ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಹಲ್ಲೆಗೊಳಗಾದ ಈ ಗಂಗಾಧರ್​ ಯಾರು?

ಹಲ್ಲೆಗೊಳಗಾಗಿದ್ದ ಗಂಗಾಧರ್‌ ಬಗ್ಗೆ ಟಿವಿ9 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ. ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಗಂಗಾಧರ್​ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಹಲ್ಲೆಗೊಳಗಾದ ಈ ಗಂಗಾಧರ್​ ಯಾರು?
ಇಂದ್ರಜಿತ್​ ಲಂಕೇಶ್​ (ಸಂಗ್ರಹ ಚಿತ್ರ)
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 15, 2021 | 5:40 PM

ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ ಸಿಬ್ಬಂದಿ ಗಂಗಾಧರ ಎಂಬುವವರ ಮೇಲೆ ನಟ ದರ್ಶನ್​ ಅವರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಕನ್ನಡದವರೇ ಎನ್ನುವ ಗಂಭೀರ ಆರೋಪವನ್ನು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಮಾಡಿದ್ದಾರೆ. ಅಷ್ಟಕ್ಕೂ ಈ ಗಂಗಾಧರ್​ ಯಾರು? ಅವರು ಎಲ್ಲಿಯವರು ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ.

ಹಲ್ಲೆಗೊಳಗಾಗಿದ್ದ ಗಂಗಾಧರ್‌ ಬಗ್ಗೆ ಟಿವಿ9 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ. ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಗಂಗಾಧರ್​ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಹೋಟೆಲ್‌ನಲ್ಲಿ ಗ್ರಾಹಕರಿಂದ ಆರ್ಡರ್ ತೆಗೆದುಕೊಳ್ಳುತ್ತಿದ್ದರು. ಹಲ್ಲೆಗೊಳಗಾಗಿದ್ದ ಗಂಗಾಧರ್‌ ಮೂಲತಃ ಕೇರಳದವರು. 8 ವರ್ಷಗಳ ಹಿಂದೆ ಮೈಸೂರಿಗೆ ಬಂದು ನೆಲೆಸಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.

ಗೋಪಾಲ್​ ರಾಜ್​ ಹಲ್ಲೆ ಆರೋಪ ಸುಳ್ಳು?

ನಿರ್ಮಾಪಕ ಸಂದೇಶ್​ ಅವರ ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿರುವ ಸಿಬ್ಬಂದಿ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಆರೋಪ ಮಾಡಿದ್ದರು. ಇದಾದ ನಾಲ್ಕು ಗಂಟೆ ನಂತರದಲ್ಲಿ ಮತ್ತೆ ಇಂದ್ರಜಿತ್​ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದರು. ಈ ವೇಳೆ, ಹೋಟೆಲ್​ ಸಿಬ್ಬಂದಿ ಗಂಗಾಧರ ಮಾತ್ರವಲ್ಲ ಜುಲೈ 3ರಂದು ಗೋಪಾಲ್​ ರಾಜ್ ಎಂಬುವವರ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ. ಅವರು ಕೋಮಾದಲ್ಲಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಇಂದ್ರಜಿತ್​ ಮಾಡಿದ್ದರು. ಈಗ ಟಿವಿ9 ಸ್ಟುಡಿಯೋದಲ್ಲಿ ಗೋಪಾಲ್​ ರಾಜ್ ಹೇಳಿಕೆ ನೀಡಿದ್ದಾರೆ.

‘ನನ್ನ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ನನಗೂ ದರ್ಶನ್​ದೂ 30 ವರ್ಷಗಳ ಹಳೆಯ ಸ್ನೇಹವಿದೆ. ನನಗೂ, ದರ್ಶನ್​ಗೂ ಯಾವುದೇ ಗಲಾಟೆ ಆಗಿಲ್ಲ. ಕೋಮಾದಲ್ಲಿ ಇದ್ದೇನೆ ಎನ್ನುವ ಆರೋಪಗಳು ಸುಳ್ಳು. ದರ್ಶನ್ ಇಂಡಸ್ಟ್ರಿಗೆ ಬರುವ ಮೊದಲಿಂದಲೂ ನನಗೆ ಆತ್ಮೀಯ. ಜು.3ರಂದು ಮೈಸುರಿನಲ್ಲೇ ಇದ್ದೆ. ಆದರೆ, ದರ್ಶನ್ ಭೇಟಿ ಆಗಿರಲಿಲ್ಲ. ದರ್ಶನ್, ನನ್ನ ನಡುವೆ ಗಲಾಟೆ ಘಟನೆಗಳು ನಡೆದೇ ಇಲ್ಲ. ಜು.3ರಂದು ನಾನು ಸೋಷಿಯಲ್ಸ್​ ಪಬ್​ಗೆ ಹೋಗೇ ಇರಲಿಲ್ಲ’ ಎಂದಿದ್ದಾರೆ ಗೋಪಾಲ್.

ಇದನ್ನೂ ಓದಿ: ‘ದರ್ಶನ್​ ನನ್ನ ಮೇಲೆ ಹಲ್ಲೆ ಮಾಡಿಲ್ಲ, ನಾನು ಕೋಮಾದಲ್ಲೂ ಇಲ್ಲ, ಇಂದ್ರಜಿತ್​ ಲಂಕೇಶ್​ ಹೇಳಿಕೆ ಸುಳ್ಳು’

‘ತಪ್ಪು ಮಾಡಿದ ಸೆಲೆಬ್ರಿಟಿಗಳು ತಪ್ಪಿಸಿಕೊಳ್ಳಬಾರದು’; ದರ್ಶನ್​ ವಿರುದ್ಧ ಮತ್ತೆ ಹರಿಹಾಯ್ದ ಇಂದ್ರಜಿತ್​ ಲಂಕೇಶ್

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?