AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂಬತ್ತು ವರ್ಷಗಳ ಬಳಿಕ ಅಮೂಲ್ಯ ಕಮ್​​ಬ್ಯಾಕ್: ನಾಯಕ ಯಾರು?

Amulya re entry: ನಟಿ ಅಮೂಲ್ಯ 2017 ರಲ್ಲಿ ಬಿಡುಗಡೆ ಆಗಿದ್ದ ಗಣೇಶ್ ನಟನೆಯ ‘ಮುಗುಳು ನಗೆ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದೇ ಕೊನೆ ಅದಾದ ಬಳಿಕ ಇನ್ಯಾವ ಸಿನಿಮಾನಲ್ಲಿಯೂ ನಟಿಸಿರಲಿಲ್ಲ. ಇದೀಗ ಒಂಬತ್ತು ವರ್ಷಗಳ ಬಳಿಕ ಅಮೂಲ್ಯ ಮತ್ತೆ ಚಿತ್ರರಂಗಕ್ಕೆ ನಾಯಕಿಯಾಗಿ ಮರು ಎಂಟ್ರಿ ಕೊಟ್ಟಿದ್ದಾರೆ. ಅಷ್ಟಕ್ಕೂ ಅಮೂಲ್ಯಗೆ ನಾಯಕ ಯಾರು?

ಒಂಬತ್ತು ವರ್ಷಗಳ ಬಳಿಕ ಅಮೂಲ್ಯ ಕಮ್​​ಬ್ಯಾಕ್: ನಾಯಕ ಯಾರು?
Amulya
ಮಂಜುನಾಥ ಸಿ.
|

Updated on: Jan 15, 2026 | 3:21 PM

Share

ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಅಮೂಲ್ಯ (Amulya) ನಾಯಕಿಯಾಗಿ ಸಖತ್ ಸದ್ದು ಮಾಡಿದ್ದವರು. ಆದರೆ ಹಲವು ನಾಯಕಿಯರಂತೆ ಮದುವೆ, ಮಕ್ಕಳ ಬಳಿಕ ಚಿತ್ರರಂಗದಿಂದ ದೂರಾದರು. ಇದೀಗ ನಟಿ ಅಮೂಲ್ಯ ಬರೋಬ್ಬರಿ ಎಂಟು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ತಮ್ಮಂತೆ ಕ್ಯೂಟ್ ಆದ ಹೆಸರಿರುವ ಸಿನಿಮಾ ಮೂಲಕ. ಅಷ್ಟಕ್ಕೂ ಕ್ಯೂಟ್ ನಟಿ ಅಮೂಲ್ಯಗೆ ನಾಯಕ ಯಾರು?

‘ಪೀಕಬೂ’ ಹೆಸರಿನ ಸಿನಿಮಾನಲ್ಲಿ ಅಮೂಲ್ಯ ನಟಿಸುತ್ತಿದ್ದು, ಈ ಸಿನಿಮಾವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಲುಕ್ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ಅಮೂಲ್ಯ ಜೊತೆಗೆ ನಾಯಕನ ಲುಕ್​​ನ ಪರಿಚಯವನ್ನೂ ಸಹ ಮಾಡಿಕೊಡಲಾಗಿದೆ. ನಟಿ ಅಮೂಲ್ಯಾಗೆ ಜೋಡಿಯಾಗಿ ನಟ ಶ್ರೀರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ನಟಿಸಿ ಅನುಭವ ಇರುವ ಶ್ರೀರಾಮ್ ‘ಪೀಕಬೂ’ ಸಿನಿಮಾ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

2008 ರಲ್ಲಿ “ರಿಷಭಪ್ರಿಯ ಎಂದ ಕಿರುಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶ್ರೀರಾಮ್, ಬಳಿಕ ಧಾರಾವಾಹಿಯಲ್ಲಿ ಬ್ಯುಸಿಯಾದರು. ನಂತರ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಮೂಲಕ ನಾಯಕನಾಗಿ ಗಮನ ಸೆಳೆದರು. ‘ಗಜಾನನ ಅಂಡ್ ಗ್ಯಾಂಗ್’, ‘ಹೊಂದಿಸಿ ಬರೆಯಿರಿ’ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಅಮೂಲ್ಯ ಜೊತೆ ‘ಪೀಕಬೂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ಸಖತ್ ಕ್ಯೂಟ್ ಆಗಿದ್ದು, ಸಿನಿಮಾದ ಕತೆಯೂ ಅಷ್ಟೆ ಕ್ಯೂಟ್ ಆಗಿರುವ ನಿರೀಕ್ಷೆ ಪ್ರೇಕ್ಷಕರದ್ದು.

ಇದನ್ನೂ ಓದಿ:‘ಧುರಂಧರ್ 2’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ?

ಪಿಕಬೂ ಜನಪ್ರಿಯ ಕಾರ್ಟೂನ್ ಕ್ಯಾರೆಕ್ಟರ್ ಆಗಿದೆ. ಮಕ್ಕಳಿಗೆ ಒಮ್ಮೊಮ್ಮೆ ಮುದ್ದಾಗಿ ಪಿಕಬೂ ಎಂದು ಸಹ ಕರೆಯುವುದುಂಟು. ಇದೇ ಹೆಸರನ್ನು ಸಿನಿಮಾಕ್ಕೆ ಇಡಲಾಗಿದೆ. ಸದ್ಯ ‘ಪೀಕಬೂ’ ಚಿತ್ರದ ಅರ್ಧದಷ್ಟು ಭಾಗ ಶೂಟಿಂಗ್ ಮುಗಿಸಿದೆ. ಚಿತ್ರಕ್ಕೆ ಸುರೇಶ್‌ ಬಾಬು ಸಿನಿಮಾಟೋಗ್ರಾಫರ್‌ ಆಗಿದ್ದು. ವೀರ್‌ ಸಮರ್ಥ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರಾವಣಿ ಸುಬ್ರಮಣ್ಯ’ ಸಿನಿಮಾದ ನಂತ್ರ ಮತ್ತೆ ಅಮೂಲ್ಯ ಅವರಿಗೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ ನಿರ್ದೇಶಕ ಮಂಜು ಸ್ವರಾಜ್‌. ಶ್ರೀ ಕೆಂಚಾಂಬಾ ಫಿಲಂಸ್‌ ಅಡಿಯಲ್ಲಿ ಗಣೇಶ್‌ ಕೆಂಚಾಂಬಾ ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ನಟಿ ಅಮೂಲ್ಯ ಕೊನೆಯದಾಗಿ ಗಣೇಶ್ ನಟಿಸಿದ್ದ ‘ಮುಗುಳು ನಗೆ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಬಳಿಕ ಇನ್ಯಾವ ಸಿನಿಮಾನಲ್ಲಿಯೂ ಅಮೂಲ್ಯ ಕಾಣಿಸಿಕೊಂಡಿಲ್ಲ. ಇದೀಗ ಒಂಬತ್ತು ವರ್ಷಗಳ ಬಳಿಕ ಮತ್ತೆ ಚಿತ್ರರಂಗದಲ್ಲಿ ನಾಯಕಿಯಾಗಿ ಮರು ಎಂಟ್ರಿ ನೀಡುತ್ತಿದ್ದಾರೆ ಅಮೂಲ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ