ರಶ್ಮಿಕಾ ಮಂದಣ್ಣ ಜತೆ ಬಾಲಿವುಡ್​ಗೆ ಹೊರಟ ಮತ್ತೋರ್ವ ದಕ್ಷಿಣ ಭಾರತದ ಬೆಡಗಿ

ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಸಾಯಿ ಪಲ್ಲವಿ ಸಾಕಷ್ಟು ಚ್ಯೂಸಿ. ಅವರು ಸಿನಿಮಾ ಆಯ್ಕೆ ಮಾಡಿಕೊಳ್ಳುವುದಕ್ಕೂ ಮೊದಲು ಪಾತ್ರ, ಕಥೆ ಎಲ್ಲದಕ್ಕೂ ಪ್ರಾಮುಖ್ಯತೆ ಕೊಡುತ್ತಾರೆ.

ರಶ್ಮಿಕಾ ಮಂದಣ್ಣ ಜತೆ ಬಾಲಿವುಡ್​ಗೆ ಹೊರಟ ಮತ್ತೋರ್ವ ದಕ್ಷಿಣ ಭಾರತದ ಬೆಡಗಿ
ರಶ್ಮಿಕಾ- ಸಾಯಿ ಪಲ್ಲವಿ
Updated By: ಮದನ್​ ಕುಮಾರ್​

Updated on: Jun 17, 2021 | 3:21 PM

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ನಂತರ ಬಾಲಿವುಡ್​ಗೆ ಕಾಲಿಟ್ಟು ಯಶಸ್ಸು ಕಂಡ ಸಾಕಷ್ಟು ನಟಿಯರಿದ್ದಾರೆ. ಪೂಜಾ ಹೆಗ್ಡೆ ಮಂಗಳೂರು ಮೂಲದವರು. ಅವರು ಬಾಲಿವುಡ್​ನಲ್ಲಿ ನೆಲೆಕಂಡುಕೊಂಡಿದ್ದಾರೆ. ಹಿಂದಿಯಲ್ಲಿ ಚಿತ್ರರಂಗದಲ್ಲಿ ಅವರು ಒಳ್ಳೆಯ ಬೇಡಿಕೆ ಇಟ್ಟುಕೊಂಡಿದ್ದಾರೆ. ಇಲಿಯಾನಾ ಕೂಡ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ದಕ್ಷಿಣದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿರುವ ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲಿ ಖಾತೆ ತೆರೆದಿದ್ದಾರೆ. ಈಗ ರಶ್ಮಿಕಾ ಜತೆ ಮತ್ತೊರ್ವ ದಕ್ಷಿಣದ ಬ್ಯೂಟಿ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಅವರು ಬೇರಾರೂ ಅಲ್ಲ ಸಾಯಿ ಪಲ್ಲವಿ.

ಸಾಯಿ ಪಲ್ಲವಿ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಸಾಕಷ್ಟು ಚ್ಯೂಸಿ. ಅವರು ಸಿನಿಮಾ ಆಯ್ಕೆ ಮಾಡಿಕೊಳ್ಳುವುದಕ್ಕೂ ಮೊದಲು ಪಾತ್ರ, ಕಥೆ ಎಲ್ಲದಕ್ಕೂ ಪ್ರಾಮುಖ್ಯತೆ ಕೊಡುತ್ತಾರೆ. ಈಗ ಅವರು ಹಿಂದಿಯಿಂದ ಬಂದ ಆಫರ್ ಒಂದನ್ನು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಸದ್ಯ, ಈ ವಿಚಾರ ಟಾಲಿವುಡ್​ ಅಂಗಳದಲ್ಲಿ ಸಾಕಷ್ಟು ಸದ್ದು ಮಾಡಿದೆ.

ಸಾಯಿ ಪಲ್ಲವಿ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದವರು. ಅವರು ಬಾಲಿವುಡ್​ಗೆ ತೆರಳೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು. ಈಗ ವಿಚಾರ ಬಹುತೇಕ ಖಚಿತವಾಗಿದ್ದು, ಶೀಘ್ರದಲ್ಲೇ ಆ ಬಗ್ಗೆ ಘೋಷಣೆ ಆಗುವ ನಿರೀಕ್ಷೆ ಇದೆ. ಈಗಾಗಲೇ ರಶ್ಮಿಕಾ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದ್ದಾರೆ. ಅದೇ ರೀತಿಯಲ್ಲಿ ಸಾಯಿ ಪಲ್ಲವಿ ಕೂಡ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿರುವುದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.

ನಾಗ ಚೈತನ್ಯ ನಟನೆಯ ‘ಲವ್​ ಸ್ಟೋರಿ’ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇದಲ್ಲದೆ, ರಾನಾ ದಗ್ಗುಬಾಟಿ ನಟನೆಯ ವಿರಾಟ ಪರ್ವಮ್​ ಮತ್ತು ನಾನಿ ಅಭಿನಯದ ಸಿಂಘ ರಾಯ್​ ಸಿನಿಮಾ ಕೆಲಸಗಳಲ್ಲಿ ಸಾಯಿ ಪಲ್ಲವಿ ಬ್ಯುಸಿ ಇದ್ದಾರೆ. ಕೊರೊನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್​ಡೌನ್​ನಿಂದ ಸಿನಿಮಾ ಕೆಲಸಗಳು ನಿಂತಿದ್ದವು. ಈಗ ಮತ್ತೆ ಸಿನಿಮಾ ಕೆಲಸ ಆರಂಭವಾಗಿದೆ.

ಇದನ್ನೂ ಓದಿ: 

 ಲಾಕ್​ಡೌನ್​ ಮುಗಿದ ಬೆನ್ನಲ್ಲೇ ‘ಗುಡ್ ಬೈ’ ಹೇಳೋಕೆ ಮುಂಬೈಗೆ ಹಾರಿದ ರಶ್ಮಿಕಾ ಮಂದಣ್ಣ