ಬೆಳ್ಳಂಬೆಳಗ್ಗೆ ‘ಮ್ಯಾಕ್ಸ್’ ದರ್ಶನ; ಹೇಗಿದೆ ಸುದೀಪ್ ಸಿನಿಮಾದ ಫಸ್ಟ್ ಹಾಫ್?

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಇಂದು (ಡಿಸೆಂಬರ್​ 25) ಬಿಡುಗಡೆ ಆಗಿದೆ. ಕ್ರಿಸ್​ಮಸ್​ ಪ್ರಯುಕ್ತ ತೆರೆಕಂಡ ಈ ಸಿನಿಮಾವನ್ನು ಮುಂಜಾನೆಯೇ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ತುಂಬಾ ಮಾಸ್​ ಆಗಿ ಮೂಡಿಬಂದಿರುವ ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಅವರ ಆ್ಯಕ್ಷನ್​ ಅಬ್ಬರ ಕಂಡು ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ.

ಬೆಳ್ಳಂಬೆಳಗ್ಗೆ ‘ಮ್ಯಾಕ್ಸ್’ ದರ್ಶನ; ಹೇಗಿದೆ ಸುದೀಪ್ ಸಿನಿಮಾದ ಫಸ್ಟ್ ಹಾಫ್?
Kichcha Sudeep
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Dec 25, 2024 | 8:12 AM

ಬಹಳ ಅದ್ದೂರಿಯಾಗಿ ‘ಮ್ಯಾಕ್ಸ್’ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಇಂದು (ಡಿ.25) ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಹಬ್ಬ. ಟ್ರೇಲರ್ ನೋಡಿ ಥ್ರಿಲ್ ಆಗಿದ್ದ ಅಭಿಮಾನಿಗಳು ಇಂದು ಬೆಳ್ಳಂಬೆಳಗ್ಗೆಯೇ ದೊಡ್ಡ ಪರದೆಯಲ್ಲಿ ‘ಮ್ಯಾಕ್ಸ್’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸುದೀಪ್ ಜೊತೆ ಸುನಿಲ್, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುಕೃತಾ ವಾಗ್ಳೆ, ವರಲಕ್ಷ್ಮಿ ಶರತ್ ಕುಮಾರ್​, ಸಂಯುಕ್ತಾ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ ‘ಮ್ಯಾಕ್ಸ್’ ಸಿನಿಮಾಗೆ ಕಲೈಪುಲಿ ಎಸ್​. ಧಾನು ಅವರು ಬಂಡವಾಳ ಹೂಡಿದ್ದಾರೆ. ಚಿತ್ರದ ಫಸ್ಟ್​ ಹಾಫ್ ಹೇಳಿದೆ ಎಂಬುದರ ವಿಮರ್ಶೆ ಇಲ್ಲಿದೆ..

  1. ‘ಮ್ಯಾಕ್ಸ್’ ಸಿನಿಮಾ ಆರಂಭದ ದೃಶ್ಯದಲ್ಲೇ ಸುದೀಪ್ ಪಾತ್ರ ಪರಿಚಯ. ಮಾಸ್ ಡೈಲಾಗ್ ಮೂಲಕ ಎಂಟ್ರಿ. ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡಿರುವ ಕಿಚ್ಚ.
  2. ಆ್ಯಕ್ಷನ್ ಶುರುವಾಗೋದಕ್ಕೂ ಮುನ್ನವೇ ಐಟಂ ಸಾಂಗ್ ದರ್ಶನ. ‘ಸೂಪರ್ ಹಾಟ್’ ಸಾಂಗ್‌ನಲ್ಲಿ ಮಿಂಚಿದ ನಟ‌ ಸುನಿಲ್.
  3. ಸುದೀಪ್ ಎದುರು ಎಗರಾಡುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಗ್ರಂ ಮಂಜು. ಕಿಚ್ಚನ ಜೊತೆ ಉತ್ತಮ ಸ್ಕ್ರೀನ್ ಸ್ಪೇಸ್ ಪಡೆದಿರುವ ಬಿಗ್ ಬಾಸ್ ಸ್ಪರ್ಧಿ.
  4. ಕಥೆ ಆರಂಭವಾಗಿ ಅರ್ಧ ಗಂಟೆ ಕಳೆದ ಬಳಿಕ ಅಸಲಿ ಆ್ಯಕ್ಷನ್ ಶುರು. ಟೆನ್ಷನ್ ದೃಶ್ಯಗಳ ನಡುವೆಯೇ ‘ಲಯನ್ಸ್ ರೋರ್’ ಹಾಡಿನ ಮೂಲಕ ರಂಜಿಸಿದ ಸುದೀಪ್.
  5. ಕ್ರೈಮ್ ಇನ್ಸ್‌ಪೆಕ್ಟರ್ ಪಾತ್ರ ಮಾಡಿರುವ ವರಲಕ್ಷ್ಮಿ ಶರತ್‌ಕುಮಾರ್. ಪೊಲೀಸ್ ಆಗಿದ್ದರೂ ಈ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆ.
  6. ಮಿನಿಸ್ಟರ್ ಮಕ್ಕಳ ಮರ್ಡರ್ ಕಥೆಯಲ್ಲಿದೆ ಹಲವು ಟ್ವಿಸ್ಟ್‌ಗಳು. ನಿರ್ದೇಶಕ ವಿಜಯ್ ಕಾರ್ತಿಕೇಯ ಹೆಣೆದ ಕಥೆಯಲ್ಲಿ ಥ್ರಿಲ್ ನೀಡುವ ಗುಣ ಇದೆ.
  7. ಕಾಮಿಡಿ, ಲವ್ ಇತ್ಯಾದಿ ಇಲ್ಲದೇ ಸೀರಿಯಸ್ ಕಥೆ ಹೇಳುತ್ತದೆ ‘ಮ್ಯಾಕ್ಸ್’ ಸಿನಿಮಾ. ಸಂಕಷ್ಟದಲ್ಲಿ ಸಿಲುಕುವ ಪೊಲೀಸರ ಕಹಾನಿ ಈ ಸಿನಿಮಾದಲ್ಲಿದೆ.
  8. ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು, ವಿಜಯ್ ಚಂಡೂರು, ಉಗ್ರಂ ಮಂಜು ಮುಂತಾದವರು ಸುದೀಪ್‌ಗೆ ಸಾಥ್ ನೀಡಿದ್ದಾರೆ.
  9. ಮುಂದೇನಾಗಲಿದೆ ಎಂಬ ಕೌತುಕ ಮೂಡಿಸುತ್ತದೆ ಇಂಟರ್‌ವಲ್ ಸೀನ್. ಒಂದೇ ರಾತ್ರಿಯ ಕಥೆ ಆದ್ದರಿಂದ ಚಿತ್ರಕಥೆ ಚುರುಕಾಗಿದೆ.
  10. ಇನ್ನೂ ಹೆಚ್ಚಿನ ಆ್ಯಕ್ಷನ್ ಸೀನ್ಸ್ ನೋಡಲು ಸೆಕೆಂಡ್‌ಹಾಫ್‌ಗೆ ಕಾಯಬೇಕು. ಸುದೀಪ್ ಅವರ ಮಾಸ್ ಲುಕ್ ಇಷ್ಟಪಡುವವರಿಗೆ ಈ ಚಿತ್ರದಲ್ಲಿದೆ ಮನರಂಜನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 am, Wed, 25 December 24

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ