ಒಂದು ಕಾಲದ ಸ್ಟಾರ್ ಹೀರೋಯಿನ್ ಖುಷ್ಬೂ ಸುಂದರ್ (Kushboo Sundar) ಅವರು ಈಗ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ರಾಜಕೀಯದಲ್ಲೂ ಸಕ್ರಿಯರಾಗಿರುವ ಅವರು ಈಗ ಫಿಟ್ನೆಸ್ (Fitness) ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಖುಷ್ಬೂ ಸಖತ್ ದಪ್ಪ ಆಗಿದ್ದರು. ಅವರ ದೇಹದ ತೂಕ ಅಗತ್ಯಕ್ಕಿಂತ ಜಾಸ್ತಿ ಆಗಿತ್ತು. ಆದರೆ ಈಗ ಅವರು ಬದಲಾಗಿದ್ದಾರೆ. ಕಠಿಣ ಪರಿಶ್ರಮದಿಂದ ಬಳುಕುವ ಬಳ್ಳಿಯಂತೆ ಸ್ಲಿಮ್ ಆಗಿದ್ದಾರೆ. ದೇಹದ ತೂಕ ಇಳಿಸಿಕೊಳ್ಳುವಲ್ಲಿ (Weight Loss) ತಾವು ಅನುಸರಿಸುತ್ತಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಸ್ಲಿಮ್ ಅವತಾರದ ಫೋಟೋ (Kushboo Photos) ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
‘ಅಲ್ಲಿಂದ ಇಲ್ಲಿಯವರೆಗಿನ ಪಯಣ. 20 ಕೆಜಿ ಸಣ್ಣಗಾಗಿದ್ದೇನೆ. ತುಂಬ ಆರೋಗ್ಯಕರವಾಗಿದ್ದೇನೆ. ನಿಮ್ಮನ್ನು ನೀವು ನೋಡಿಕೊಳ್ಳಿ. ಆರೋಗ್ಯವೇ ಭಾಗ್ಯ. ನನಗೆ ಹುಷಾರಿಲ್ಲವೇ ಎಂದು ಕೆಲವರು ಕೇಳುತ್ತಿದ್ದೀರಿ. ನಿಮ್ಮ ಕಾಳಜಿಗೆ ಧನ್ಯವಾದ. ಈ ಹಿಂದೆ ಯಾವಾಗಲೂ ನಾನು ಇಷ್ಟು ಫಿಟ್ ಆಗಿರಲಿಲ್ಲ. ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗುಲು ನಿಮ್ಮಲ್ಲಿ ಕನಿಷ್ಠ 10 ಜನರಿಗೆ ನಾನು ಸ್ಫೂರ್ತಿಯಾದರೆ ನಾನು ಗೆದ್ದಿದ್ದೇನೆ ಅಂತ ತಿಳಿದುಕೊಳ್ಳುತ್ತೇನೆ’ ಎಂದು ಖುಷ್ಬೂ ಹೇಳಿದ್ದಾರೆ.
ತಮ್ಮ ಈ ಮೊದಲಿನ ಫೋಟೋ ಜತೆಗೆ ಇಂದಿನ ಫೋಟೋವನ್ನು ಅಕ್ಕಪಕ್ಕ ಇಟ್ಟು ಖುಷ್ಬೂ ಪೋಸ್ಟ್ ಮಾಡಿದ್ದಾರೆ. ಎರಡೂ ಫೋಟೋದಲ್ಲಿನ ವ್ಯತ್ಯಾಸ ಕಂಡು ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ. ಈ ಬದಲಾವನೆಯ ರಹಸ್ಯ ಏನು ಎಂದು ಕೂಡ ಅನೇಕರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಖುಷ್ಬೂ ಉತ್ತರ ನೀಡಿದ್ದಾರೆ. ‘ಪರಿಶ್ರಮ.. ಡಯೆಟ್ ಜತೆಗೆ ವ್ಯಾಯಾಮ’ ಎಂದು ಅವರು ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
1980 ಮತ್ತು 1990ರ ದಶಕದಲ್ಲಿ ಖುಷ್ಬೂ ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಆಗಿದ್ದರು. ರವಿಚಂದ್ರನ್ ಜತೆ ‘ರಣಧೀರ’ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಕರುನಾಡಿನಲ್ಲಿ ಮನೆಮಾತಾಗಿದರು. ಬಳಿಕ ‘ಅಂಜದ ಗಂಡು’, ‘ಯುಗ ಪುರುಷ’ ಸಿನಿಮಾಗಳ ಮೂಲಕವೂ ಮೋಡಿ ಮಾಡಿದರು. ಕನ್ನಡ ಚಿತ್ರರಂಗದ ಜತೆ ಅವರು ಈಗಲೂ ನಂಟು ಹೊಂದಿದ್ದಾರೆ. ಇತ್ತೀಚೆಗೆ ಪುನೀತ್ ರಾಜ್ಕುಮಾರ್ ನಿಧನರಾದಾಗ ಅವರ ಆತ್ಮಕ್ಕೆ ಖುಷ್ಬೂ ಶಾಂತಿ ಕೋರಿದ್ದರು.
ಇದನ್ನೂ ಓದಿ:
ಫಿಟ್ನೆಸ್ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ? ಕೇಸ್ ದಾಖಲು
ಪುನೀತ್ ನಿಧನದ ಬಳಿಕ ಜಿಮ್ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ
Published On - 11:47 am, Sun, 5 December 21