‘ಉಪೇಂದ್ರ’ ರಿಲೀಸ್​ಗೂ ಮೊದಲು ಅಭಿಮಾನಿಗಳನ್ನು ಕನ್​ಫ್ಯೂಸ್ ಮಾಡಿದ ಉಪ್ಪಿ

ಉಪೇಂದ್ರ ಬರೆದಿರೋ ಸಾಲುಗಳು ‘ನಾನು’ ವಿಚಾರಕ್ಕೆ ಸಂಬಂಧಿಸಿದೆ. ಅವರು ಕೆಲವರು ಪೋಸ್ಟರ್​ಗಳನ್ನು ಕೂಡ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರವೀನಾ ಟಂಡನ್, ಪ್ರೇಮಾ, ಗುರುಕಿರಣ್​, ಅರುಣ್ ಗೋವಿಲ್ ಮೊದಲಾದವರು ನಟಿಸಿದ್ದರು.

‘ಉಪೇಂದ್ರ’ ರಿಲೀಸ್​ಗೂ ಮೊದಲು ಅಭಿಮಾನಿಗಳನ್ನು ಕನ್​ಫ್ಯೂಸ್ ಮಾಡಿದ ಉಪ್ಪಿ
ಉಪೇಂದ್ರ
Follow us
ರಾಜೇಶ್ ದುಗ್ಗುಮನೆ
|

Updated on: Sep 14, 2024 | 2:30 PM

ನಟ ಉಪೇಂದ್ರ ನಿರ್ದೇಶನದ ‘ಉಪೇಂದ್ರ’ ಸಿನಿಮಾ 1999ರ ಅಕ್ಟೋಬರ್ 22ರಂದು ರಿಲೀಸ್ ಆಗಿತ್ತು. ಈ ಸಿನಿಮಾ ರಿಲೀಸ್ ಆಗಿ 25 ವರ್ಷಗಳು ಕಳೆಯುತ್ತಿರುವ ಸಂದರ್ಭದಲ್ಲಿ ಸಿನಿಮಾನ ರೀ-ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ. ಸೆಪ್ಟೆಂಬರ್ 20ರಂದು ಈ ಚಿತ್ರ ರೀ-ರೀಲೀಸ್ ಆಗುತ್ತಿದೆ. ಉಪೇಂದ್ರ ಅವರು ಈ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಫ್ಯಾನ್ಸ್ ತಲೆಗೆ ಹುಳಬಿಟ್ಟಿದ್ದಾರೆ.

ಉಪೇಂದ್ರ ಸಿನಿಮಾದಲ್ಲಿ ಉಪೇಂದ್ರ ಅವರು ‘ನಾನು’ ಹೆಸರಿನ ಪಾತ್ರ ಮಾಡಿದ್ದರು. ಪಾತ್ರದ ಹೆಸರೇ ಸಾಕಷ್ಟು ಗೊಂದಲ ಸೃಷ್ಟಿ ಮಾಡುತ್ತದೆ. ಈಗ ಉಪೇಂದ್ರ ಅವರು ‘ನಾನು’ ಹೆಸರನ್ನೇ ಇಟ್ಟುಕೊಂಡು ಸಾಲುಗಳನ್ನು ಬರೆದಿದ್ದಾರೆ. ‘ನಾನು ‘ನಾನು’ ಬಿಡಕ್ ಟ್ರೈ ಮಾಡ್ತಿದೀನಿ. ಆದ್ರೆ ನೀನು ‘ನಾನು’ನ ಬಿಡ್ತಿಲ್ಲ. ನಿಮ್ಮ ‘ನಾನು’ ರೀ ರಿಲೀಸ್. ಇದೇ ಸೆಪ್ಟೆಂಬರ್ 20ಕ್ಕೆ. 25 ವರ್ಷ ಆದರೂ ಇನ್ನೂ ಈ ಚಿತ್ರದ ಹಾಡು, ಸಂಭಾಷಣೆ ಜೀವಂತವಾಗಿ ಇಟ್ಟಿರುವ ನಿಮಗೆ ನಮಸ್ಕಾರ’ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

ಸದ್ಯ ಉಪೇಂದ್ರ ಬರೆದಿರೋ ಸಾಲುಗಳು ‘ನಾನು’ ವಿಚಾರಕ್ಕೆ ಸಂಬಂಧಿಸಿದೆ. ಅವರು ಕೆಲವರು ಪೋಸ್ಟರ್​ಗಳನ್ನು ಕೂಡ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರವೀನಾ ಟಂಡನ್, ಪ್ರೇಮಾ, ಗುರುಕಿರಣ್​, ಅರುಣ್ ಗೋವಿಲ್ ಮೊದಲಾದವರು ನಟಿಸಿದ್ದರು.

ಇದನ್ನೂ ಓದಿ: ಉಪೇಂದ್ರ ಕುಟುಂಬದಲ್ಲಿ ಗೌರಿ-ಗಣೇಶ ಹಬ್ಬ ಆಚರಿಸಿದ್ದು ಹೇಗೆ ನೋಡಿ..

‘ಉಪೇಂದ್ರ’ ಚಿತ್ರವನ್ನು ಶಿಲ್ಪಾ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಅಂದಿನ ಕಾಲಕ್ಕೆ ಈ ಚಿತ್ರ 10 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ಎನ್ನಲಾಗಿದೆ. ಈ ಚಿತ್ರಕ್ಕೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಮಾಡಿ ಅದಕ್ಕೆ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡುವ ಆಲೋಚನೆ ಶಿಲ್ಪಾ ಶ್ರೀನಿವಾಸ್​ಗೆ ಇದೆಯಂತೆ. ಬೆಂಗಳೂರಿನ ಮಾಗಡಿ ರೋಡ್ ಬಳಿ ಇರುವ ವೀರೇಶ್ ಥಿಯೇಟರ್​ನಲ್ಲಿ ಸೆಪ್ಟೆಂಬರ್ 20ರಂದು ಮುಂಜಾನೆ 6.30ಕ್ಕೆ ಫ್ಯಾನ್​ ಶೋ ಆಯೋಜನೆ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.