
ಕಿಚ್ಚ ಸುದೀಪ್ ಹೇಳಿಕೆ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಿರುಗೇಟು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸುದೀಪ್ ಅವರು ಯಾರ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ್ದರು. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ ಮಾತು ಎಂದು ಭಾವಿಸಿದ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದ್ದರು. ಇದಕ್ಕೆ ವಿಜಯಲಕ್ಷ್ಮೀ ಅವರು ತಿರುಗೇಟು ನೀಡಿದ್ದಾರೆ. ಈ ಬೆನ್ನಲ್ಲೇ ಸುದೀಪ್ ಹಾಗೂ ವಿಜಯಲಕ್ಷ್ಮೀ ಅವರ ಹಳೆಯ ಫೋಟೋ ಹಾಗೂ ಸುದೀಪ್ ಹಳೆಯ ಹೇಳಿಕೆ ವೈರಲ್ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ ವೇಳೆ ಮಾತನಾಡಿದ್ದ ಸುದೀಪ್, ‘ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಈ ವೇಳೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ’ ಎಂದು ಹೇಳಿದ್ದರು. ‘ದರ್ಶನ್ ಫ್ಯಾನ್ಸ್ ಮಾರ್ಕ್ ಚಿತ್ರವನ್ನು ಹಾಳು ಮಾಡಲು ಸನ್ನದ್ಧರಾಗಿದ್ದಾರೆ’ ಎಂಬರ್ಥದಲ್ಲಿ ಇದನ್ನು ಕಲ್ಪಿಸಿಕೊಳ್ಳಲಾಯಿತು. ಇದಕ್ಕೆ ವಿಜಯಲಕ್ಷ್ಮೀ ಅವರು ಕೌಂಟರ್ ಕೊಟ್ಟಿದ್ದಾರೆ. ‘ದರ್ಶನ್ ಇಲ್ಲದ ಕಾರಣಕ್ಕೆ ಸುದೀಪ್ ಈ ರೀತಿ ಮಾತನಾಡುತ್ತಿದ್ದಾರೆ’ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.
ವಿಜಯಲಕ್ಷ್ಮೀ ಹೇಳಿಕೆ ಬೆನ್ನಲ್ಲೇ, ಸುದೀಪ್ ಹಾಗೂ ವಿಜಯಲಕ್ಷ್ಮೀ ಅವರು ಸುದ್ದಿಗೋಷ್ಠಿಯಲ್ಲಿ ಒಟ್ಟಾಗಿ ಕುಳಿತಿರೋ ಫೋಟೋನ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಕೃತಜ್ಞತೆ ಮುಖ್ಯ ಎಂಬರ್ಥದಲ್ಲಿ ಪೋಸ್ಟ್ಗಳನ್ನು ಹಾಕಲಾಗುತ್ತಿದೆ. ದರ್ಶನ್ ಅವರಿಗೆ 2013ರಲ್ಲ ‘ಬೃಂದಾವನ’ ಚಿತ್ರದ ಶೂಟಿಂಗ್ ವೇಳೆ ಗಾಯವಾಗಿತ್ತು. ಆಗ ಆಸ್ಪತ್ರೆಯಲ್ಲಿದ್ದಾಗ ಸುದೀಪ್ ಅವರು ಈ ಕುಟುಂಬದ ಬೆಂಬಲಕ್ಕೆ ನಿಂತಿದ್ದರು ಎನ್ನಲಾಗಿದೆ. ದರ್ಶನ್ ಆರಾಮಾಗಿದ್ದಾರೆ ಎಂದು ಹೇಳಲು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ವಿಜಯಲಕ್ಷ್ಮೀ ಜೊತೆ ಭಾಗಿ ಆಗಿದ್ದರು ಎನ್ನಲಾಗಿದೆ. ಆ ಸಂದರ್ಭದ ಫೋಟೋ ಇದು ಎನ್ನಲಾಗಿದೆ.
Gratitude is more important in life, when u loose it, your value comes down 🙂#MarkTheFilm #KicchaSudeep#darshan #DBoss #BBK12
#DevilTheMovie pic.twitter.com/SEmE1Pi0Kx— ❤️ (@itzme_liki) December 21, 2025
ದರ್ಶನ್ ಅವರು ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದರು. ಈ ಹಲ್ಲೆ ಬಳಿಕ ವಿಜಯಲಕ್ಷ್ಮೀ ದರ್ಶನ್ ವಿರುದ್ಧ ಕೇಸ್ ಹಾಕಿದ್ದರು. ಈ ವೇಳೆ ವಿಜಯಲಕ್ಷ್ಮೀ ಅವರು ಸುದೀಪ್ ಅವರಿಂದ ಬೆಂಬಲ ಕೇಳಿದ್ದರೆ ಎಂಬ ಪ್ರಶ್ನೆ ಮೂಡಿತ್ತು. ಈ ಮೊದಲು ಮಾಧ್ಯಮದ ಜೊತೆ ಮಾತನಾಡಿದ್ದ ಸುದೀಪ್, ‘ಯಾರೋ ಒಬ್ಬರು ಬಂದು ಅವರು ನಂಗೆ ಹೊಡೀತಾ ಇದಾರೆ ಎಂದು ಸಪೋರ್ಟ್ ಕೇಳ್ತಾರೆ. ಆ ವ್ಯಕ್ತಿ ಸಪೋರ್ಟ್ ಮಾಡ್ತಾನೆ. ಆದರೆ, ಹೊಡೆದಾಡಿಕೊಂಡವರು ಒಂದಾಗ್ತಾರೆ. ಸಪೋರ್ಟ್ ಮಾಡಿದವನು ಗೂಬೆ ತರ ಕಾಣ್ತಾರೆ’ ಎಂದು ಹೇಳಿದ್ದರು. ಇದು ವಿಜಯಲಕ್ಷ್ಮೀ-ದರ್ಶನ್ ಬಗ್ಗೆ ಹೇಳಿದ ಮಾತು ಎಂದು ಊಹಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.