Prema: 2ನೇ ಮದುವೆ ಗಾಸಿಪ್​ಗೆ ಪ್ರೇಮಾ ಪ್ರತಿಕ್ರಿಯೆ; ಕೊರಗಜ್ಜನ ದೇವಸ್ಥಾನಕ್ಕೆ ತೆರಳಿದ್ದರ ಬಗ್ಗೆ ನಟಿ ಮಾತು

|

Updated on: Jan 24, 2023 | 3:17 PM

Prema 2nd Marriage: ಕೆಲವೇ ದಿನಗಳ ಹಿಂದೆ ಪ್ರೇಮಾ ಅವರು ಕೊರಗಜ್ಜನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಆ ಬಳಿಕ ಅವರ 2ನೇ ಮದುವೆ ಬಗ್ಗೆ ಗಾಸಿಪ್​ ಹರಡಿತು.

Prema: 2ನೇ ಮದುವೆ ಗಾಸಿಪ್​ಗೆ ಪ್ರೇಮಾ ಪ್ರತಿಕ್ರಿಯೆ; ಕೊರಗಜ್ಜನ ದೇವಸ್ಥಾನಕ್ಕೆ ತೆರಳಿದ್ದರ ಬಗ್ಗೆ ನಟಿ ಮಾತು
ಪ್ರೇಮಾ
Follow us on

ಖ್ಯಾತ ನಟಿ ಪ್ರೇಮಾ (Prema) ಅವರ ವೈಯಕ್ತಿಕ ಜೀವನದ ಬಗ್ಗೆ ಇತ್ತೀಚೆಗೆ ಒಂದು ಸುದ್ದಿ ಹರಿದಾಡಿತ್ತು. ಕನ್ನಡದ ಈ ಜನಪ್ರಿಯ ಕಲಾವಿದೆ ಎರಡನೇ ಮದುವೆ ಆಗುವ ಬಗ್ಗೆ ಆಲೋಚನೆ ಮಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಸೋಶಿಯಲ್​ ಮೀಡಿಯಾದಲ್ಲೂ ಈ ವಿಚಾರ ಹೈಪ್​ ಪಡೆದುಕೊಂಡಿತ್ತು. ನಿಜಕ್ಕೂ ಪ್ರೇಮಾ ಎರಡನೇ ಮದುವೆ (Prema 2nd Marriage) ಕುರಿತು ನಿರ್ಧಾರ ತೆಗೆದುಕೊಂಡಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಅದಕ್ಕೆಲ್ಲ ಈಗ ಸ್ವತಃ ಪ್ರೇಮಾ ಅವರೇ ಉತ್ತರ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. ಕೊರಗಜ್ಜನ (Koragajja) ದೇವಸ್ಥಾನದಲ್ಲಿ ತಾವು 2ನೇ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಪ್ರೇಮಾ ಹೇಳಿದ್ದಾರೆ.

ಬಹುದಿನಗಳ ಬಳಿಕ ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪ್ರೇಮಾ:

ಕೆಲವೇ ದಿನಗಳ ಹಿಂದೆ ಪ್ರೇಮಾ ಅವರು ಕೊರಗಜ್ಜನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಆ ಬಳಿಕ ಅವರ 2ನೇ ಮದುವೆ ಬಗ್ಗೆ ಗಾಸಿಪ್​ ಹರಡಿತು. ಇದು ಪ್ರೇಮಾ ಅವರಿಗೆ ಬೇಸರ ತರಿಸಿದೆ. ‘ದೇವಸ್ಥಾನಕ್ಕೆ ಹೋಗುವುದೂ ತಪ್ಪು ಅಂದ್ರೆ ಏನು ಮಾಡೋದು? ತುಂಬಾ ದಿನ ಆಗಿತ್ತು ಅಂತ ಕೊರಗಜ್ಜನ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ನಾನು ನನ್ನ ಮದುವೆ ಬಗ್ಗೆ ಪ್ರಸ್ತಾಪವನ್ನು ಮಾಡಿಲ್ಲ’ ಎಂದು ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ‘ಓಂ ಸಿನಿಮಾ ಟೈಮ್​ನಲ್ಲಿ ನನಗೆ ಬೈಯ್ಯುತ್ತಿದ್ರು’; ಆ ದಿನಗಳನ್ನು ಮೆಲುಕು ಹಾಕಿದ ನಟಿ ಪ್ರೇಮಾ

ಇದನ್ನೂ ಓದಿ
‘ನಾನು ದುಡ್ಡಿಗೋಸ್ಕರ ಸಿನಿಮಾ‌ ಮಾಡುವುದಿಲ್ಲ’; ವೃತ್ತಿ ಬದುಕಿನ ಕುರಿತು ಕುತೂಹಲಕಾರಿ ವಿಚಾರ ಹೇಳಿಕೊಂಡ‌ ಪ್ರೇಮಾ
ನಟಿ ಪ್ರೇಮಾ ಲಾಯರ್​ ಪಾತ್ರ ಪ್ರೇಮಾ ಒಪ್ಕೊಂಡಿದ್ಯಾಕೆ? ಇಲ್ಲಿದೆ ಅವರ ಉತ್ತರ
‘ಓಂ ಸಿನಿಮಾ ಟೈಮ್​ನಲ್ಲಿ ನನಗೆ ಬೈಯ್ಯುತ್ತಿದ್ರು’; ಆ ದಿನಗಳನ್ನು ಮೆಲುಕು ಹಾಕಿದ ನಟಿ ಪ್ರೇಮಾ
ಪ್ರೇಮಾ ಎರಡನೇ ಮದುವೆ ವದಂತಿಗೆ ಬ್ರೇಕ್​; ಸ್ಪಷ್ಟನೆ ನೀಡಿದ ನಟಿ

2ನೇ ಮದುವೆ ಗಾಸಿಪ್​ ಬಗ್ಗೆ ಪ್ರೇಮಾ ಅಸಮಾಧಾನ:

ನಟಿಯರ ಮದುವೆ ಬಗ್ಗೆ ಗಾಸಿಪ್​ಪ್ರಿಯರಿಗೆ ಎಲ್ಲಿಲ್ಲದ ಆಸಕ್ತಿ. ಅದೇ ಕಾರಣಕ್ಕೆ ಆಗಾಗ ಹೀರೋಯಿನ್​ಗಳ ವಿವಾಹದ ಬಗ್ಗೆ ಅಂತೆ-ಕಂತೆಗಳನ್ನು ಹಬ್ಬಿಸಲಾಗುತ್ತದೆ. ಆದರೆ, ಇದರಿಂದ ನಟಿಯರಿಗೆ ಬೇಸರ ಆಗುವುದಂತೂ ಗ್ಯಾರಂಟಿ. ತಮ್ಮ ಮದುವೆ ಕುರಿತು ಗಾಳಿಸುದ್ದಿ ಹರಡಿಸಿದವರ ಬಗ್ಗೆ ಪ್ರೇಮಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ನಾನು ದುಡ್ಡಿಗೋಸ್ಕರ ಸಿನಿಮಾ‌ ಮಾಡುವುದಿಲ್ಲ’; ವೃತ್ತಿ ಬದುಕಿನ ಕುರಿತು ಕುತೂಹಲಕಾರಿ ವಿಚಾರ ಹೇಳಿಕೊಂಡ‌ ಪ್ರೇಮಾ

‘ನಾನು ಮದುವೆ ಆದರೆ ಗಮನಕ್ಕೆ ತರುತ್ತೇನೆ’:

ಪ್ರೇಮಾ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಅವರನ್ನು ಇಷ್ಟಪಡುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ತಮ್ಮ ನೆಚ್ಚಿನ ನಟಿ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಎಂಬುದು ಫ್ಯಾನ್ಸ್​ ಬಯಕೆ. ಪ್ರೇಮಾ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ‘ನಾನು ಸಾಧಿಸಬೇಕಾಗಿದ್ದು ಇನ್ನೂ ಸಾಕಷ್ಟು ಇದೆ. ಒಂದು ವೇಳೆ ಮದುವೆ ಆದರೆ ನನ್ನ ಕುಟುಂಬ ಮತ್ತು ಅಭಿಮಾನಿಗಳ ಗಮನಕ್ಕೆ ತರುತ್ತೇನೆ’ ಎಂದು ಅವರು ಹೇಳಿದ್ದಾರೆ.

ಒಂದಷ್ಟು ವರ್ಷಗಳ ಕಾಲ ಪ್ರೇಮಾ ಅವರು ನಟನೆಯಿಂದ ದೂರು ಉಳಿದುಕೊಂಡಿದ್ದರು. ಈಗ ಮತ್ತೆ ಅವರು ಚಂದನವನದಲ್ಲಿ ಸಕ್ರಿಯರಾಗಿದ್ದಾರೆ. ಪ್ರೇಮಾ ನಟಿಸಿದ ‘ವೆಡ್ಡಿಂಗ್​ ಗಿಫ್ಟ್​’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಯಿತು. ಹೊಸ ಚಿತ್ರಗಳ ಬಗ್ಗೆ ಅಪ್​ಡೇಟ್​ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:17 pm, Tue, 24 January 23