ಕನ್ನಡದ ಈ ಸ್ಟಾರ್ ಹೀರೋಗೆ ಇತ್ತು ಯಶ್ ಗಡ್ಡದ ಮೇಲೆ ಕಣ್ಣು; ಯಾರವರು?

| Updated By: ರಾಜೇಶ್ ದುಗ್ಗುಮನೆ

Updated on: Oct 03, 2024 | 8:23 AM

ನಟ ಯಶ್​ ಅವರು ‘ಟಾಕ್ಸಿಕ್​’ ಸಿನಿಮಾದ ಕೆಲಸಗಳತ್ತ ಗಮನ ಹರಿಸಿದ್ದಾರೆ. ಶೂಟಿಂಗ್​ನಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಗಡ್ಡದ ಮೇಲೆ ಓರ್ವ ಸ್ಟಾರ್ ಹೀರೋ ಕಣ್ಣಿಟ್ಟಿದ್ದಾಗಿ ಹೇಳಿದ್ದರು.

ಕನ್ನಡದ ಈ ಸ್ಟಾರ್ ಹೀರೋಗೆ ಇತ್ತು ಯಶ್ ಗಡ್ಡದ ಮೇಲೆ ಕಣ್ಣು; ಯಾರವರು?
ಯಶ್
Follow us on

ದೊಡ್ಡ ಮಟ್ಟದ ಯಶಸ್ಸು ಕಂಡವರಲ್ಲಿ ಕನ್ನಡದ ಯಶ್ ಮುಂಚೂಣಿಯಲ್ಲಿ ಇದ್ದಾರೆ. ‘ಕೆಜಿಎಫ್ 2’ ಬಳಿಕ ಅವರ ಖ್ಯಾತಿ ಹೆಚ್ಚಿತು ಎಂದೇ ಹೇಳಬಹುದು. ಈಗ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಅವರು ಗಡ್ಡವನ್ನು ಸ್ವಲ್ಪ ಕತ್ತರಿಸಿಕೊಂಡಿದ್ದಾರೆ. ಈ ಮೊದಲು ‘ಕೆಜಿಎಫ್’ಗಾಗಿ ಅವರು ಗಡ್ಡ ಬಿಟ್ಟಾಗ ಓರ್ವ ಸ್ಟಾರ್ ಹೀರೋ ಗಡ್ಡದ ಮೇಲೆ ಕಣ್ಣು ಇಟ್ಟಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಇದನ್ನು ಯಶ್ ಈ ಮೊದಲು ಹೇಳಿಕೊಂಡಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ.

‘ನನ್ನ ಗಡ್ಡದ ಬಗ್ಗೆ ಅನೇಕರಿಗೆ ಸಮಸ್ಯೆ ಇದೆ’ ಎಂದು ಯಶ್ ಹೇಳಿದ್ದರು. ಅಂಬರೀಷ್ ಅವರು ಸಿಕ್ಕಾಗಲೆಲ್ಲ, ‘ಗಡ್ಡ ಯಾವಾಗ ತೆಗಿತೀಯಾ’ ಎಂದು ಕೇಳುತ್ತಿದ್ದರು. ‘ಯಾಕೋ ಗಡ್ಡ ಬಿಟ್ಟುಕೊಂಡು ಇರ್ತೀಯಾ ಎಂದು ಅಂಬರೀಷ್ ಕೇಳುತ್ತಿದ್ದರು’ ಎಂದಿದ್ದರು ಯಶ್. ಆ ಬಳಿಕ ಯಶ್ ಅವರು ಅಂಬರೀಷ್ ಅವರ ಬಳಿ ಹೋಗೋದನ್ನೇ ನಿಲ್ಲಿಸಿದ್ದರು. ಅವರಿಗೆ ಸಣ್ಣ ಗಡ್ಡ ಬಿಟ್ಟ ಬಳಿಕ ಯಶ್ ಅವರ ಬಳಿ ಹೋಗುತ್ತಿದ್ದರು.

ಯಶ್ ಅವರು ‘ಕೆಜಿಎಫ್’ ಚಿತ್ರಕ್ಕಾಗಿ ಉದ್ದನೆಯ ಗಡ್ಡ ಬಿಟ್ಟಿದ್ದರು. ಸಿನಿಮಾ ರಿಲೀಸ್ ಆದ ಬಳಿಕ ಯಶ್ ಅವರು ಕೂದಲಿಗೆ, ಗಡ್ಡಕ್ಕೆ ಕತ್ತರಿ ಹಾಕಿದ್ದರು. ಈ ವೇಳೆ ರಾಧಿಕಾ ಪಂಡಿತ್ ಕೂಡ ಯಶ್ ಜೊತೆಯಲ್ಲಿ ಇದ್ದರು. ಅವರೇ ಸ್ವತಃ ಯಶ್ ಉದನ್ನೆಯ ಕೂದಲಿಗೆ ಕತ್ತರಿ ಹಾಕಿದ್ದರು.

ಇದನ್ನೂ ಓದಿ: ಮುಂಬೈನಲ್ಲಿ ಯಶ್​, ರಾಧಿಕಾ ಪಂಡಿತ್ ಡಿನ್ನರ್: ಫೋಟೋ, ವಿಡಿಯೋಗೆ ಮುಗಿಬಿದ್ದ ಪಾಪರಾಜಿಗಳು

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಮಲಯಾಳಂನ ಗೀತು ಮೋಹನ್​ ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೆ ಹಿಂದಿಯ ರಾಮಾಯಣ ಸಿನಿಮಾದಲ್ಲು ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಇದ್ದಾರೆ. ಯಶ್ ಅವರದ್ದು ರಾವಣನ ಪಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.