಕಲಾವಿದರ ರೀತಿಯೇ ಇತ್ತು. ಯಾವಾಗ ರಾಜ್ಕುಮಾರ್ ಸಿನಿಮಾ ಸಹಿ ಹಾಕಿದರೋ ಅಲ್ಲಿಂದ ಅವರ ಬದುಕು ಬದಲಾಯ್ತು. ಈ ಬಗ್ಗೆ ಸುಧೀರ್ ಪತ್ನಿ ಮಾಲತಿ ಸುಧೀರ್ ಅವರು ಮಾತನಾಡಿದ್ದರು.
1973ರ ‘ಬೀಸಿದ ಬಲೆ’ ಸಿನಿಮಾ ಮೂಲಕ ಸುಧೀರ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಏಳೆಂಟು ವರ್ಷಗಳಲ್ಲಿ ಕೆಲವೇ ಕೆಲವು ಸಿನಿಮಾ ಮಾಡಿದರು. 1981ರಲ್ಲಿ ರಿಲೀಸ್ ಆದ ರಾಜ್ಕುಮಾರ್ ನಟನೆಯ ‘ನೀ ನನ್ನ ಗೆಲ್ಲಲಾರೆ’ ಹಾಗೂ ‘ಕೆರಳಿದ ಸಿಂಹ’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ ಅವರು ಗಮನ ಸೆಳೆದರು. ರಾಜ್ಕುಮಾರ್ ಜೊತೆ ಸುಧೀರ್ ನಟಿಸಬೇಕು ಎಂಬುದು ಪತ್ನಿ ಮಾಲತಿ ಅವರ ಆಸೆಯೂ ಆಗಿತ್ತು.
ರಾಜ್ಕುಮಾರ್ ಸಿನಿಮಾದಲ್ಲಿ ನನ್ನ ಪತಿ ನಟಿಸಬೇಕಿತ್ತು ಎಂಬುದು ನನ್ನ ಆಸೆ ಆಗಿತ್ತು. ‘ರಾಘವೇಂದ್ರ ಸ್ವಾಮಿ ಇದಾನೆ ಬಿಡು’ ಎಂದು ಸುಧೀರ್ ಅವರು ಮಾಲತಿಗೆ ಹೇಳಿದ್ದರು. ದೇವರ ಮೇಲೆ ಮಾಲತಿಗೆ ಅಷ್ಟಾಗಿ ನಂಬಿಕೆ ಇರಲಿಲ್ಲ. ಹೀಗಾಗಿ, ಈ ಮಾತನ್ನು ಅವರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಆದರೆ ಒಂದು ದಿನ ಚಮತ್ಕಾರ ನಡೆಯಿತು.
ರಾಯರ ವಾರ ಗುರುವಾರವೇ ರಾಜ್ಕುಮಾರ್ ಅವರು ಸುಧೀರ್ ಮನೆಗೆ ಬಂದರು. ಕಾರು ಬಂದು ನಿಂತಿದ್ದು ನೋಡಿದ ಮಾಲತಿ ಅವರು ಹೋಗಿ ನೋಡಿದರೆ ರಾಜ್ಕುಮಾರ್ ಹಾಗೂ ಪಾರ್ವತಮ್ಮ ಕಾರಲ್ಲಿ ಇದ್ದಿದ್ದರು. ‘ಸುಧೀರ್ಗೆ ಬರೋಕೆ ಹೇಳು. ಇಲ್ಲೇ ವರದಣ್ಣವರ ಮನೆಯಲ್ಲಿ ಇರುತ್ತೇನೆ’ ಎಂದು ಹೇಳಿ ರಾಜ್ಕುಮಾರ್ ಅವರು ತೆರಳಿದ್ದರು. ಅಲ್ಲಿ ಮಾತನಾಡಿದರು. ಆ ಬಳಿಕ ಕಚೇರಿಗೆ ಬರೋಕೆ ಹೇಳಿದ್ದರು.
ಇದನ್ನೂ ಓದಿ: ತರುಣ್-ಸೋನಲ್ ಮದುವೆಗೆ ಚಂದದ ಸೀರೆ ಧರಿಸಿ ಬಂದ ಆಶಿಕಾ ರಂಗನಾಥ್
ಕಚೇರಿಗೆ ಹೋದರೆ ಸುಧೀರ್ ಅವರಿಗೆ ‘ನೀ ನನ್ನ ಗೆಲ್ಲಲಾರೆ’ ಹಾಗೂ ‘ಕೆರಳಿದ ಸಿಂಹ’ದಲ್ಲಿ ನಟಿಸಿದ್ದರು. ಇದರಿಂದ ಅವರ ಬದುಕು ಸಂಪೂರ್ಣವಾಗಿ ಬದಲಾಗಿತ್ತು. ಈ ವಿಚಾರವನ್ನು ಮಾಲತಿ ಅವರೇ ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.