ನಟಿ ರಂಭಾ (Rambha) ಅವರು 90ರ ದಶಕದಲ್ಲಿ ಬೇಡಿಕೆಯ ನಟಿ ಎನಿಸಿಕೊಂಡಿದ್ದರು. ಅವರು ಕನ್ನಡ, ತೆಲುಗು ಮೊದಲಾದ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವಾಗಲೇ ಅವರು ನಟನೆ ತೊರೆಯಲು ನಿರ್ಧರಿಸಿದರು. ಅವರಿಗೆ ಇಂದು (ಜೂನ್ 5) ಜನ್ಮದಿನ. ಅವರಿಗೆ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ. ರಂಭಾ ಅವರಿಗೆ ಈಗ 48 ವರ್ಷ. ಅವರು ಚಿತ್ರರಂಗದಿಂದ ದೂರ ಸರಿದಿದ್ದು ಏಕೆ? ಅವರು ಕನ್ನಡದಲ್ಲಿ ಯಾವೆಲ್ಲ ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಕೆನಡಾ ಮೂಲದ ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ಅವರನ್ನು ರಂಭಾ ಮದುವೆ ಆದರು. ಇವರ ಮದುವೆ ನಡೆದಿದ್ದು 2010ರ ಏಪ್ರಿಲ್ 8ರಂದು. ತಿರುಮಲದಲ್ಲಿ ಇವರ ವಿವಾಹ ನೆರವೇರಿತ್ತು. ಈಗ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗ ಇದ್ದಾನೆ. ರಂಭಾ ಅವರು ವಿವಾಹ ಆಗಿದ್ದು ಚಿತ್ರರಂಗ ತೊರೆಯಲು ಮುಖ್ಯ ಕಾರಣ ಎನ್ನಲಾಗಿದೆ.
ರಂಭಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 1992ರಲ್ಲಿ. ಅವರು ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದರು. 1993ರಲ್ಲಿ ರಿಲೀಸ್ ಆದ ‘ಸರ್ವರ್ ಸೋಮಣ್ಣ’ ಚಿತ್ರದಲ್ಲಿ ಅಭಿನಯಿಸಿದರು. ‘ಓ ಪ್ರೇಮವೇ’, ‘ಸಾಹುಕಾರ’, ‘ಗಂಡು ಗಲಿ ಕುಮಾರ ರಾಮ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದರು. 2010ರಲ್ಲಿ ಮದುವೆ ಆದ ಅವರು 2011ರಲ್ಲಿ ಚಿತ್ರರಂಗ ತೊರೆದರು. ಮಲಯಾಳಂನ ‘ಫಿಲ್ಮ್ಸ್ಟಾರ್’ ಚಿತ್ರದಲ್ಲಿ ಅವರು ಕೊನೆಯ ಬಾರಿ ಕಾಣಿಸಿಕೊಂಡರು. ಆ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ಕಾಣಿಸಿಲ್ಲ. ಸದ್ಯ ರಂಭಾ ಅವರು ಕುಟುಂಬದ ಜೊತೆ ಟೊರೆಂಟೋದಲ್ಲಿ ವಾಸವಾಗಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಈ ಮೊದಲು ರಂಭಾ ಕುಟುಂಬದ ಬಗ್ಗೆ ಸಾಕಷ್ಟು ವದಂತಿ ಹಬ್ಬಿದ್ದವು. ಪತಿಯಿಂದ ಅವರು ಬೇರೆ ಆಗುತ್ತಾರೆ, ಆಗಲೇ ಇಂದ್ರಕುಮಾರ್ಗೆ ಮದುವೆ ಆಗಿದೆ ಎಂದೆಲ್ಲ ಹೇಳಲಾಗಿತ್ತು. ಆದರೆ, ಇದನ್ನು ಅವರು ತಳ್ಳಿ ಹಾಕಿದ್ದಾರೆ. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಟೊರೊಂಟೊದಲ್ಲಿ ಬಹುಭಾಷಾ ನಟಿ ರಂಭಾ ಓಡಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅವರ ಮಗಳಿಗೆ ಗಂಭೀರ ಗಾಯ
ರಂಭಾ ಅವರು ಜನಿಸಿದ್ದು ಜೂನ್ 5ರ ವಿಜಯವಾಡದಲ್ಲಿ. ಅವರ ಮೂಲ ಹೆಸರು ವಿಜಯಲಕ್ಷ್ಮಿ. ಶಾಲಾ ದಿನಗಳಲ್ಲೇ ಅವರು ನಟನೆ ಶುರು ಮಾಡಿದರು. ಅವರು ನಾಟಕಗಳಲ್ಲಿ ಭಾಗವಹಿಸಿದ್ದರು. ವಿನೀತ್ ಜೊತೆ ಅವರು ಮಲಯಾಳಂ ಸಿನಿಮಾ ‘ಸರ್ಗಂ’ನಲ್ಲಿ ನಟಿಸಿದರು. ಇದರಿಂದ ಅವರು ಸಿನಿಮಾ ಬದುಕು ಆರಂಭಿಸಿದರು. ರಂಭಾ ಅವರು ಜೀ ತೆಲುಗದಲ್ಲಿ ಪ್ರಸಾರ ಆದ ಎಬಿಸಿಡಿ ಡ್ಯಾನ್ಸ್ ಶೋಗೆ ಜಡ್ಜ್ ಆಗಿದ್ದರು. ಇದಕ್ಕಾಗಿ ಅವರು ಇಂಡಿಯಾಗೆ ಆಗಮಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:51 am, Wed, 5 June 24