Tamilrockersನಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಲೀಕ್
ಭರ್ಜರಿ ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆ ಕೈ ಜೋಡಿಸಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಇಂದು (ನವೆಂಬರ್ 5) ತೆರೆಗೆ ಬಂದಿದೆ. ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುದಿನಗಳ ನಂತರದಲ್ಲಿ ಬಾಲಿವುಡ್ನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ದುರಾದೃಷ್ಟ ಎಂದರೆ ಸಿನಿಮಾ ರಿಲೀಸ್ ಆದ ಮೊದಲನೇ ದಿನವೇ ಆನ್ಲೈನ್ನಲ್ಲಿ ಲೀಕ್ ಆಗಿದೆ.
ಭರ್ಜರಿ ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆ ಕೈ ಜೋಡಿಸಿದ್ದಾರೆ. ಸಾಹಸಮಯ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅಕ್ಷಯ್ಕುಮಾರ್ಗೆ ರೋಹಿತ್ ಶೆಟ್ಟಿ ಯಾವ ರೀತಿ ನಿರ್ದೇಶನ ಮಾಡಿರಬಹುದು ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ. ‘ಸೂರ್ಯವಂಶಿ’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಆದರೆ, ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿದ್ದು ಚಿತ್ರದ ಕಲೆಕ್ಷನ್ಗೆ ಹೊಡೆತ ಕೊಡುವ ಸಾಧ್ಯತೆ ಇದೆ.
ಅಕ್ಷಯ್ ಕುಮಾರ್ ಸೂರ್ಯವಂಶಿ ಸಿನಿಮಾ ಪೈರಸಿಯ ಹೊಡೆತಕ್ಕೆ ಸಿಲುಕಿದೆ. ಟೆಲಿಗ್ರಾಮ್ ಹಾಗೂ ತಮಿಳ್ರಾಕರ್ಸ್ ಸೈಟ್ನಲ್ಲಿ ಈ ಸಿನಿಮಾದ ಎಚ್ಡಿ ಪ್ರಿಂಟ್ ಹರಿದಾಡುತ್ತಿದೆ. ನವೆಂಬರ್ 4ರಂದು ರಿಲೀಸ್ ಆದ ರಜನಿಕಾಂತ್ ನಟನೆಯ ಅಣ್ಣಾಥೆ ಹಾಗೂ ಒಟಿಟಿಯಲ್ಲಿ ರಿಲೀಸ್ ಆದ ಸೂರ್ಯ ಅಭಿನಿಯದ ‘ಜೈ ಭೀಮ್’ ಕೂಡ ಪೈರಸಿ ಹೊಡತಕ್ಕೆ ಸಿಲುಕಿದೆ.
‘ಸೂರ್ಯವಂಶಿ’ ಚಿತ್ರಕ್ಕೆ ಅಕ್ಷಯ್ಕುಮಾರ್ ನಾಯಕ. ಅವರ ಜೊತೆಗೆ ರಣವೀರ್ ಸಿಂಗ್ ಮತ್ತು ಅಜಯ್ ದೇವಗನ್ ಕೂಡ ತೆರೆಹಂಚಿಕೊಂಡಿದ್ದಾರೆ. ಮುಖ್ಯವಾದ ಅತಿಥಿ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಇದನ್ನೂ ಓದಿ: Sooryavanshi: ಅಕ್ಷಯ್ ಕುಮಾರ್ ಫ್ಯಾನ್ಸ್ ‘ಸೂರ್ಯವಂಶಿ’ ಸಿನಿಮಾ ಯಾಕೆ ನೋಡಬೇಕು? ಇಲ್ಲಿವೆ 5 ಕಾರಣಗಳು