ಲಾಕ್ಡೌನ್ ಮುಗಿದ ಬೆನ್ನಲ್ಲೇ ‘ಗುಡ್ ಬೈ’ ಹೇಳೋಕೆ ಮುಂಬೈಗೆ ಹಾರಿದ ರಶ್ಮಿಕಾ ಮಂದಣ್ಣ
ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ, ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಅಷ್ಟೇ ಅಲ್ಲ, ಶೂಟಿಂಗ್ಗೂ ಅವಕಾಶ ನೀಡಲಾಗಿದೆ. ಹೀಗಾಗಿ, ಚಿತ್ರತಂಡಗಳು ಶೂಟಿಂಗ್ನಲ್ಲಿ ಬ್ಯುಸಿ ಆಗಿವೆ.
ನಟಿ ರಶ್ಮಿಕಾ ಮಂದಣ್ಣ ಸಾಕಷ್ಟು ಬ್ಯುಸಿ ಶೆಡ್ಯೂಲ್ ಹೊಂದಿದ್ದಾರೆ. ಬಾಲಿವುಡ್ ಹಾಗೂ ಟಾಲಿವುಡ್ ಎರಡರಲ್ಲೂ ಕೈ ತುಂಬಾ ಆಫರ್ಗಳನ್ನು ಹೊಂದಿರುವ ಅವರು, ಸದಾ ಶೂಟ್ನಲ್ಲಿ ಬ್ಯುಸಿ ಇರುತ್ತಿದ್ದರು. ಕೊವಿಡ್ ನಿಯಂತ್ರಣಕ್ಕೆ ಹೇರಿದ್ದ ಲಾಕ್ಡೌನ್ನಿಂದ ರಶ್ಮಿಕಾ ಮನೆಯಲ್ಲೇ ಇದ್ದರು. ಈಗ ಅವರು ಮುಂಬೈಗೆ ಹಾರಾಟ ನಡೆಸಿದ್ದಾರೆ. ಇದಕ್ಕೆ ಕಾರಣ ‘ಗುಡ್ ಬೈ’ ಚಿತ್ರದ ಶೂಟಿಂಗ್.
ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ, ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಅಷ್ಟೇ ಅಲ್ಲ, ಶೂಟಿಂಗ್ಗೂ ಅವಕಾಶ ನೀಡಲಾಗಿದೆ. ಹೀಗಾಗಿ, ಚಿತ್ರತಂಡಗಳು ಶೂಟಿಂಗ್ನಲ್ಲಿ ಬ್ಯುಸಿ ಆಗಿವೆ. ಅದೇ ರೀತಿ ‘ಗುಡ್ ಬೈ’ ಚಿತ್ರೀಕರಣ ಕೂಡ ಆರಂಭವಾಗಿದ್ದು, ರಶ್ಮಿಕಾ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.
ಈ ಚಿತ್ರ ಸಾಕಷ್ಟು ಮನರಂಜನೆ ನೀಡುವುದರ ಜತೆಗೆ ಭಾವನಾತ್ಮಕವಾಗಿ ಇರಲಿದೆಯಂತೆ. ಅಮಿತಾಭ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡರೆ ಅವರ ಮಗಳಾಗಿ ರಶ್ಮಿಕಾ ನಟಿಸಿಸುತ್ತಿದ್ದಾರೆ. ‘ಸೂಪರ್ 30’ ಖ್ಯಾತಿಯ ವಿಕಾಸ್ ಬಹಲ್ ಚಿತ್ರವನ್ನು ನಿರ್ದೇಶನ ಮಾಡಿದರೆ, ಏಕ್ತಾ ಕಪೂರ್ ಬಂಡವಾಳ ಹೂಡುತ್ತಿದ್ದಾರೆ.
ಕನ್ನಡ ಚಿತ್ರರಂಗದಿಂದ ಬದುಕು ಆರಂಭಿಸಿದ ರಶ್ಮಿಕಾ ಮಂದಣ್ಣ ನಂತರ ಕಾಲಿಟ್ಟಿದ್ದು ಟಾಲಿವುಡ್ಗೆ. ರಶ್ಮಿಕಾಗೆ ಅಲ್ಲಿ ಅಪಾರ ಖ್ಯಾತಿ ಸಿಕ್ಕಿತ್ತು. ಕಾಲಿವುಡ್ಗೂ ಎಂಟ್ರಿಕೊಟ್ಟಿದ್ದ ರಶ್ಮಿಕಾ ನಂತರ ಬಾಲಿವುಡ್ ಆಫರ್ ಗಿಟ್ಟಿಸಿಕೊಂಡರು. ‘ಮಿಷನ್ ಮಜ್ನು’ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಗೆ ಜತೆಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ನಂತರದಲ್ಲಿ ಅವರಿಗೆ ಸಿಕ್ಕಿದ್ದು ‘ಗುಡ್ ಬೈ’ ಚಿತ್ರ.
ಇನ್ನು, ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ರಕ್ತಚಂದನ ಕಳ್ಳಸಾಗಾಣಿಕೆಯ ಕಥೆ ಈ ಸಿನಿಮಾದಲ್ಲಿ ಇರಲಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:
ದಿ ಫ್ಯಾಮಿಲಿ ಮ್ಯಾನ್ 2ನಲ್ಲಿ ಸಮಂತಾ ಆ್ಯಕ್ಷನ್ ನೋಡಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್ಗಳ ಸುರಿಮಳೆ; ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆಗೆ ಭೇಷ್ ಎನ್ನಲೇಬೇಕು