ಬಿಗ್ ಬಾಸ್ಗಾಗಿ ಕೆಲ ವರ್ಷಗಳ ಹಿಂದೆ ಹೊಸ ಮನೆ ನಿರ್ಮಾಣ ಆಗಿದೆ. ಕಳೆದ ಸೀಸನ್ನಿಂದ ಹೊಸ ಮನೆಯಲ್ಲೇ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದೆ. ಹಳೆಯ ಮನೆ ಈಗಲೂ ಹಾಗೆಯೇ ಇದ್ದು, ಅದನ್ನು ಯಾರೂ ಬಳಸುತ್ತಿಲ್ಲ. ಈ ಕಾರಣಕ್ಕೆ ಭೂತ ಬಂಗಲೆ ರೀತಿ ಆಗಿದೆ. ಹಾಗಾದರೆ ಈ ಮನೆಯ ವಸ್ತುಗಳು ಏನಾದವು? ಈ ಬಗ್ಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಕುಲ್ ಬಾಲಾಜಿ ಇದನ್ನು ತೆಗೆದುಕೊಂಡು ಹೊಗಿ ರೆಸಾರ್ಟ್ ಮಾಡಿದ್ದಾಗಿ ಸುದೀಪ್ ಹೇಳಿದ್ದಾರೆ.
ಅಕುಲ್ ಬಾಲಾಜಿ ಅವರು ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಬಿಗ್ ಬಾಸ್ನಲ್ಲಿ ಸ್ಪರ್ಧಿಸಿದ್ದರು. ಈ ಕಾರಣಕ್ಕೆ ಕಿಚ್ಚ ಸುದೀಪ್ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಅಕುಲ್ ಬಾಲಾಜಿ ಬುದ್ಧಿವಂತಿಕೆಗೆ ಸುದೀಪ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಸುದೀಪ್ ಅವರು ‘ಆ್ಯಂಕರ್ ಅನುಶ್ರೀ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಅವನ ದುಡ್ಡು ಅಂತ ಬಂದಾಗ ಅಕುಲ್ ಬಜೆಟ್ನಲ್ಲಿ ಜೀವನ ನಡೆಸುತ್ತಾನೆ. ಕಿಚ್ಚ ಬ್ರೋ ಇದನ್ನು ನೋಡಿದ್ರಾ, ಅದನ್ನು ನೋಡಿದ್ರಾ ಎಂದು ಕೇಳ್ತಾನೆ. ಅವನು ಹೇಳೋದು ಹೇಗಿರುತ್ತದೆ ಎಂದರೆ ಅವರೇ ವಸ್ತುವನ್ನು ಕಳುಹಿಸಿಕೊಟ್ಟು ಬಿಡ್ತಾನೇನೋ ಎಂಬ ರೀತಿ ಇರುತ್ತದೆ’ ಎಂದಿದ್ದಾರೆ ಸುದೀಪ್.
‘ಒಂದು ರೆಸಾರ್ಟ್ ಮಾಡಿದೀನಿ ಎಂದು ಅಕುಲ್ ಫೋಟೋ ತೋರಿಸಿದ. ಅದನ್ನು ನೋಡಿದಾಗ ಬಿಗ್ ಬಾಸ್ ಪ್ರಾಪರ್ಟಿಗಳು ಕಂಡವು. ನಾನು ಆ ಬಗ್ಗೆ ಕೇಳಿದೆ’ ಎಂದಿದ್ದಾರೆ ಸುದೀಪ್. ‘ಬಿಗ್ ಬಾಸ್ ಮನೆಗೆ ಹೋದೆ. ಹಳೆಯ ಪ್ರಾಪರ್ಟಿಗಳನ್ನು ಬಳಸುವುದಿಲ್ಲ ಎಂದು ಗೊತ್ತಾದಾಗ ಅಲ್ಲಿ ಹೋಗಿ ಕಡಿಮೆ ಮೊತ್ತಕ್ಕೆ ತೆಗೆದುಕೊಂಡು ಬಂದೆ’ ಎಂದು ಅಕುಲ್ ಉತ್ತರಿಸಿದರಂತೆ.
‘ಇಡೀ ಪ್ರಾಪರ್ಟಿನ ತೆಗೆದುಕೊಂಡು ಹೋಗಿ ರೆಸಾರ್ಟ್ಗೆ ಹಾಕಿದ್ದಾನೆ. ನಮ್ಮ ಬುಡದಿಂದ ತೆಗೆದುಕೊಂಡು ಹೋಗಿ ರೆಸಾರ್ಟ್ನೇ ಮಾಡಿದ್ದೀಯಲ್ಲೋ, ನಮಗೆ ಈ ರೀತಿಯ ಐಡಿಯಾಗಳು ಬರಲ್ವಲ್ಲ ಎಂದು ಕೇಳಿದೆ. ಅವನು ಸೂಪರ್ ಸ್ಮಾರ್ಟ್. ನಂದೇ ಐಟಂ ನಂಗೆ ಮಾರಿ ಹೊಗಿಲ್ಲ ಎಂಬುದು ಖುಷಿಯ ವಿಚಾರ’ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ‘ಮ್ಯಾಕ್ಸ್’ ದರ್ಶನ; ಹೇಗಿದೆ ಸುದೀಪ್ ಸಿನಿಮಾದ ಫಸ್ಟ್ ಹಾಫ್?
ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಖುಷಿಯಲ್ಲಿ ಇದ್ದಾರೆ. ಈ ಚಿತ್ರಕ್ಕೆ ಫ್ಯಾನ್ಸ್ ಕಡೆಯಿಂದ ಹಾಗೂ ವಿಮರ್ಶಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದ ಪ್ರಚಾರಕ್ಕಾಗಿ ಸುದೀಪ್ ಅವರು ಹಲವು ಕಡೆಗಳಲ್ಲಿ ಸಂದರ್ಶನ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.