ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಇಶಾ ಕೊಪ್ಪಿಕರ್ (Isha Koppikar) ಅವರ ಖಾಸಗಿ ಬದುಕಿನ ಬಗ್ಗೆ ಒಂದು ಕಹಿ ಸುದ್ದಿ ಕೇಳಿಬಂದಿದೆ. ಪತಿ ಟಿಮ್ಮಿ ನಾರಂಗ್ (Timmy Narang) ಜೊತೆಗಿನ 14 ವರ್ಷಗಳ ದಾಂಪತ್ಯವನ್ನು ಅವರು ಅಂತ್ಯಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಶಾ ಕೊಪ್ಪಿಕರ್ ವಿಚ್ಛೇದನ (Divorce) ಪಡೆದಿದ್ದು, ಗಂಡನ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ಸುದ್ದಿ ಆಗಿದೆ. ಈ ವಿಷಯ ಕೇಳಿ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಕನ್ನಡದ ‘ಸೂರ್ಯವಂಶ’, ‘ಓ ನನ್ನ ನಲ್ಲೆ’ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ ಪ್ರೇಕ್ಷಕರಿಗೂ ಇಶಾ ಕೊಪ್ಪಿಕರ್ ಪರಿಚಿತರಾಗಿದ್ದಾರೆ.
2009ರಲ್ಲಿ ಉದ್ಯಮಿ ಟಿಮ್ಮಿ ನಾರಂಗ್ ಜೊತೆ ಇಶಾ ಕೊಪ್ಪಿಕರ್ ಅವರ ವಿವಾಹ ನೆರವೇರಿತ್ತು. ಪರಸ್ಪರ ಪ್ರೀತಿಸಿ ಅವರು ಮದುವೆ ಆಗಿದ್ದರು. ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. 14 ವರ್ಷಗಳ ಕಾಲ ಒಟ್ಟಾಗಿ ಸಂಸಾರ ಮಾಡಿದ ಈ ಜೋಡಿಯ ಬದುಕಿನಲ್ಲಿ ಈಗ ಬಿರುಕು ಉಂಟಾಗಿದೆ. ಇಬ್ಬರೂ ವಿಚ್ಛೇದನ ಪಡೆದು ದೂರ ಆಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿದೆ.
ಇದನ್ನೂ ಓದಿ: ವಿಚ್ಛೇದನಕ್ಕೆ ನಿರ್ಧಾರ: ನ್ಯಾಯಾಲಯದಲ್ಲಿ 12 ಲಕ್ಷ ರೂ. ಜೀವನಾಂಶಕ್ಕೆ ಒಪ್ಪದವಳು 11 ಸಾವಿರಕ್ಕೆ ಒಪ್ಪಿದ್ಹೇಗೆ?
ವಿಚ್ಛೇದನದ ಸುದ್ದಿ ಬಗ್ಗೆ ಇಶಾ ಕೊಪ್ಪಿಕರ್ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಹೊಂದಾಣಿಕೆ ಸಮಸ್ಯೆಯಿಂದಾಗಿ ಈ ದಂಪತಿ ಬೇರೆ ಆಗಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಕೂಡ ಸಾಮರಸ್ಯ ಮೂಡದ ಕಾರಣ ಅವರು ಡಿಪೋರ್ಸ್ ಪಡೆದುಕೊಂಡಿದ್ದಾರೆ. 9 ವರ್ಷ ವಯಸ್ಸಿನ ಮಗಳ ಜೊತೆಯಲ್ಲಿ ಇಶಾ ಕೊಪ್ಪಿಕರ್ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಿಚ್ಛೇದನ: ಸಣ್ಣ ಪುಟ್ಟ ವಿವಾದಗಳು, ಕೆಲವು ಘಟನೆಗಳನ್ನು ಕ್ರೌರ್ಯ ಎನ್ನಲಾಗದು: ಅಲಹಾಬಾದ್ ಹೈಕೋರ್ಟ್
ಇಶಾ ಕೊಪ್ಪಿಕರ್ ಅವರು 1997ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮರಾಠಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲೊಂದು ಇಲ್ಲೊಂದು ಪ್ರಾಜೆಕ್ಟ್ ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ರಾಜಕೀಯದಲ್ಲಿ ಅವರಿಗೆ ಆಸಕ್ತಿ ಮೂಡಿದೆ. 2019ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.