
ರೆಬೆಲ್ ಸ್ಟಾರ್ ಅಂಬರೀಷ್ (Ambareesh) ಅವರು ಸ್ಟಾರ್ ಹೀರೋ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇತ್ತು. ಅವರು ನಮ್ಮನ್ನು ಬಿಟ್ಟು ಹೋದರೂ ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಎಲ್ಲರೂ ಫಾಲೋ ಮಾಡುತ್ತಿದ್ದಾರೆ. ಅದರಲ್ಲೂ ಈಗಿನ ಸ್ಟಾರ್ ಹೀರೋ ಎನಿಸಿಕೊಂಡ ಯಶ್, ಸುದೀಪ್ ಹಾಗೂ ದರ್ಶನ್ಗೆ ಅಂಬರೀಷ್ ಅವರು ಗಾಡ್ ಫಾದರ್ ಆಗಿದ್ದರು. ಈಗ ಒಂದು ಅಪರೂಪದ ಫೋಟೋ ವೈರಲ್ ಆಗಿದೆ.
ಅಂಬರೀಷ್ ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಅಂಬರೀಷ್ ಅವರು ಬೈಕ್ ಏರಿ ರೈಡ್ ಮಾಡಿದರೆ, ಸುದೀಪ್ ಅವರು ಹಿಂಭಾಗದಲ್ಲಿ ಕುಳಿತ ಫೋಟೋ ಇದಾಗಿದೆ. ಇದನ್ನು ಅಭಿಮಾನಿಗಳ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹಳೆಯ ಘಟನೆ ನೆನಪು ಮಾಡಿಕೊಂಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಸುದೀಪ್ ಅವರು ಅಂಬರೀಷ್ ಮೇಲೆ ಅಪಾರ ಪ್ರಿತಿ ಹಾಗೂ ಗೌರವವನ್ನು ಹೊಂದಿದ್ದರು. ಅಂಬರೀಷ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಅಂಬರೀಷ್ ಅವರ ಯವ್ವನದ ಪಾತ್ರವನ್ನು ಸುದೀಪ್ ಅವರೇ ನಿರ್ವಹಿಸಿದ್ದರು. ಅಂಬರೀಷ್ ಎಂದರೆ ಅಷ್ಟು ಪ್ರೀತಿ ಸುದೀಪ್ಗೆ. ಈ ಪ್ರೀತಿ ಈಗಲೂ ಹಾಗೆಯೇ ಇದೆ.
ಅಂಬರೀಷ್ ಅವರು ನಿಧನ ಹೊಂದಿದಾಗ ಸುದೀಪ್ ಅವರೇ ಸ್ವತಃ ತೆರಳಿ ಅಗತ್ಯ ಕೆಲವನ್ನು ಮಾಡಿದ್ದರು. ಇಡೀ ಕುಟುಂಬಕ್ಕೆ ಅವರು ಸಾಂತ್ವನ ಹೇಳಿದ್ದರು. ನಿಧನದ ಬಳಿಕ ಮಣ್ಣು ಮಾಡುವವರೆಗೂ ಅವರು ಜೊತೆಗೆ ಇದ್ದರು. ಈಗ ಸುಮಲತಾ ಜೊತೆ ಸುದೀಪ್ ಯಾವಾಗಲೂ ಇದ್ದಾರೆ ಎನ್ನಬಹುದು.
ಇದನ್ನೂ ಓದಿ: ಅಖಿಲ್ ಅಕ್ಕಿನೇನಿ ಆರತಕ್ಷತೆಯಲ್ಲಿ ಮಿಂಚಿದ ಯಶ್-ಸುದೀಪ್; ರಾಕಿಭಾಯ್ ಹೊಸ ಲುಕ್ ರಿವೀಲ್
ಸುದೀಪ್ ಅವರ ಸಿನಿಮಾ ವಿಚಾರಕ್ಕೆ ಬರೋದಾದರೆ, ‘ಮ್ಯಾಕ್ಸ್’ ಚಿತ್ರದ ಮೂಲಕ ಅವರು ದೊಡ್ಡ ಗೆಲುವು ಕಂಡರು. ಈ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಯಶಸ್ಸು ಕಂಡಿತು. ಇದಾದ ಬಳಿಕ ಅವರು ‘ಬಿಲ್ಲ ರಂಗ ಭಾಷ’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಅನೂಪ್ ಭಂಡಾರಿ ಅವರು ಇದಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನವನ್ನು ನೋಡಲು ಕೂಡ ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.