ನಿರೂಪ್ ಭಂಡಾರಿ ಜೊತೆ ಬೃಂದಾ ಆಚಾರ್ಯ ಹೊಸ ಸಿನಿಮಾ; ಶಿವಾನಿಗೆ ಸಖತ್​ ಚಾನ್ಸ್​

|

Updated on: Dec 26, 2023 | 6:14 PM

ತಮ್ಮ ಪಾಲಿಗೆ ಬರುತ್ತಿರುವ ಒಳ್ಳೆಯ ಅವಕಾಶಗಳನ್ನು ಬೃಂದಾ ಆಚಾರ್ಯ ಅವರು ಬಾಚಿಕೊಳ್ಳುತ್ತಿದ್ದಾರೆ. ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಯಶಸ್ಸಿನ ನಂತರ ಅವರು ಮೂರು ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಇಷ್ಟೇ ಅಲ್ಲದೇ ಇನ್ನೂ ಅನೇಕ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ನಿರೂಪ್ ಭಂಡಾರಿ ಜೊತೆ ಬೃಂದಾ ಆಚಾರ್ಯ ಹೊಸ ಸಿನಿಮಾ; ಶಿವಾನಿಗೆ ಸಖತ್​ ಚಾನ್ಸ್​
ಬೃಂದಾ ಆಚಾರ್ಯ
Follow us on

2023ರಲ್ಲಿ ಸದ್ದು ಮಾಡಿದ ಕನ್ನಡ ಸಿನಿಮಾಗಳಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಕೂಡ ಪ್ರಮುಖವಾದದ್ದು. ಆ ಸಿನಿಮಾದಲ್ಲಿ ನಟಿ ಬೃಂದಾ ಆಚಾರ್ಯ (Brinda Acharya) ಅವರು ಶಿವಾನಿ ಎಂಬ ಪಾತ್ರ ಮಾಡಿ ಎಲ್ಲರ ಮನಸ್ಸು ಗೆದ್ದರು. ಅವರಿಗೆ ಹೊಸ ಹೊಸ ಅವಕಾಶಗಳು ಒಲಿದು ಬರುತ್ತಿವೆ. ಅವರೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಬೃಂದಾ ಆಚಾರ್ಯ ನಟಿಸಲಿರುವ ಆ ಹೊಸ ಚಿತ್ರಕ್ಕೆ ನಿರೂಪ್​ ಭಂಡಾರಿ (Nirup Bhandari) ಹೀರೋ ಎಂಬುದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಬೃಂದಾ ಆಚಾರ್ಯ ಗುರುತಿಸಿಕೊಂಡಿದ್ದಾರೆ.

ಬೃಂದಾ ಆಚಾರ್ಯ ಮತ್ತು ನಿರೂಪ್ ಭಂಡಾರಿ ಜೋಡಿಯಾಗಿ ಅಭಿನಯಿಸಲಿರುವ ಹೊಸ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಸಕ್ರಿಯವಾಗಿರುವ ಸಚಿನ್​ ಅವರು ಇದೇ ಮೊದಲ ಬಾರಿಗೆ ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಬೃಂದಾ ಆಚಾರ್ಯ ಅವರ ಪಾತ್ರ ಸಖತ್​ ಭಿನ್ನವಾಗಿ ಇರಲಿದೆ. ಕಿರುತೆರೆ ಧಾರಾವಾಹಿಗಳ ಮೂಲಕ ಗಮನ ಸೆಳೆದಿರುವ ಅಂಕಿತಾ ಅಮರ್​​ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಅವರಿಗೆ ರಿಪೋರ್ಟರ್​ ಪಾತ್ರ ನೀಡಲಾಗಿದೆ.

ತಮ್ಮ ಪಾಲಿಗೆ ಬರುತ್ತಿರುವ ಒಳ್ಳೆಯ ಅವಕಾಶಗಳನ್ನು ಬೃಂದಾ ಆಚಾರ್ಯ ಅವರು ಬಾಚಿಕೊಳ್ಳುತ್ತಿದ್ದಾರೆ. ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಯಶಸ್ಸಿನ ನಂತರ ಅವರು ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’, ‘ಎಕ್ಸ್ ಆಂಡ್ ವೈ’, ‘ಒಂದ್ಸಲ ಮೀಟ್ ಮಾಡೋಣ’ ಸಿನಿಮಾಗಳಿಗೆ ಬೃಂದಾ ಆಚಾರ್ಯ ಅವರು ನಾಯಕಿ ಆಗಿದ್ದಾರೆ. ಇಷ್ಟೇ ಅಲ್ಲದೇ ಇನ್ನೂ ಅನೇಕ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ಇದನ್ನೂ ಓದಿ: Kausalya Supraja Rama: ಸಿನಿಮಾ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟ ನಟಿ ಬೃಂದಾ ಆಚಾರ್ಯ

ಪ್ರತಿ ಸಿನಿಮಾದಲ್ಲೂ ಡಿಫರೆಂಟ್​ ಪಾತ್ರ ಮಾಡಬೇಕು ಎಂಬುದು ಬೃಂದಾ ಆಚಾರ್ಯ ಅವರ ಉದ್ದೇಶ. ಅದಕ್ಕಾಗಿ ಹೊಸತನ ಇರುವಂತಹ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಮತ್ತೊಂದು ಸಿನಿಮಾಗೆ ಅವರು ಸಹಿ ಮಾಡಿದ್ದು, ಅದರಲ್ಲಿ ಸೋಶಿಯಲ್​ ಮೀಡಿಯಾ ಇನ್​ಫ್ಲೂಯನ್ಸರ್​ ಆಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರಕ್ಕಾಗಿ ಅವರು ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:59 pm, Tue, 26 December 23