ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನ ಕೋಣೆಯಲ್ಲಿ ಸತತ 144 ದಿನ ಕಳೆದ ನಟಿ ರಾಗಿಣಿ ದ್ವಿವೇದಿ ನಿನ್ನೆಯಷ್ಟೇ ಜಾಮೀನಿನ ಮೇಲೆ ಹೊರಬಂದರು. ಕಾರಾಗೃಹವಾಸದಲ್ಲಿ ತಾವು ಅನುಭವಿಸಿದ ನೋವು, ಯಾತನೆಯ ಬಗ್ಗೆ ಮತ್ತೊಂದು ದಿನ ಮಾತನಾಡುತ್ತೇನೆ ಎಂದು ಹೇಳಿ ಹೊರಟು ಹೋಗಿದ್ದರು.
ಆದರೆ ಇದೀಗ, ನಾಲ್ಕು ಗೋಡೆಯ ಮಧ್ಯೆ 144ದಿನಗಳನ್ನು ಕಳೆದ ನಟಿ ತಮ್ಮ ಬಾಳಿನ ಹಾದಿಯಲ್ಲಿ ಯಾವುದಾದರು ಪರಿವರ್ತನೆ ಕಾಣಲು ಮುಂದಾಗಿದ್ದಾರಾ ಎಂಬ ಮಾತು ಕೇಳಿಬಂದಿದೆ. ಜೊತೆಗೆ, ರಾಗಿಣಿ ತನ್ನೊಳಗಿನ ಶಕ್ತಿಯನ್ನು ಏನಾದರು ಅರಿತರಾ ಎಂಬ ಮಾತು ಸಹ ಕೇಳಿಬಂದಿದೆ.
ಇವೆಲ್ಲಾ ಮಾತುಗಳಿಗೆ ಪುಷ್ಟಿ ನೀಡುವಂತಿದೆ ನಟಿಯ WhatsApp ಡಿ.ಪಿ ಪೋಸ್ಟ್. ಹೌದು, ಹೆಣ್ಣಿನ ಶಕ್ತಿಯ ಬಗ್ಗೆ ಉಲ್ಲೇಖಿಸುವ ಪೋಸ್ಟ್ ಒಂದನ್ನು ನಟಿ ತಮ್ಮ WhatsApp ಡಿ.ಪಿ ಪೋಸ್ಟ್‌ಗೆ ಹಾಕಿಕೊಂಡಿದ್ದಾರೆ.
ತನ್ನೊಳಗಿನ ಧೈರ್ಯವನ್ನು ಎಚ್ಚರಗೊಳಿಸುವ ಪ್ರತಿಯೊಬ್ಬ ಹೆಣ್ಣು ದುರ್ಗಾ ಮಾತೆಗೆ ಸಮ. ತನ್ನೊಳಗಿನ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣು ಕಾಳಿ ಮಾತೆಗೆ ಸಮ. ತನ್ನೊಳಗಿನ ಭಕ್ತಿಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣೂ ಪಾರ್ವತಿಗೆ ಸಮ. ಪ್ರತಿ ಹೆಣ್ಣಲೂ ಆ ಶಕ್ತಿ ದೇವತೆ ಇದ್ದಾಳೆ ಎಂಬ ಪೋಸ್ಟ್ನ ರಾಗಿಣಿ ತಮ್ಮ WhatsApp ಡಿ.ಪಿ ಪೋಸ್ಟ್‌ಗೆ ಹಾಕಿಕೊಂಡಿದ್ದಾರೆ. ಈ ಮೂಲಕ, ಜೈಲಿನಲ್ಲಿ ತನ್ನೊಳಗಿನ ಶಕ್ತಿಯನ್ನು ನಟಿ ಅರಿತಿರಬೇಕು ಎಂಬ ಮಾತು ಕೇಳಿಬಂದಿದೆ.
ಮಾತಾಡಲು ಇನ್ನೂ ಹಲವಾರು ವಿಷಯಗಳಿವೆ; ಸದ್ಯಕ್ಕೆ ಸತ್ಯಮೇವ ಜಯತೆ ಎಂದು ಹೇಳಲು ಬಯಸ್ತೇನೆ -ರಾಗಿಣಿ ದ್ವಿವೇದಿ